Friday, April 18, 2025

Latest Posts

ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಿದ್ದರೆ ಹೀಗೆ ಮಾಡಿ..

- Advertisement -

ಸುಂದರವಾದ ತ್ವಚೆ ಪಡೆಯಲು ಹಲವರು ಹಲವು ಕಸರತ್ತು ಮಾಡುತ್ತಾರೆ. ಅಂಥವರಿಗಾಗಿ ನಾವು ಹಲವಾರು ಟಿಪ್ಸ್ ನೀಡಿದ್ದೇವೆ. ಇಂದು ಕೂಡ, ಮೂಗಿನ ಮೇಲೆ , ಕೆನ್ನೆಯ ಮೇಲಾಗುವ ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ನಿಂದ ಮುಕ್ತಿ ಬೇಕಂದ್ರೆ ಏನು ಮಾಡಬೇಕು ಅಂತಾ ಹೇಳಲಿದ್ದೇವೆ..

ಮೊದಲನೇಯ ಟಿಪ್ಸ್, ಓಟ್ಸ್ ಮತ್ತು ರೋಸ್ ವಾಟರ್ ಫೇಸ್‌ ಪ್ಯಾಕ್. ಓಟ್ಸ್‌ನ್ನು ಪುಡಿ ಮಾಡಿಕೊಂಡು, ಇದಕ್ಕೆ ಒಂದು ಸ್ಪೂನ್ ರೋಸ್ ವಾಟರ್ ಮಿಕ್ಸ್ ಮಾಡಿ. ಮತ್ತು ಫೇಸ್‌ ಪ್ಯಾಕ್ ಹಾಕಿ. 20 ನಿಮಿಷ ಬಿಟ್ಟು ಮುಖ ತೊಳೆಯಿರಿ. ಇದನ್ನ ನೀವು ಪ್ರತಿದಿನ ಮಾಡಿದ್ರೂ ಉತ್ತಮ.

ಎರಡನೇಯ ಟಿಪ್ಸ್, ಸ್ಟೀಮಿಂಗ್ ತೆಗೆದುಕೊಳ್ಳುವುದು. ನೀವು ಬಿಸಿ ನೀರಿನಿಂದ ಸ್ಟೀಮ್ ತೆಗೆದುಕೊಳ್ಳುವಾಗ, ಅದರಲ್ಲಿ ಎರಡು ಹೋಳು ನಿಂಬೆಹಣ್ಣು ಅಥವಾ ಒಂದು ಸ್ಪೂನ್ ಶ್ರೀಗಂಧದ ಪುಡಿಯನ್ನು ಮಿಕ್ಸ್ ಮಾಡಿ. ಹೀಗೆ ಮಾಡಿ ಸ್ಟೀಮ್ ತೆಗೆದುಕೊಳ್ಳುವುದರಿಂದ ಸ್ಕಿನ್ ಚೆನ್ನಾಗಿರತ್ತೆ. ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್ ಕೂಡ ಹೋಗತ್ತೆ. ಆದ್ರೆ ವಾರಕ್ಕೊಮ್ಮೆ ಸ್ಟೀಮ್ ತೊಕೊಂಡ್ರೆ ಸಾಕು.

ಮೂರನೇಯ ಟಿಪ್ಸ್ ಯಷ್ಠಿಮಧು ಫೇಸ್‌ಪ್ಯಾಕ್. ಒಂದು ಸ್ಪೂನ್ ಯಷ್ಠಿಮಧು ಪುಡಿ ಮತ್ತು ಒಂದು ಸ್ಪೂನ್ ಜೇನುತುಪ್ಪ ಮತ್ತು ಒಂದು ಸ್ಪೂನ್ ರೋಸ್ ವಾಟರ್ ಮಿಕ್ಸ್ ಮಾಡಿ, ವಾರಕ್ಕೊಮ್ಮೆ ಫೇಸ್‌ಪ್ಯಾಕ್ ಹಾಕಿದ್ರೆ ಉತ್ತಮ.

ನಾಲ್ಕನೇಯ ಟಿಪ್ಸ್, ಒಂದು ಸ್ಪೂನ್ ಮುಲ್ತಾನಿ ಮಿಟ್ಟಿ, ಅರ್ಧ ಸ್ಪೂನ್ ಅರಿಶಿನ, ಅರ್ಧ ಸ್ಪೂನ್ ಬೇವಿನ ಎಲೆಯ ಪುಡಿ, ಒಂದು ಸ್ಪೂನ್ ನೀರು ಮತ್ತು ಹಾಲು, ಎರಡರಿಂದ ಮೂರು ಡ್ರಾಪ್ಸ್ ನಿಂಬೆರಸ, ಇವಿಷ್ಟನ್ನ ಬೆರೆಸಿ, ತಕ್ಷಣ ಫೇಸ್‌ಪ್ಯಾಕ್ ಹಾಕಿ. ಅದು ಒಗಿದ ಬಳಸಿ ಮುಖ ತೊಳೆಯಿರಿ. ಇದರಿಂದಲೂ ಬ್ಲ್ಯಾಕ್ ಹೆಡ್ಸ್ ಮತ್ತು ವೈಟ್ ಹೆಡ್ಸ್ ಹೋಗುತ್ತದೆ.

Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 2

ಗಾಢವಾಗಿ ನಿದ್ದೆ ಮಾಡಲು ರಾತ್ರಿ ಮಲಗುವಾಗ ಇದನ್ನು ಕುಡಿಯಿರಿ..

ಬಿಸ್ಕೇಟ್ ಬಳಸಿ ಹಲ್ವಾನೂ ತಯಾರಿಸಬಹುದು ನೋಡಿ..

- Advertisement -

Latest Posts

Don't Miss