ಈಗಾಗಲೇ ನಾವು ಕೂದಲು ಉದುರುವ ಸಮಸ್ಯೆ ಬಗ್ಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಅಲ್ಲದೇ, ಕೂದಲು ಉದುರುವ ಸಮಸ್ಯೆ ಯಾಕೆ ಬರತ್ತೆ, ಅದಕ್ಕೆ ಕಾರಣವೇನು ಅಂತಲೂ ಹೇಳಿದ್ದೇವೆ. ಇಂದು ಕೂಡ ಕೂದಲು ಉದುರುವ ಸಮಸ್ಯೆಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಅಂತಾ ಹೇಳಲಿದ್ದೇವೆ..
ಮೊದಲನೇಯ ಟಿಪ್ಸ್ ಈರುಳ್ಳಿ ಮತ್ತು ಕರಿಬೇವಿನ ಎಲೆಯ ಹೇರ್ ಮಾಸ್ಕ್. ಈರುಳ್ಳಿಯನ್ನು ಕತ್ತರಿಸಿ, ಕೊಂಚ ನೀರಿನೊಂದಿಗೆ ಗ್ರೈಂಡ್ ಮಾಡಿ. ಕರಿಬೇವನ್ನ ಸಹ ಪೇಸ್ಟ್ ಮಾಡಿ. ಎರಡನ್ನೂ ಮಿಕ್ಸ್ ಮಾಡಿ ಹೇರ್ ಮಾಸ್ಕ್ ಹಾಕಿ, ಒಂದು ಗಂಟೆ ಬಳಿಕ ಹೇರ್ ವಾಶ್ ಮಾಡಿ.
ಒಂದು ಸ್ಪೂನ್ ಮೆಂತ್ಯೆ ಕಾಳನ್ನ ನೀರಿನಲ್ಲಿ ನೆನೆಸಿಡಿ. ಮರುದಿನ್ ಬೆಳಿಗ್ಗೆ ಅದೇ ನೀರಿನೊಂದಿಗೆ ಮೆಂತ್ಯೆಯನ್ನ ಕುದಿಸಿ. ಈ ಮಿಶ್ರಣ ತಣಿದ ಮೇಲೆ ಒಂದು ದಾಸವಾಳದ ಹೂವಿನೊಂದಿಗೆ ಇದನ್ನ ಪೇಸ್ಟ್ ಮಾಡಿ. ಈ ಹೇರ್ ಮಾಸ್ಕ್ ಅಪ್ಲೈ ಮಾಡಿದ್ರೆ, ಕೂದಲು ಉದುರುವ ಸಮಸ್ಯೆ ಕಡಿಮೆಯಾಗತ್ತೆ.
2 ಸ್ಪೂನ್ ಆ್ಯಲೋವೆರಾ ಜೆಲ್, 3 ಟೇಬಲ್ ಸ್ಪೂನ್ ಆಲಿವ್ ಎಣ್ಣೆ, ಇವೆರಡನ್ನೂ ಮಿಕ್ಸ್ ಮಾಡಿ, ತೆಲೆಗ ಮಸಾಜ್ ಮಾಡಿ ಅರ್ಧ ಗಂಟೆ ಅಥವಾ ಒಂದು ಗಂಟೆ ಬಳಿಕ ಹೇರ್ ವಾಶ್ ಮಾಡಿ. ಇವಿಷ್ಟು ಟಿಪ್ಸ್ನಲ್ಲಿ ಯಾವುದಾದರೂ ಒಂದು ಟಿಪ್ಸ್‌ನ್ನ ವಾರಕ್ಕೆ ಎರಡು ಬಾರಿ ಅಪ್ಲೈ ಮಾಡಿ ನೋಡಿ. ಇದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆಯಾಗತ್ತೆ.
ಮುಲ್ತಾನಿ ಮಿಟ್ಟಿಯನ್ನ ಹೇಗೆಲ್ಲಾ ಬಳಸಬಹುದು..? ಇದರಿಂದಾಗುವ ಲಾಭವೇನು..?