Wednesday, April 2, 2025

Latest Posts

ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?

- Advertisement -

ಮಕ್ಕಳಿರುವಾಗಲೇ ಸರಿಯಾದ ಆರೋಗ್ಯ ಕಾಳಜಿ ಮಾಡಿದ್ದಲ್ಲಿ, ಅವರ ಬೆಳವಣಿಗೆ ಉತ್ತಮವಾಗಿರುತ್ತದೆ. ಆದರೆ ಕೆಲವರಿಗೆ ಮಕ್ಕಳಲ್ಲಿ ಯಾವ ಆರೋಗ್ಯ ಸಮಸ್ಯೆ ಇದೆ ಅಂತಾ ಗೊತ್ತಾಗಲ್ಲಾ. ಅದರಲ್ಲೂ ಮಕ್ಕಳಲ್ಲಿ ಇರಲೇಬೇಕಾದ ಮುಖ್ಯವಾದ ಆರೋಗ್ಯ ಅಂದ್ರೆ ಮೂಳೆ ಮತ್ತು ಹಲ್ಲಿನ ಆರೋಗ್ಯ ಸರಿಯಾಗಿರುವುದು. ಇವೆರಡು ಸರಿಯಾಗಿ ಇರಬೇಕು ಅಂದ್ರೆ, ದೇಹಕ್ಕೆ ಬೇಕಾದಷ್ಟು ಕ್ಯಾಲ್ಶಿಯಂ ಇರಬೇಕು. ಹಾಗಾದ್ರೆ ಕ್ಯಾಲ್ಶಿಯಂ ಕಡಿಮೆ ಇದೆ ಅಂತಾ ಹೇಗೆ ಗೊತ್ತಾಗತ್ತೆ..? ದೇಹದಲ್ಲಿ ಕ್ಯಾಲ್ಶಿಯಂ ಕಡಿಮೆ ಆದ್ರೆ, ಹೇಗೆ ಗೊತ್ತಾಗತ್ತೆ,..? ಇದಕ್ಕೆ ಪರಿಹಾರ ಹೇಗೆ ಕಂಡುಕೊಳ್ಳಬೇಕು..? ಇದೆಲ್ಲದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..

ಮೊದಲನೇಯದಾಗಿ ಮಗುವಿನಲ್ಲಿ ಕ್ಯಾಲ್ಶಿಯಂ ಕಡಿಮೆ ಇರಲು ಕಾರಣವೇನು ಅಂದ್ರೆ, ಹುಟ್ಟುವಾಗ ಆಕ್ಸಿಜನ್ ಪ್ರಮಾಣ ಸರಿಯಾಗಿ ಸಿಗಲಿಲ್ಲವೆಂದಲ್ಲಿ, ಕ್ಯಾಲ್ಶಿಯಂ ಕಡಿಮೆಯಾಗುತ್ತದೆ. ತಾಯಿ ಗರ್ಭಿಣಿಯಾದ ಸಂದರ್ಭದಲ್ಲಿ ಆಕೆಗೆ ಬಿಪಿ, ಶುಗರ್ ಇದ್ದರೆ, ಅಥವಾ ಆಕೆ ಸರಿಯಾಗಿ ಆರೋಗ್ಯಕರ ಆಹಾರ ಸೇವಿಸದಿದ್ದಲ್ಲಿ, ಮಗುವಿನ ದೇಹದಲ್ಲಿ ಕ್ಯಾಲ್ಶಿಯಂ ಕಡಿಮೆಯಾಗುತ್ತದೆ. ಅಲ್ಲದೇ ಮಗುವಿನ ದೇಹದಲ್ಲಿ ವಿಟಾಮಿನ್‌ ಡಿ ಕೊರತೆ ಇದ್ದಲ್ಲಿ, ದೇಹದಲ್ಲಿ ಕ್ಯಾಲ್ಶಿಯಂ ಸತ್ವ ಕಡಿಮೆ ಇರುತ್ತದೆ.

ಮಗುವಿನಲ್ಲಿ ಕ್ಯಾಲ್ಶಿಯಂ ಅಂಶ ಕಡಿಮೆ ಇದೆ ಅಂತಾದಲ್ಲಿ, ಅದಕ್ಕೆ ಪದೇ ಪದೇ ಕೈ ಕಾಲು ನೋವುತ್ತದೆ. ಹಲ್ಲಿನ ಆರೋಗ್ಯ ಸರಿಯಾಗಿ ಇರೋದಿಲ್ಲಾ. ಇನ್ನು ಇದಕ್ಕೆ ಪರಿಹಾರವೇನು ಅಂತಾ ಹೇಳೋದಾದ್ರೆ, ಮಕ್ಕಳಿಗೆ ಒಂದುವರೆ ವರ್ಷದತನಕವಾದ್ರೂ ಎದೆ ಹಾಲು ಉಣಿಸಬೇಕು. ನೀವು ಎರಡು ವರ್ಷದ ತನಕ ಎದೆ ಹಾಲು ಉಣಿಸಬಹುದು. ಅದೇ 3 ವರ್ಷದ ನಂತರವೂ ಎದೆ ಹಾಲು ಉಣಿಸಿದ್ರೆ, ಮಕ್ಕಳ ಹಲ್ಲು ಹುಳುಕು ಹಿಡಿಯತ್ತೆ. ಹಾಗಾಗಿ 2 ವರ್ಷದವರೆಗೆ ಎದೆ ಹಾಲು ಉಣಿಸಬಹುದು. ಮತ್ತು ಯಾವ ಮಗು ತಾಯಿಯ ಎದೆ ಹಾಲು ಕುಡಿಯದೇ, ಬೆಳೆಯುತ್ತದೆಯೋ, ಅದಕ್ಕೆ ಹಲವು ರೀತಿಯ ರೋಗಗಳು ಬರುವ ಸಾಧ್ಯತೆ ಇರುತ್ತದೆ. ಅಂಥ ಮಗು ಎಂದಿಗೂ ಶಕ್ತಿವಂತ ಮಗುವಾಗಲು ಸಾಧ್ಯವಿಲ್ಲ.

ಮೇಥಿ ಮಟರ್ ಮಲಾಯ್ ರೆಸಿಪಿ..

ಮಗುವಿಗೆ 2 ವರ್ಷ ತುಂಬಿನ ಬಳಿಕ, ಹಸುವಿನ ಹಾಲನ್ನು ಕುಡಿಯಲು ಕೊಡಿ. ಇದರಿಂದಲೇ ಮಗುವಿಗೆ ಸರಿಾದ ಕ್ಯಾಲ್ಶಿಯಂ ಸಿಗುತ್ತದೆ. ಪಾಲಕ್ ಸೊಪ್ಪಿನ ಪದಾರ್ಥ, ಮೆಂತ್ಯೆ ಸೊಪ್ಪಿನ ಪದಾರ್ಥ, ಶೇಂಗಾ ಚಿಕ್ಕಿ, ಇವೆಲ್ಲ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚು ಮಾಡಿ, ಮೂಳೆ ಗಟ್ಟಿ ಮಾಡುತ್ತದೆ. ಇವನ್ನೆಲ್ಲ ಮಕ್ಕಳಿಗೆ ತಿನ್ನಲು ಕೊಡಿ.

- Advertisement -

Latest Posts

Don't Miss