Tuesday, October 22, 2024

Latest Posts

ಜೀವನದ ಬಗ್ಗೆ ಹೆಚ್ಚು ಯೋಚನೆ ಮಾಡೋದನ್ನ ನಿಲ್ಲಿಸೋದು ಹೇಗೆ..?

- Advertisement -

ನಮ್ಮಲ್ಲಿ 90% ಜನ ತಮ್ಮ ಭವಿಷ್ಯದ ಬಗ್ಗೆ ಅಥವಾ ಕಳೆದು ಹೋದ ದಿನಗಳ ಬಗ್ಗೆ, ಅಥವಾ ತಮ್ಮಿಂದ ಏನಾದ್ರೂ ಸಣ್ಣ ಪುಟ್ಟ ತಪ್ಪಾದ್ರೂ ಅದರ ಬಗ್ಗೆ ಯೋಚಿಸುತ್ತಾರೆ. ಎಷ್ಟು ಯೋಚಿಸುತ್ತಾರೆಂದರೆ, ಅದರಿಂದ ಮಾಡುವ ಕೆಲಸವನ್ನು ಬದಿಗಿಟ್ಟು, ಸಮಯ ವ್ಯರ್ಥ ಮಾಡುವಷ್ಟು. ಹಾಗಾಗಿ ನಾವಿಂದು ಜೀವನದ ಬಗ್ಗೆ ಹೆಚ್ಚು ಯೋಚಿಸೋದನ್ನ ನಿಲ್ಲಿಸೋದು ಹೇಗೆ ಅನ್ನೋ ಬಗ್ಗೆ ವಿವರಿಸಲಿದ್ದೇವೆ.

ಸೋಪ್- ಬಾಡಿ ವಾಶ್ ಬಳಸದೇ, ನೀವು ನಿಮ್ಮ ಬಾಡಿ ವೈಟ್ನಿಂಗ್ ಮಾಡಬಹುದು ಗೊತ್ತಾ..?

ಮೊದಲನೇಯ ಪರಿಹಾರ. ನೀವು ನಿಯತ್ತಾಗಿದ್ರೆ, ನೀವು ಹೆಚ್ಚು ಯೋಚನೆ ಮಾಡುವ ಪರಿಸ್ಥಿತಿ ಬರುವುದೇ ಇಲ್ಲ. ಉದಾಹರಣೆಗೆ ನಿಮ್ಮ ಬಾಸ್ ನಿಮ್ಮ ಬಳಿ ಶನಿವಾರದ ದಿನ, ನಿನ್ನ ಬಳಿ ಏನೋ ಮಾತನಾಡಬೇಕು. ಆದ್ರೆ ನಾವು ಸೋಮವಾರದ ದಿನ ಅದನ್ನು ಮಾತನಾಡೋಣ ಎಂದಿರುತ್ತಾರೆ. ನೀವು ಶನಿವಾರದಿಂದ ಸೋಮವಾರ ಆಫೀಸಿಗೆ ಹೋಗುವವರೆಗೂ ಆ ಬಗ್ಗೆಯೇ ಯೋಚಿಸುತ್ತಿರುತ್ತೀರಿ. ನೀವು ನಿಯತ್ತಾಗಿದ್ದರೆ, ನಿಮ್ಮ ಯೋಚನೆ ಲೈಟ್ ಆಗಿರುತ್ತದೆ. ಅದೇ ಏನಾದರೂ ತಪ್ಪು ಕೆಲಸ ಮಾಡಿದ್ರೆ, ಅದೇ ಚಿಂತೆ ಕಾಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ನಿಯತ್ತು ಬಿಡಬೇಡಿ.

ನಿಮ್ಮ ಗೆಳೆಯ/ಗೆಳತಿ ಒಳ್ಳೆಯವರಾ ಇಲ್ಲವಾ ಅಂತಾ ತಿಳಿಯೋದು ಹೇಗೆ..?

ಎರಡನೇಯ ಪರಿಹಾರ, ಡೋಂಟ್‌ ಕೇರ್ ಅನ್ನೋ ಸ್ವಭಾವವನ್ನ ಅಳವಡಿಸಿಕೊಳ್ಳಿ. ಕೆಲವರಿಗೆ ಇದು ಕಷ್ಟದ ಕೆಲಸ. ಯಾಕಂದ್ರೆ ಅವರು ಎಲ್ಲರ ಕಷ್ಟ, ದುಃಖ, ನೋವುಗಳಿಗೂ ಸ್ಪಂದಿಸುತ್ತಾರೆ. ವಿರೋಧಿಗಳು ಕೂಡ ಕಷ್ಟದಲ್ಲಿದ್ರೆ, ಬೇಸರವಾಗುವವರೂ ಇದ್ದಾರೆ. ಆದ್ರೆ ನೀವು ಆದಷ್ಟು ಬೇಗ ಈ ಸ್ವಭಾವವನ್ನು ಬಿಡಬೇಕು. ಜೀವನದಲ್ಲಿ ಬಂದಿದ್ದು ಬರ್ಲಿ ನಾನು ಎದುರಿಸುತ್ತೇನೆ. ಹೆಚ್ಚಂದ್ರೆ ಏನಾಗತ್ತೆ, ಜೀವಾ ಏನು ಹೋಗಲ್ವಲಾ ಅನ್ನೋ ಯೋಚನೆ ಮಾಡೋದನ್ನ ಕಲಿಯಿರಿ. ಹಾಗಂತ ನಿಮ್ಮ ಸಂಬಂಧ ಹಾಳಾಗುವಷ್ಟು ಡೋಂಟ್ ಕೇರ್ ಅನ್ನಬೇಡಿ. ಸಾಧ್ಯವಾದ್ರೆ ನಿಮ್ಮ ಸಮಸ್ಯೆಗೆ ಪರಿಹಾರ ಏನೆಂದು ಯೋಚಿಸಿ, ಅದನ್ನು ಬಿಟ್ಟು, ಅದರ ಬಗ್ಗೆಯೇ ಬೇಡವಾದ ಯೋಚನೆ ಮಾಡಿದ್ರೆ, ನಿಮ್ಮ ಸಮಯ ವ್ಯರ್ಥವಾಗುತ್ತದೆ ಅಷ್ಟೇ.

ಮೂರನೇಯ ಪರಿಹಾರ, ನೀವು ಹೆಚ್ಚು ಯೋಚಿಸಬಾರದು ಅಂತಿದ್ರೆ, ಅದಕ್ಕಿರುವ ಉತ್ತಮ ಪರಿಹಾರ ಅಂದ್ರೆ, ನೀವು ಯಾವಾಗಲೂ ಬ್ಯುಸಿಯಾಗಿರುವುದು. ಯಾರೇ ಆಗಲಿ, ಕೆಟ್ಟ ಯೋಚನೆ, ಕಳೆದು ಹೋದ ಘಟನೆಗಳ ಬಗ್ಗೆ ಯೋಚನೆ, ಮನೆಯಲ್ಲಿ ನಡೆದ ಗಲಾಟೆಗಳ ಬಗ್ಗೆ ಯೋಚನೆ ಮಾಡಬಾರದು ಅಂದ್ರೆ, ನೀವು ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಯಾಗಿರಬೇಕು. ನಿಮ್ಮ ಆಫೀಸು ಕೆಲಸ, ಮನೆ ಕೆಲಸ, ಹೊಸ ಹೊಸ ವಿದ್ಯೆ ಕಲಿಯುವ ಕೆಲಸ, ಮ್ಯೂಸಿಕ್ ಕೇಳೋದು, ಟಿವಿ ನೋಡೋದು, ಗೇಮ್ಸ್ ಆಡೋದು, ಮನೆ ಮಂದಿ ಜೊತೆ ಹರಟೆ ಹೊಡಿಯೋದು, ಅಡುಗೆ ಮಾಡೋದು, ಹೀಗೆ ನಿಮಗಿಷ್ಟವಾದ ಕೆಲಸದಲ್ಲಿ ಬ್ಯುಸಿಯಾಗಿರಿ. ನಿಮಗೆ ಬೇರೆ ಯೋಚನೆಗಳನ್ನ ಮಾಡೋಕ್ಕೆ ಟೈಮ್ ಸಿಗದಷ್ಟು ಬ್ಯುಸಿಯಾಗಿರಿ. ಖುಷಿಯಾಗಿರಿ.

- Advertisement -

Latest Posts

Don't Miss