Wednesday, April 16, 2025

Latest Posts

ಕೋರ್ಟ್‌ ವಿಚಾರಣೆ ಬಳಿಕ ಸೋನು ಗೌಡ ಹೇಳಿದ್ದಿಷ್ಟು..

- Advertisement -

Bengaluru News: ಸೋನು ಶ್ರೀನಿವಾಸ್ ಗೌಡ, ಹೆಣ್ಣು ಮಗುವೊಂದನ್ನು ದತ್ತು ತೆಗೆದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ, ಕಾನೂನು ಪಾಲನೆ ಮಾಡದಿದ್ದಕ್ಕಾಗಿ, ಪೊಲೀಸರು ಆಕೆಯನ್ನು ಅರೆಸ್ಟ್ ಮಾಡಿದ್ದರು.

ಇದೀಗ ಕೋರ್ಟ್‌ಗೆ ಹಾಜರಾಗಿ ವಿಚಾರಣೆ ನಡೆಸಿದ್ದು, ಆಕೆಯನ್ನು ನಾಲ್ಕು ದಿನ ಬಂಧನದಲ್ಲಿರಿಸಲು ಕೋರ್ಟ್ ಆದೇಶಿಸಿದೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿರುವ ಸೋನು ಗೌಡ, ನಾನು ಓರ್ವ ಹೆಣ್ಣು ಮಗಳ ರಕ್ಷಣೆಗಾಗಿ, ಆಕೆಯನ್ನನು ದತ್ತು ತೆಗೆದುಕೊಂಡಿದ್ದೆ. ಈ ಬಗ್ಗೆ ಲೀಗಲ್ ಆಗಿ ವಿಚಾರಣೆ ನಡೆಯುತ್ತಿದೆ ಅಷ್ಟೇ. ಮತ್ತೇನೂ ತೊಂದರೆ ಇಲ್ಲ. ಆಕೆಯೂ ಸೇಫ್ ಆಗಿದ್ದಾಳೆ ಎಂದು ಸೋನುಗೌಡ ಹೇಳಿದ್ದಾಳೆ.

ಸೋನು ಶ್ರೀನಿವಾಸ್ ಗೌಡ 7 ವರ್ಷದ ಹುಡುಗಿಯನ್ನು ತಾನು ದತ್ತು ತೆಗೆದುಕೊಂಡಿದ್ದೇನೆ. ಇದಕ್ಕೆ ಮಾಡಬೇಕಾದ ಎಲ್ಲ ಪ್ರೊಸೆಸ್‌ ಮಾಡಿ ಮುಗಿಸಿ, ಈಕೆಯ ತಂದೆ ತಾಯಿಯ ಪರ್ಮಿಷನ್ನೊಂ‌ದಿಗೆ, ಈಕೆಯನ್ನು ದತ್ತು ತೆಗೆದುಕೊಂಡಿದ್ದೇನೆ ಎಂದಿದ್ದರು. ಅಲ್ಲದೇ, ಪ್ರತಿದಿನ ಆ ಬಾಲಕಿಯೊಂದಿಗೆ ವ್ಲಾಗ್ ಮಾಡಿ ಯುಟ್ಯೂಬ್, ಇನ್‌ಸ್ಟಾಗ್ರಾಮ್‌ಗೆ ಹಾಕುತ್ತಿದ್ದರು.

ಈ ವೇಳೆ ನಾನು ಆಕೆಗಾಗಿ ಇಷ್ಟು ಖರ್ಚು ಮಾಡುತ್ತಿದ್ದೇನೆ. ಇಂದು ನಾನು ಆಕೆಗೆ ಇದನ್ನು ಹೇಳಿಕೊಟ್ಟೆ. ಇದನ್ನನು ಕೊಡಿಸಿದೆ. ಈಕೆಯಿಂದ ನನಗೆ ಪಾಸಿಟಿವ್ ಕಾಮೆಂಟ್ಸ್ ಬರುತ್ತಿದೆ ಎಂದು ಹೇಳುತ್ತಿದರು. ಹೀಗಾಗಿ ಈಕೆ ಆ ಮಗುವಿನಿಂದ ಪ್ರಚಾರ ಗಿಟ್ಟಿಸಿಕೊಳ್ಳಲಷ್ಟೇ ಆಕೆಯನ್ನು ದತ್ತು ತೆಗೆದುಕೊಂಡಿದ್ದಾಳೆಂದು ದೂರು ದಾಖಲಾದ ಕಾರಣಕ್ಕೆ, ಸೋನುಗೌಡರನ್ನು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ದತ್ತು ತೆಗೆದುಕೊಳ್ಳುವ ಪ್ರೊಸೆಸ್ ಸರಿಯಾಗಿ ನಡೆದಿಲ್ಲವೆಂದು ಗೊತ್ತಾಗಿದ್ದು, ಈ ಕಾರಣಕ್ಕೆ ಈಕೆಯನ್ನು ಬಂಧಿಸಲಾಗಿತ್ತು.

ಮರಿತಿಬ್ಬೇಗೌಡ ಸೇರಿ ಬಿಜೆಪಿ, ಜೆಡಿಎಸ್‌ನ ಹಲವರು ಕಾಂಗ್ರೆಸ್‌ಗೆ ಸೇರ್ಪಡೆ

ಯಾವ ಮುಖ ಇಟ್ಟುಕೊಂಡು ನಾನೊಬ್ಬ ದಲಿತೋದ್ಧಾರಕ ಎನ್ನುತ್ತೀರಿ?: ಪ್ರಿಯಾಂಕ್ ವಿರುದ್ಧ ಪ್ರೀತಂ ವಾಗ್ದಾಳಿ

ಕೋಟ ಶ್ರೀನಿವಾಸ ಪೂಜಾರಿಗೆ 25 ಸಾವಿರ ರೂ. ಚುನಾವಣಾ ಠೇವಣಿ ನೀಡಿದ ಚುರುಮುರಿ ಅಂಗಡಿ ಮಾಲೀಕ

- Advertisement -

Latest Posts

Don't Miss