Saturday, July 27, 2024

Latest Posts

Sourav Ganguly : ಕೊರೊನಾ ಪಾಸಿಟಿವ್ ಕೋಲ್ಕತ್ತಾದಲ್ಲಿ ಆಸ್ಪತ್ರೆಗೆ ದಾಖಲು..!

- Advertisement -

ಕೋಲ್ಕತ್ತಾ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ (BCCI President Sourav Ganguly) ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಸೋಮವಾರ ರಾತ್ರಿ ಸೌರವ್ ಗಂಗೂಲಿ ಅವರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಅವರ ವರದಿ ಪಾಸಿಟಿವ್ ಬಂದಿದೆ. ಅವರನ್ನು ಕೋಲ್ಕತ್ತಾದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಹಿಂದೆ ಅವರ ಕುಟುಂಬ ಸದಸ್ಯರಿಗೆ ಕೆಲ ತಿಂಗಳ ಹಿಂದೆ ಕೊರೊನಾ ಸೋಂಕು ತಗುಲಿತ್ತು. ಈ ವರ್ಷದ ಆರಂಭದಲ್ಲಿ ಸೌರವ್ ಗಂಗೂಲಿ  ಅವರಿಗೆ ಹೃದಯಾಘಾತವಾಗಿತ್ತು, ನಂತರ ಅವರು ಕೆಲವು ದಿನಗಳವರೆಗೆ ಆಸ್ಪತ್ರೆಯಲ್ಲಿರಬೇಕಾಯಿತು.  ನಂತರ ಅವರು ಗುಣಮುಖರಾಗಿದ್ದರು ಮತ್ತು ನಿರಂತರವಾಗಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ಸೌರವ್ ಗಂಗೂಲಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಅವರ ವರದಿ ಪಾಸಿಟಿವ್ ಬಂದಿದೆ. ಗಂಗೂಲಿಗೆ ಮೊದಲ ಬಾರಿಗೆ ಕೊರೊನಾ ಸೋಂಕು ತಗುಲಿದೆ. ಸೌರವ್ ಗಂಗೂಲಿ ಕೊರೊನಾ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಇದರ ಹೊರತಾಗಿಯೂ, ಅವರ ಕೊರೊನಾ ವರದಿ ಪಾಸಿಟಿವ್ ಬಂದಿದೆ. ದೇಶದಲ್ಲಿ ಹೆಚ್ಚುತ್ತಿರುವ ಒಮಿಕ್ರಾನ್ ಪ್ರಕರಣಗಳ ನಡುವೆ ಗಂಗೂಲಿ ಸೋಂಕಿಗೆ ಒಳಗಾಗುತ್ತಿರುವುದು ಕಳವಳಕಾರಿ ವಿಷಯವಾಗಿದೆ. 

- Advertisement -

Latest Posts

Don't Miss