Thursday, February 13, 2025

Latest Posts

PM Modi : ಕಾನ್ಪುರ ಮೆಟ್ರೋ ರೈಲು  ಮೊದಲ ಹಂತದ ಉದ್ಘಾಟನೆ..!

- Advertisement -

ಉತ್ತರ ಪ್ರದೇಶ : ಪ್ರಧಾನಿ ನರೇಂದ್ರ ಮೋದಿಯವರು ಇಂದು ಉತ್ತರ ಪ್ರದೇಶದ ಕಾನ್ಪುರ ಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಕಾನ್ಪುರ ಮೆಟ್ರೋ ರೈಲು ಯೋಜನೆಯ ಸಂಪೂರ್ಣಗೊಂಡ ಮೊದಲ ಹಂತವನ್ನು ಉದ್ಘಾಟನೆ ಮಾಡಿದ್ದಾರೆ. ಕಾನ್ಪುರದ ಮೆಟ್ರೋ ರೈಲು ಯೋಜನೆಯ ಒಟ್ಟೂ ಉದ್ದ 32 ಕಿಮೀ ಆಗಿದ್ದು, ಒಟ್ಟಾರೆ ವೆಚ್ಚ 11 ಸಾವಿರ ಕೋಟಿ ರೂಪಾಯಿ.   

ಪ್ರಧಾನಿ ನರೇಂದ್ರ ಮೋದಿಯವರು ಇಂದು ಐಐಟಿ ಮೆಟ್ರೋ ಸ್ಟೇಶನ್​​ನಿಂದ ಗೀತಾ ನಗರದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿ, ಪರಿಶೀಲನೆ ನಡೆಸಲಿದ್ದಾರೆ.  ನಗರಾಭಿವೃದ್ಧಿ, ಅದರಲ್ಲೂ ನಗರದಲ್ಲಿ ಸಂಚಾರ ಮಾರ್ಗ ಸುಧಾರಣೆ ಪ್ರಧಾನಿ ಮೋದಿಯವರ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕಾನ್ಪುರ ಮೆಟ್ರೋ ರೈಲು ಯೋಜನೆ ಇನ್ನೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.  ಹಾಗೇ, ಇಂದಿನ ಕಾನ್ಪುರ ಭೇಟಿ ವೇಳೆ ಪ್ರಧಾನಿ ಮೋದಿ, ಬಿನಾ-ಪಂಕಿ ಮಲ್ಟಿಪ್ರೊಡಕ್ಟ್ ಪೈಪ್‌ಲೈನ್ ಯೋಜನೆ ಉದ್ಘಾಟಿಸುವರು. ಅದಾದ ಬಳಿಕ ಐಐಟಿ ಕಾನ್ಪುರ 54ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವರು.  ಈ ವೇಳೆ ಐಐಟಿ ಕಾನ್ಪುರದ ಎಲ್ಲ ವಿದ್ಯಾರ್ಥಿಗಳಿಗೆ ಆಂತರಿಕ ಬ್ಲಾಕ್​ಚೈನ್​ ತಂತ್ರಜ್ಞಾನದ ಮೂಲಕ ಡಿಜಿಟಲ್​ ಪದವಿ ನೀಡಲಾಗುತ್ತದೆ. ಇದನ್ನು ರಾಷ್ಟ್ರೀಯ ಬ್ಲಾಕ್​ಚೈನ್​ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಜಾಗತಿಕವಾಗಿಯೂ ಪರಿಗಣಿಸಬಹುದಾಗಿದೆ. ಬಿನಾ-ಪಿಂಕಿ ಪೈಪ್​ಲೈನ್ ಯೋಜನೆ 1500 ಕೋಟಿ ರೂಪಾಯಿಯೂ ಅಧಿಕ ವೆಚ್ಚದ ಯೋಜನೆಯಾಗಿದೆ. ಇದು ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಸಲುವಾಗಿ ನಿರ್ಮಿಸಲಾದ ಪೈಪ್​ಲೈನ್ ಆಗಿದ್ದು, ಮಧ್ಯಪ್ರದೇಶದ ಬಿನಾ ಸಂಸ್ಕರಣಾಗಾರದಿಂದ ಕಾನ್ಪುರ ಪಂಕಿಯವರೆಗೆ 356 ಕಿಮೀ ಉದ್ದದ ಪೈಪ್​ಲೈನ್​ ಹಾಕಲಾಗಿದೆ. ಇದು ವಾರ್ಷಿಕವಾಗಿ 3.45 ಮಿಲಿಯನ್​ ಮೆಟ್ರಿಕ್​ ಟನ್​ಗಳಷ್ಟು ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಸಾಮರ್ಥ್ಯ ಹೊಂದಿದೆ. ಭಾರತ್​ ಪೆಟ್ರೋಲಿಯಂ ಕಾರ್ಪೋರೇಶನ್​ ಇದರ ಕಾರ್ಯನಿರ್ವಹಿಸುತ್ತದೆ.

- Advertisement -

Latest Posts

Don't Miss