Friday, December 20, 2024

Latest Posts

ಸೌತ್ ಕೆನರಾ ಶೈಲಿಯ ಗೋಧಿ ಹಿಟ್ಟಿನ ಹಲ್ವಾ(ಗೋಧಿ ಶೀರಾ) ರೆಸಿಪಿ..

- Advertisement -

ಕೆಲವು ಕಡೆ  ಸತ್ಯನಾರಾಯಣ ಪೂಜೆಗೆ ಸಜ್ಜಿಗೆಯಿಂದ ಸಪಾತ ಭಕ್ಷ್ಯ ಪ್ರಸಾದವನ್ನು ಮಾಡುತ್ತಾರೆ. ಆದ್ರೆ ಸೌತ್ ಕೆನರಾ ಅಂದ್ರೆ ದಕ್ಷಿಣ ಕನ್ನಡದ ಕಡೆ ಕೆಲವರು, ಸತ್ಯನಾರಾಯಣ ಪೂಜೆಗೆ ಅಥವಾ ಕೆಲ ಪೂಜೆಗಳಿದ್ದಾಗ, ಗೋಧಿ ಹಿಟ್ಟಿನ ಸಪಾತ ಭಕ್ಷ್ಯ ಪ್ರಸಾದವನ್ನು ಮಾಡುತ್ತಾರೆ. ಹಾಗಾಗಿ ಇಂದು ನಾವು ಗೋಧಿ ಹಿಟ್ಟಿನ ಸಪಾತ ಭಕ್ಷ್ಯ ಪ್ರಸಾದ ಮಾಡೋದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.

ಮಂಗಳೂರು ಶೈಲಿಯ ಗೋಧಿ ಕಡಿ ಪಾಯಸ ರೆಸಿಪಿ..

ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿ ಹಿಟ್ಟು, 10 ಚಮಚ ತುಪ್ಪ, ಬೇಕಾದಷ್ಟು ಡ್ರೈಫ್ರೂಟ್ಸ್, ಒಂದು ಕಪ್ ಬೆಲ್ಲ, ಕೊಂಚ ಏಲಕ್ಕಿ ಪುಡಿ.

ಮಾಡುವ ವಿಧಾನ: ಮೊದಲು ಪ್ಯಾನ್ ಬಿಸಿ ಮಾಡಿ, ಗಾಳಿಸಿ ಸ್ವಚ್ಛ ಮಾಡಿದ ಗೋದಿ ಹಿಟ್ಟನ್ನು ಹುರಿಯಿರಿ. ಈ ವೇಳೆ ಎಣ್ಣೆ ತುಪ್ಪ ಏನನ್ನೂ ಬಳಸಬೇಡಿ. ಇದಾದ ಬಳಿಕ ಹುರಿದ ಹಿಟ್ಟನ್ನು ಬೌಲ್‌ಗೆ ಹಾಕಿ, ಅದೇ ಪ್ಯಾನ್‌ಗೆ ತುಪ್ಪ ಹಾಕಿ, ಡ್ರೈಫ್ರೂಟ್ಸ್ ಹಾಕಿ ಹುರಿಯಿರಿ. ಇದಕ್ಕೆ ಗೋಧಿ ಹಿಟ್ಟು ಮಿಕ್ಸ್ ಮಾಡಿ, ಚೆನ್ನಾಗಿ ಹುರಿಯಿರಿ. ಅವಶ್ಯಕತೆ ಇದ್ರೆ, ಇನ್ನೂ ಹೆಚ್ಚು ತುಪ್ಪ ಬಳಸಿ, ಹೀಗೆ ಹುರಿದು ಹುರಿದು, ಗೋಧಿ ಹಿಟ್ಟು ಮತ್ತು ತುಪ್ಪ ಮಿಕ್ಸ್ ಮಾಡಿ, ಶಿರಾದಂತೆ ಬೆರೆತುಕೊಳ್ಳಬೇಕು. ಇದಾದ ಬಳಿಕ ಒಂದು ಕಪ್ ನೀರು ಹಾಕಿ, ಕದಡಿ.

ಬೆಂಡೇಕಾಯಿ ತಿನ್ನುವ ಮುನ್ನ ಈ ವಿಷಯಗಳನ್ನು ಖಂಡಿತ ನೆನಪಿನಲ್ಲಿಡಿ..

ನೀವು ಗೋಧಿಯ ಮಿಶ್ರಣವನ್ನು ಚೆನ್ನಾಗಿ ಕದಡುತ್ತಿರಬೇಕು. ಅದು ಅಡಿ ಹಿಡಿಯದಂತೆ ನೋಡಿಕೊಳ್ಳಬೇಕು. ಹೀಗೆ ಮಾಡುತ್ತ ಮಾಡುತ್ತ, ಗೋದಿಯ ಬಣ್ಣ ಗಾಢವಾಗುತ್ತದೆ. ಆವಾಗ ಬೆಲ್ಲ ಹಾಕಿ, ಇನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ಏಲಕ್ಕಿ ಪುಡಿ ಸೇರಿಸಿ, ಗ್ಯಾಸ್ ಆಫ್ ಮಾಡಿ. ಈಗ ಗೋಧಿ ಶೀರಾ ರೆಡಿ.

- Advertisement -

Latest Posts

Don't Miss