Friday, July 11, 2025

Latest Posts

ಸ್ಪೆಶಲ್ ಖಾರಾ ಖಿಚಡಿ ರೆಸಿಪಿ

- Advertisement -

Recipe: ನೀವು ಖಾರಾ ಪೊಂಗಲ್ ಅಥವಾ ಬಿಸಿ ಬೇಳೆ ಭಾತ್ ತಿಂದಿರ್ತೀರಿ. ಯಾರಿಗೆ ಇವೆರಡೂ ತಿಂಡಿ ಇಷ್ಟವಾಗತ್ತೋ, ಅಂಥವರಿಗೆ ನಾವಿಂದು ಇನ್ನೊಂದು ಸ್ಪೆಷಲ್ ತಿಂಡಿ ರೆಸಿಪಿ ಹೇಳಲಿದ್ದೇವೆ. ಅದೇ ಸ್ಪೆಶಲ್ ಖಾರಾ ಖಿಚಡಿ ರೆಸಿಪಿ. ಹಾಗಾದರೆ ಇದನ್ನು ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ..

ಒಂದು ಕಪ್ ತೊಗರಿಬೇಳೆ, 1 ಕಪ್ ಅಕ್ಕಿ, ಅರ್ಧ ಸ್ಪೂನ್ ಅರಿಶಿನ ಮತ್ತು ನೀರು, ಉಪ್ಪು ಸೇರಿಸಿ ಕುಕ್ಕರ್‌ನಲ್ಲಿ 4ರಿಂದ 5 ಶಿಳ್ಳೆ ಬರುವವರೆಗೂ ಬೇಯಿಸಿ. ಈಗ ಒಂದು ಪ್ಯಾನ್ ಬಿಸಿ ಮಾಡಿ, ಅದಕ್ಕೆ 1 ಸ್ಪೂನ್ ಜೀರಿಗೆ, ಸೋಂಪು, 3 ಸ್ಪೂನ್ ಕೊತ್ತೊಂಬರಿ ಕಾಳು, ಅರ್ಧ ಸ್ಪೂನ್ ಬಿಳಿ ಸಾಸಿವೆ, ಚಿಟಿಕೆ ಮೆಂತ್ಯೆಕಾಳು, 5ರಿಂದ 6 ಕೆಂಪು ಮೆಣಸು, ಇವಿಷ್ಟನ್ನು ಹಾಕಿ ಮಂದ ಉರಿಯಲ್ಲಿ ಹುರಿಯಿರಿ.

ಇದನ್ನು ಪುಡಿ ಮಾಡಿ ಮಸಾಲೆ ತಯಾರಿಸಿ. ಈಗ ಮತ್ತೆ ಪ್ಯಾನ್ ಬಿಸಿ ಮಾಡಿ, ಎರಡು ಸ್ಪೂನ್ ತುಪ್ಪ ಹಾಕಿ, ಇದರೊಂದಿಗೆ ನಾವು ಈಗಾಗಲೇ ರೆಡಿ ಮಾಡಿದ ಮಸಾಲೆ ಸೇರಿಸಿ. ಹುರಿಯಿರಿ. ಇದಕ್ಕೆ ಬೇಯಿಸಿದ ಅಕ್ಕಿ ಬೇಳೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಕೊನೆಗೆ ಇದಕ್ಕೆ ಒಗ್ಗರಣೆ ಹಾಕಬೇಕು. ಅದಕ್ಕಾಗಿ ಒಗ್ಗರಣೆ ಸೌಟು ಬಿಸಿ ಮಾಡಿ, ಎರಡು ಸ್ಪೂನ್‌ ತುಪ್ಪ, 1 ಜೀರಿಗೆ, 2 ಒಣ ಮೆಣಸಿನಕಾಯಿ, 1 ಸ್ಪೂನ್ ಖಾರದ ಪುಡಿ, ಇವಿಷ್ಟನ್ನು ಹಾಕಿ ಒಗ್ಗರಣೆ ಕೊಟ್ಟರೆ, ಸ್ಪೆಶಲ್ ಖಿಚಡಿ ರೆಡಿ.

ಜೀವನದಲ್ಲಿ ಖುಷಿಯಾಗಿರಬೇಕು ಅಂದ್ರೆ ಈ ಸೂತ್ರವನ್ನು ಅನುಸರಿಸಿ..

ನೆಲ್ಲಿಕಾಯಿಯ ಆರೋಗ್ಯಕರ ಗುಣಗಳ ಬಗ್ಗೆ ನೀವೂ ತಿಳಿಯಿರಿ..

ಡಾರ್ಕ್ ಚಾಕೋಲೇಟ್ ಸೇವನೆ ಎಷ್ಟು ಮಾಡಬೇಕು..? ಇದರಿಂದಾಗುವ ಆರೋಗ್ಯ ಲಾಭವೇನು..?

- Advertisement -

Latest Posts

Don't Miss