Special News:
Feb:24: ಎರಡು ಮಕ್ಕಳ ತಾಯಿಯೊಬ್ಬಳು ತನ್ನ ಅತ್ತಿಗೆಯನ್ನೇ ಅಂದರೆ ಗಂಡನ ಸಹೋದರಿಯನ್ನೇ ವರಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಅತ್ತಿಗೆ ನಾದಿನಿ ವಿವಾಹವಾಗಿ ಸಲಿಂಗ ವಿವಾಹಕ್ಕೆ ಸಾಕ್ಷಿಯಾಗಿದ್ದಾರೆ.
ಬಿಹಾರದ ಸಮಸ್ತಿಪುರದ ಶುಕ್ಲಾ ದೇವಿ (32) ಎಂಬಾಕೆ ತನ್ನ 18 ವರ್ಷದ ಅತ್ತಿಗೆ, ಅಂದರೆ ಪತಿಯ ಸಹೋದರಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಪ್ರಮೋದ್ ದಾಸ್ ಎಂಬವರೊಂದಿಗೆ ಹತ್ತು ವರ್ಷಗಳ ಹಿಂದೆ ಈಕೆಗೆ ವಿವಾಹವಾಗಿತ್ತು. ಈ ಸಂಬಂಧದಲ್ಲಿ ಇಬ್ಬರು ಮಕ್ಕಳಿದ್ದಾರೆ. ಆದರೆ ಇದೀಗ ಪತಿಯ ಸಹೋದರಿಯನ್ನು ವರಿಸಿದ್ದಾಳೆ ಎಂದು ತಿಳಿದು ಬಂದಿದೆ.
ನಾವಿಬ್ಬರೂ ಪ್ರೀತಿಸಿ ಮದುವೆಯಾಗಿದ್ದೇವೆ. ಮನೆಯಲ್ಲಿದ್ದ ವೇಳೆ ಅತ್ತಿಗೆ ಮೇಲೆ ನನಗೆ ಪ್ರೀತಿಯಾಯಿತು. ಆಕೆಗೂ ನನ್ನ ಮೇಲೆ ಪ್ರೀತಿ ಮೊಳಕೆಯೊಡೆದಿದ್ದು, ಇದು ಮದುವೆಯ ಹಂತದವರೆಗೆ ಹೋಗಿದೆ. ನಾನು ನನ್ನ ಪತಿಯನ್ನು ಬಿಟ್ಟು ಅತ್ತಿಗೆಯನ್ನು ಮದುವೆಯಾಗಿ ಖುಷಿಯಾಗಿದ್ದೇನೆ ಎಂದಿದ್ದಾಳೆ.
ಇನ್ನು ಪತ್ನಿ ಮತ್ತು ಸಹೋದರಿ ಮದುವೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪತಿ, ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ನನಗೆ ಅದರಿಂದ ಏನೂ ಸಮಸ್ಯೆ ಇಲ್ಲ. ಪತ್ನಿ ಸಂತೋಷವಾಗಿದ್ದರೆ ನಾನೂ ಸಂತೋಷವಾಗಿದ್ದಂತೆಯೇ ಎಂದಿದ್ದಾನೆ.
ಇನ್ನು ಮದುವೆ ಬಳಿಕ ಶುಕ್ಲಾ ದೇವಿ ತನ್ನ ಹೆಸರನ್ನು ಸೂರಜ್ ಕುಮಾರ್ ಎಂದು ಬದಲಿಸಿಕೊಂಡಿದ್ದಾಳೆ. ಅಲ್ಲದೆ ಉದ್ದ ಕೂದಲನ್ನು ಕತ್ತರಿಸಿ ಪುರುಷರಂತೆ ಬದಲಾಗಿದ್ದಾಳೆ.

