Spiritual: ಹಿಂದೂಗಳು ಮಲೇಷಿಯಾಗೆ ಹೋದರೆ, ಅಲ್ಲಿರುವ ಬಟುಕೇವ್‌ಗೆ ಹೋಗದೇ ಬರುವುದಿಲ್ಲ. ಹಾಗೆ ಹೋಗದೇ ಬಂದರೂ, ಅದು ಅಪೂರ್ಣ ಮಲೇಷಿಯಾ ಪ್ರವಾಸವಾಗುತ್ತದೆ.
ಸುಮಾರು 400 ಮಿಲಿಯನ್ ವರ್ಷಗಳ ಇತಿಹಾಸ ಹೊಂದಿರುವ Batucaveನಲ್ಲಿ ಮುರುಗನ್ ಸ್ವಾಮಿಯನ್ನ ಪೂಜಿಸಲಾಗುತ್ತದೆ. ಚಿನ್ನದ ಬಣ್ಣದ ಷಣ್ಮುಗಸ್ವಾಮಿ, ಇಲ್ಲಿ ಬರುವ ಪ್ರವಾಸಿಗರ ಕಣ್ಮನ ಸೆಳೆಯುವ ವಿಗ್ರಹವಾಗಿದೆ. ಮಲೇಷಿಯಾ ಭಾಷೆಯಲ್ಲಿ ಬಟು ಎಂದರೆ ಬಂಡೆ ಎಂದರ್ಥ. ಮತ್ತು ಕೇವ್ ಎಂದರೆ ಗುಹೆ. ಬಂಡೆಯಲ್ಲಿರುವ ಗುಹೆಯೊಳಗೆ ಷಣ್ಮುಗಸ್ವಾಮಿಯನ್ನು ಪೂಜಿಸಲಾಗುತ್ತದೆ.
ದೊಡ್ಡ ದೊಡ್ಡ ಬಂಡೆಗಳನ್ನು ಕೊರೆದು, ಇಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಝರಿ, ದೊಡ್ಡ ಬಂಡೆಗಳ ಮೇಲೆ ಷಣ್ಮುಗ ನೆಲೆಸಿದ್ದು, ಮೆಟ್ಟಿಲುಗಳನ್ನು ಹತ್ತಿಹೋಗಿ, ಷಣ್ಮುಗ ಸ್ವಾಮಿಯ ದರ್ಶನ ಮಾಡಬೇಕು. ಇನ್ನು ಈ ದೇವಸ್ಥಾನವನ್ನು ಸ್ಥಾಪಿಸಿದವರು ಯಾರು ಎಂಬ ಪ್ರಶ್ನೆಗೆ ಉತ್ತರ, ತಮಿಳು ನಾಡಿನ ವ್ಯಾಪಾರಿಯಾಗಿದ್ದ ಕೆ.ತಂಬೂಸ್ವಾಮಿ ಪಿಳ್ಳೈ ಎಂಬುವವರು. ವರ್ಷಾರಂಭದಲ್ಲಿ ಇಲ್ಲಿ ದೊಡ್ಡ ತಮಿಳು ಹಬ್ಬ ನಡೆಯುತ್ತದೆ. ಅದನ್ನು ತೈಪೂಸಂ ಎಂದು ಕರೆಯಲಾಗುತ್ತದೆ. ಈ ವೇಳೆ ದೇಶ ವಿದೇಶಗಳಿಂದ ಪ್ರವಾಸಿಗರ ದಂಡೇ, ಸುಬ್ರಹ್ಮಣ್ಯನ ದರ್ಶನಕ್ಕೆ ಬರುತ್ತದೆ.
ಇನ್ನು ಈ ದೇವಸ್ಥಾನದಲ್ಲಿ ಬೀರ ಮುರುಗನ್‌ನನ್ನು ಅಷ್ಟೇ ಪೂಜಿಸಲಾಗುವುದಿಲ್ಲ. ಬದಲಾಗಿ, ಶಿವ, ಪಾರ್ವತಿ, ಗಣೇಶ ಸೇರಿ ಇನ್ನು ಹಲವು ದೇವರುಗಳನ್ನು ಪೂಜಿಸಲಾಗುತ್ತದೆ. ಆಂಜನೇಯ ಸ್ವಾಮಿಯ ದೊಡ್ಡ ಪ್ರತಿಮೆಯ ಜೊತೆಗೆ, ರಾಮಾಯಣ ದರ್ಶನದ ಕಲಾಕೃತಿಗಳನ್ನು ನಾವು ಕಣ್ತುಂಬಿಕೊಳ್ಳಬಹುದು. Malesiaಗೆ ಲ್ಯಾಂಡ್ ಆದ ಬಳಿಕ, ಮೆಟ್ರೋದಲ್ಲಿ ನೀವು ಪ್ರಯಾಣ ಮಾಡಿ, ಡೈರೆಕ್ಟ್ ಬಟುಕೇವ್ ಬಳಿ ಬಂದಿಳಿಯಬಹುದು.
ಈ ಗಿಡಗಳೇನಾದ್ರೂ ನಿಮ್ಮ ಮನೆಯಲ್ಲಿ ಇದ್ರೆ, ನಿಮ್ಮ ಮನೆಯ ನೆಮ್ಮದಿ ಹಾಳಾಗೋದು ಗ್ಯಾರಂಟಿ..