Recipe: ಮನೆಯಲ್ಲಿ ನಾವು ಪಲಾವ್ ಮಾಡುವಾಗ ಕ್ಯಾರೆಟ್, ಈರುಳ್ಳಿ, ಬೀನ್ಸ್ ಬಳಸಿ ಪಲಾವ್ ಮಾಡುತ್ತೇವೆ. ಆದ್ರೆ ನಾವಿಂದು ಇದೊರಂದಿಗೆ ಮೊಳಕೆ ಕಾಳನ್ನು ಕೂಡ ಸೇರಿಸಿ, ಆರೋಗ್ಯಕರವಾದ ಪಲಾವ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಮೊದಲು 1 ಕಪ್ ಬಾಸುಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು, ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಪ್ಯಾನ್ ಬಿಸಿ ಮಾಡಿ, 2 ಸ್ಪೂನ್ ಎಣ್ಣೆ ಹಾಕಿ, ಅದಕ್ಕೆ 1 ಸ್ಪೂನ್ ಸಕ್ಕರೆ ಹಾಕಿ ಕ್ಯಾರೆಮಲ್ ತಯಾರಿಸಿ. ಬಳಿಕ ಇದಕ್ಕೆ 1 ಪಲಾವ್ ಎಲೆ, 2 ಚಕ್ಕೆ, ಲವಂಗ, ಏಲಕ್ಕಿ, ಕಾಳು ಮೆಣಸು, ಜೀರಿಗೆ, ಸೋಂಪು ಸೇರಿಸಿ ಹುರಿಯಿರಿ. ಬಳಿಕ 1 ಸ್ಪೂನ್ ಶುಂಠಿ ಪೇಸ್ಟ್ ಹಾಕಿ ಹುರಿಯಿರಿ. ಬಳಿಕ ನೆನೆಸಿಟ್ಟ ಬಾಸುಮತಿ ಅಕ್ಕಿಯನ್ನೂ ಸೇರಿಸಿ, ಹುರಿಯಿರಿ.
ಈಗ 1ಬೌಲ್ ಮೊಳಕೆ ಬರಿಸಿದ ಹೆಸರು ಕಾಳು, ನೀವು ಬೇರೆ ಬೇರೆ ಕಾಳುಗಳನ್ನು ಮಿಕ್ಸ್ ಮಾಡಿಯೂ ಬಳಸಬಹುದು. ಅರ್ಧ ಕಪ್ ಮೆಂತ್ಯೆ ಎಲೆ, ಸಣ್ಣಗೆ ಹೆಚ್ಚಿದ 3 ಹಸಿಮೆಣಸು, ಕೊಂಚ ಕೊತ್ತೊಂಬರಿ ಸೊಪ್ಪು, 2 ಸ್ಪೂನ್ ಜೀರಿಗೆ ಮತ್ತು ಧನಿಯಾ ಪುಡಿ, ಅರ್ಧ ಸ್ಪೂನ್ ಕೆಂಪು ಉಪ್ಪು, ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನೂ ಮಿಕ್ಸ್ ಮಾಡಿ.
ಎಲ್ಲವೂ ಚೆನ್ನಾಗಿ ಮಿಕ್ಸ್ ಆದ ಬಳಿಕ, ಅರ್ಧ ಕಪ್ ನೀರು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ. ಇಲ್ಲಿ ನೀವು ಮೊಳಕೆ ಕಾಳು ಮತ್ತು ಅಕ್ಕಿಯನ್ನು ನೆನೆಸಿ ಬಳಸಿದ ಕಾರಣ, ಪಲಾವ್ ಬೇಗ ಬೇಯುತ್ತದೆ. ಎಲ್ಲವೂ ಹದವಾಗಿ ಬೆಂದರೆ, ಮೊಳಕೆ ಕಾಳಿನ ಪಲಾವ್ ರೆಡಿ..
ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..
ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?

