Thursday, November 27, 2025

Latest Posts

ಶ್ರೀರಾಮನಿಗೂ ಇದ್ದಳು ಓರ್ವ ಸಹೋದರಿ.. ರಾಣಿ ಶಾಂತಾಳ ಬಗ್ಗೆ ನಿಮಗೆ ಗೊತ್ತೇ..?

- Advertisement -

Spiritual News:ಅಯೋಧ್ಯಾಪತಿ ಶ್ರೀರಾಮ, ಲಕ್ಷ್ಮಣ,ಭರತ, ಶತ್ರುಘ್ನರನ್ನು ಪಡೆಯುವುದಕ್ಕೆ ದಶರಥ ರಾಜ ಪುತ್ರಕಾಮೇಷ್ಠಿ ಯಾಗ ಮಾಡಿದ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದರೆ ಶ್ರೀರಾಮನಿಗೂ ಮುನ್ನವೇ ದಶರಥನಿಗೆ ಶಾಂತಾ ಎಂಬ ಮಗಳಿದ್ದಳು. ಹಾಗಾದ್ರೆ ಯಾರು ಈ ಶಾಂತಾ..? ಈಕೆ ಹುಟ್ಟಿದ್ದರೂ, ದಶರಥನೇಕೆ ಪುತ್ರ ಕಾಮೇಷ್ಠಿ ಯಾಗ ಮಾಡಿದ. ಈ ಎಲ್ಲ ವಿಷಯಗಳ ಬಗ್ಗೆ ತಿಳಿಯೋಣ ಬನ್ನಿ..

ರಾಜಾ ದಶರಥ ಮತ್ತು ಕೌಶಲ್ಯರ ಮೊದಲ ಮಗಳು ಶಾಂತಾ. ರಾಜಾ ರೋಮಪದ ಮತ್ತು ಅವನ ಪತ್ನಿ ರಾಣಿ ವರ್ಷಿಣಿ ಒಮ್ಮೆ ಅಯೋಧ್ಯೆಗೆ ಬಂದರು. ರೋಮಪದ ದಶರಥನ ಸ್ನೇಹಿತನಾಗಿದ್ದ. ವರ್ಷಿಣಿ ಕೌಸಲ್ಯೆಯ ಸಹೋದರಿಯಾಗಿದ್ದಳು. ಇವರಿಬ್ಬರು ಭೇಟಿಯಾದಾಗ, ತಮಾಷೆ ಮಾಡುತ್ತಲೇ, ವರ್ಷಿಣಿ ಶಾಂತಾಳನ್ನು ತನಗೆ ಕೊಟ್ಟು ಬಿಡಿ. ನಾವು ಇವಳನ್ನು ಪ್ರೀತಿಯಿಂದ ಸಾಕುತ್ತೇವೆ ಎಂದು ಹೇಳುತ್ತಾರೆ.

ದಶರಥ ರಾಜ ರೋಮಪದ ಮತ್ತು ವರ್ಷಿಣಿಗೆ ಮಕ್ಕಳಿಲ್ಲದ ಕಾರಣ, ಅವರ ಕಷ್ಟವನ್ನು ಅರ್ಥ ಮಾಡಿಕೊಂಡು, ನಿಜವಾಗಲೂ ಶಾಂತಾಳನ್ನು ಅವರಿಗೆ ದತ್ತು ಕೊಡುವ ನಿರ್ಧಾರ ಮಾಡುತ್ತಾನೆ. ಕೊಟ್ಟ ಮಾತಿನಂತೆ, ಪ್ರೀತಿಯ ಮಗಳು ಶಾಂತಾಳನ್ನು ರೋಮಪದನಿಗೆ ದತ್ತು ನೀಡುತ್ತಾನೆ. ರೋಮಪದ ಶಾಂತಾಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ.

ಒಮ್ಮೆ ರೋಮಪದ ಶಾಂತಾಳೊಂದಿಗೆ ಹರಟೆ ಹೊಡೆಯುತ್ತ, ಮನೆ ಬಾಗಿಲಿಗೆ ಬಂದ ಬ್ರಾಹ್ಮಣನನ್ನು ಸತ್ಕರಿಸುವುದನ್ನೇ ಮರೆತು ಬಿಡುತ್ತಾನೆ. ಆ ಬ್ರಾಹ್ಮಣ ಇಂದ್ರದೇವನ ಭಕ್ತನಾಗಿರುತ್ತಾನೆ. ಆಗ ರಾಜಾ ರೋಮಪದನ ಮೇಲೆ ಇಂದ್ರನಿಗೆ ಕೋಪ ಬರುತ್ತದೆ. ಅಂಗದ ದೇಶದಲ್ಲಿ ಬರಗಾಲ ಬರಲೆಂದು ಇಂದ್ರದೇವ ಶಾಪ ನೀಡುತ್ತಾನೆ.

ಆಗ ರೋಮಪದ ಶೃಂಗಿ ಎಂಬ ಋಷಿಯನ್ನು ಕರೆದು ತನ್ನ ರಾಜ್ಯಕ್ಕೆ ಬಂದಿರುವ ಬರಗಾಲ ನೀಗಿಸಲು ಯಜ್ಞ ಮಾಡುವಂತೆ ಹೇಳಿದ. ಶೃಂಗಿ ಮಾಡಿದ ಯಜ್ಞದಿಂದ ಅಂಗದ ದೇಶ ಮೊದಲಿನಂತೆ ಸುಭಿಕ್ಷವಾಯಿತು. ಬಳಿಕ ರೋಮಪದ ತನ್ನ ದತ್ತುಪುತ್ರಿಯಾದ ಶಾಂತಾಳನ್ನು ಶೃಂಗಿಗೆ ಧಾರೆ ಎರೆದು ಕೊಡುತ್ತಾನೆ. ಬಳಿಕ ಈ ಋಷಿ ಶೃಂಗಿ ಮಾಡಿದ ಪುತ್ರ ಕಾಮೇಷ್ಠಿ ಯಾಗದಿಂದಲೇ, ದಶರಥನಿಗೆ ರಾಮ, ಲಕ್ಷ್ಮಣ, ಭರತ, ಶತ್ರುಘ್ನರಂಥ ಪುತ್ರರು ಜನಿಸಿದರು.

ಶನಿವಾರ ಉಗುರು ಕತ್ತರಿಸಬಾರದು ಅಂತಾ ಹೇಳುವುದೇಕೆ ಗೊತ್ತೇ..?

ಇವುಗಳು ಕನಸಿನಲ್ಲಿ ಬಂದರೆ ಆರ್ಥಿಕ ಲಾಭವಾಗುತ್ತದೆ ಎಂದರ್ಥ

ಜೀವನದಲ್ಲಿ ಇವುಗಳನ್ನು ಮಾತ್ರ ನಿರ್ಲಕ್ಷಿಸಬೇಡಿ ಎನ್ನುತ್ತಾರೆ ಚಾಣಕ್ಯರು

- Advertisement -

Latest Posts

Don't Miss