ನಾಳೆ ಸ್ಯಾಂಡಲ್‌ವುಡ್‌ನಲ್ಲಿ ರೋಮಾಂಚನ ಮೂಡಲಿದೆ. ಅದಕ್ಕೆ ಕಾರಣ ರಿಯಲ್‌ಸ್ಟಾರ್ ನಿರ್ದೇಶನದ ಉಪೇಂದ್ರ ಮುಂದಿನ ಸಿನಿಮಾ. ಟೈಟಲ್ ಏನು ಅಂತ ಹೇಳಿಲ್ಲ.
ಇಂಗ್ಲೀಷ್‌ನಲ್ಲಿ ಐ ಯು ಅಂತಿದೆ. ಅದರರ್ಥ ನಾನು ನೀನು.. ಈಗ ಅವನು ಯಾರು ಅಂತ ಹೇಳ್ತಾರಾ ಉಪೇಂದ್ರ ಗೊತ್ತಿಲ್ಲ. ಆದ್ರೆ ಉಪೇಂದ್ರ ಹೇಳೋದೆಲ್ಲಾ ಡಿಫ್ರೆಂಟಾಗೇ ಇರುತ್ತೆ ಅನ್ನೋದಂತೂ ಕನ್ಫರ್ಮ್. ಉಪ್ಪಿ ಮುಂದಿನ ಮ್ಯಾಜಿಕಲ್ ಡೈರೆಕ್ಷನ್‌ಗೆ ನಾಳೆ ಮುಹೂರ್ತ ಇಡ್ತಿದ್ದಾರೆ. ಈ ಮುಹೂರ್ತ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರ ದಂಡಿಗೆ ಸಾಕ್ಷಿಯಾಗಲಿದೆ.
ಹೌದು. ನಾಳೆ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಸ್ಯಾಂಡಲ್‌ನ ಬಹುತೇಕ ಸ್ಟಾರ್ ನಟರು ರಿಯಲ್‌ಸ್ಟಾರ್ ಮುಂದಿನ ಸಿನಿಮಾಗೆ ಸಾಕ್ಷಿಯಾಗಲಿದ್ದಾರೆ. ಯರ‍್ಯಾರರ‍್ತಾರೆ ಮುಹೂರ್ತದಲ್ಲಿ ಅಂತೀರಾ..? ಯಸ್, ಉಪ್ಪಿ ಗೆಳೆಯ ಸ್ಯಾಂಡಲ್‌ವುಡ್ ಕಿಂಗ್ ಶಿವರಾಜ್‌ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ. ದುನಿಯಾ ವಿಜಯ್, ಡಾಲಿ ಧನಂಜಯ್ ಇಷ್ಟು ಸ್ಟಾರ್ ನಟರು ಉಪ್ಪಿ ಮುಹೂರ್ತಕ್ಕೆ ಆಲ್ ದ ಬೆಸ್ಟ್ ಹೇಳೋಕೆ ರ‍್ತಿದ್ದಾರೆ. ರಿಯಲ್‌ಸ್ಟಾರ್ ಕನ್ನಡ ಮಾತ್ರವಲ್ಲ, ದೇಶ ಮಾತ್ರವಲ್ಲ ಜಗತ್ತಿನ ನಿರ್ದೇಶಕರ ಸಾಲಲ್ಲೇ ಅಗ್ರಗಣ್ಯರಲ್ಲಿ ನಿಲ್ಲೋ ನಿರ್ದೇಶಕ. ೭ ವರ್ಷದ ನಂತ್ರ ಉಪೇಂದ್ರ ಮತ್ತೆ ನಿರ್ದೇಶನಕ್ಕಿಳೀತಿದ್ದಾರೆ. ಸೈಕಾಲಾಜಿಕಲ್ ಥ್ರಿಲ್ಲರ್ ಮೂಲಕ ಬರೋ ರಿಯಲ್‌ಸ್ಟಾರ್ ಮತ್ತೊಮ್ಮೆ ಅದೇ ಜಾನರ್‌ನಲ್ಲಿ ಸಿನಿಮಾ ಮಾಡೋದ್ರಲ್ಲಿ ಅನುಮಾನವಿಲ್ಲ. ಏಳು ಭಾಷೆಗಳಲ್ಲಿ ರ‍್ತಿರೋ ಈ ಚಿತ್ರ ಮತ್ತೊಂದು ಸೂಪರ್‌ಹಿಟ್ ಅನ್ನೋದನ್ನ ಈಗಲೇ ಸಿನಿಪಂಡಿತರು ಬರೆದುಕೊಡ್ತಾರೆ. ಉಪೇಂದ್ರ ನಿರ್ದೇಶನಕ್ಕೆ ಮಾತ್ರವೇ ಇರೋ ತಾಕತ್ತು ಅದು.
ಇನ್ನೂ ಯಾವ್ಯಾವ ಸಿನಿಮಾ ನಟರು ಉಪ್ಪಿ ನಿರ್ದೇಶನಕ್ಕೆ ಶುಭ ಕೋರೋಕೆ ರ‍್ತಾರೆ ಅನ್ನೋದು ಸದ್ಯದ ಕುತೂಹಲ. ಇನ್ನು ಟೈಟಲ್ ಏನು ಅನ್ನೋ ಪ್ರಶ್ನೆಗೆ ನಾಳೆನಾದ್ರೂ ಉಪೇಂದ್ರ ಉತ್ತರ ಕೊಡ್ತಾರೆ ಅನ್ನೋ ನಿರೀಕ್ಷೆಯಿದೆ.
ಬಂಡಿ ಮಹಾಕಾಳಮ್ಮ ದೇವಸ್ಥಾನದಲ್ಲಿ ನಾಳೆ ಸ್ಟಾರ್‌ಗಳ ದಂಡು
- Advertisement -
- Advertisement -