Friday, April 18, 2025

Latest Posts

ಈ ಮೂರು ಜನರಿಂದ ದೂರವಿರಿ.. ಇಲ್ಲದಿದ್ದಲ್ಲಿ, ನಿಮ್ಮ ಜೀವನವೇ ಹಾಳಾಗುತ್ತದೆ..

- Advertisement -

ಪ್ರತೀ ಮನುಷ್ಯನ ಜೀವನದಲ್ಲಿ ಒಬ್ಬರಲ್ಲ ಒಬ್ಬರು ಬಂದೇ ಬರುತ್ತಾರೆ. ಕೆಲವರು ಕೊನೆವರೆಗೂ ಒಟ್ಟಿಗೆ ಇದ್ದು, ಉತ್ತಮ ಜೀವನ ನಡೆಸುತ್ತಾರೆ. ಇನ್ನು ಕೆಲವರು ಅರ್ಧಕ್ಕೆ ಬಿಟ್ಟು ಹೋಗುತ್ತಾರೆ. ಇನ್ನು ಕೆಲವರು ಜೊತೆಗೆ ಇದ್ದು, ಜೀವನದ ನೆಮ್ಮದಿಯನ್ನೇ ಹಾಳು ಮಾಡುತ್ತಾರೆ. ಹಾಗಾಗಿ ನಿಮ್ಮ ಜೀವನದಲ್ಲಿ ಬರುವ ಜನರ ಬಗ್ಗೆ ಮೊದಲೇ ತಿಳಿದುಕೊಳ್ಳಿ. ನಂತರ ಅವರೊಂದಿಗೆ ಇರಬೇಕೋ ಬೇಡವೋ ಅನ್ನೋ ಬಗ್ಗೆ ನಿರ್ಧರಿಸಿ. ಹಾಗಾದ್ರೆ ಚಾಣಕ್ಯರ ಪ್ರಕಾರ, ಯಾವ 3 ಜನರಿಂದ ದೂರವಿರಬೇಕು ಅಂತಾ ತಿಳಿಯೋಣ ಬನ್ನಿ..

ಮೊದಲನೆಯವರು ನಿಮ್ಮ ಮೇಲೆ ಪದೇ ಪದೇ ಅನುಮಾನ ಪಡುವ ಸಂಗಾತಿ. ಮದುವೆಯಾಗುವ ಮೊದಲೇ ಹೆಣ್ಣು ಅಥವಾ ಗಂಡಿನ ಸ್ವಭಾವದ ಬಗ್ಗೆ ಕೊಂಚ ತಿಳಿದುಕೊಳ್ಳಬೇಕು ಅಂತಾ ಹಿರಿಯರು ಹೇಳ್ತಾರೆ. ಯಾಕಂದ್ರೆ ಮೊದಲೇ ಎಂಥ ಬುದ್ಧಿಯವರು ಅಂತಾ ತಿಳಿದ ಮೇಲೆ ಅವರನ್ನ ಮದುವೆಯಾಗಬೇಕೋ, ಬೇಡವೋ ಅನ್ನೋದರ ಬಗ್ಗೆ ನಿರ್ಧರಿಸಬಹುದು. ಆದ್ರೆ ನಿಮ್ಮನ್ನು ಪದೇ ಪದೇ ಸಂಶಯಿಸುವ ಸಂಗಾತಿ ಸಿಕ್ಕರೆ, ಅಂಥವರನ್ನ ವಿವಾಹವಾಗಬೇಡಿ. ಇಲ್ಲವೆಂದಲ್ಲಿ, ಇಡೀ ಜೀವನ ನರಕ ಅನುಭವಿಸಬೇಕಾಗುತ್ತದೆ.

ಇದು ಗರುಡ ಪುರಾಣದಲ್ಲಿ ಬರುವ 7 ಕಹಿ ಸತ್ಯಗಳು- ಭಾಗ1

ಎರಡನೇಯದಾಗಿ ಕೆಟ್ಟ ಚಟ ಹೊಂದಿರುವ ಮಗನಿಂದ ದೂರವಿರಿ. ದುಡಿಮೆ ಮಾಡದೇ, ಕೆಟ್ಟ ಜನರ ಸಂಗ ಮಾಡಿ, ಕೆಟ್ಟ ಚಟವನ್ನು ಮೈಗೂಡಿಸಿಕೊಂಡ ಮಗ, ಎಂದಿಗೂ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಬದಲಾಗಿ ಅಂಥ ಮಗನನ್ನು ಕೊನೆಯವರೆಗೂ ತಂದೆ ತಾಯಿಯೇ ನೋಡಿಕೊಳ್ಳಬೇಕಾಗುತ್ತದೆ. ಅವನ ಚಟಕ್ಕೆ ಇವರೇ ಹಣ ಸುರಿಯಬೇಕಾಗುತ್ತದೆ. ಹಾಗಾಗಿ ಕೆಟ್ಟ ಚಟವಿರುವ ಮಗನನ್ನು ದೂರವಿಡುವುದೇ ಉತ್ತಮ. ಅದರಿಂದಾದರೂ ಅವನು ಬದುಕಲು ಕಲಿಯಬಹುದು.

ಇದು ಗರುಡ ಪುರಾಣದಲ್ಲಿ ಬರುವ 7 ಕಹಿ ಸತ್ಯಗಳು- ಭಾಗ2

ಪ್ರತಿ ತಂದೆ ತಾಯಿಯೂ ತಮ್ಮ ಮಗಳಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು. ಮುಂದೊಂದು ದಿನ ಪತಿಯಿಂದ ದೂರವಾದ್ರೂ ಕೂಡ ಆಕೆ ತನ್ನ ಜೀವನವನ್ನು ತಾನು ನಿಭಾಯಿಸುವುದನ್ನ ಕಲಿಯಬೇಕು. ಅದರ ಜೊತೆ ತಾಳ್ಮೆಯೂ ಕೂಡ ಕಲಿಸಬೇಕು. ಯಾಕಂದ್ರೆ ಪತಿಯ ಜೊತೆ ಜಗಳವಾದಾಗ, ಮನೆ ಬಿಟ್ಟು ತವರು ಮನೆಯಲ್ಲಿರುವ ಪರಿಸ್ಥಿತಿ ಆಕೆಗೆ ಬರಬಾರದು. ಇನ್ನು ಅಪ್ಪಿ ತಪ್ಪಿ ಆಕೆ ವಿಧವೆಯಾದರೆ, ಆಕೆ ತನ್ನ ಅನ್ನವನ್ನ ತಾನೇ ಸಂಪಾದಿಸುವ ಯೋಗ್ಯತೆ ಹೊಂದಿರಬೇಕು. ಹಾಗಿದ್ದಲ್ಲಿ ಮಾತ್ರ ಆಕೆ ತವರು ಮನೆಯಲ್ಲಿದ್ದರೂ ಯಾರಿಗೂ ತೊಂದರೆಯಾಗುವುದಿಲ್ಲ. ಇಲ್ಲವಾದಲ್ಲಿ, ಹೆತ್ತವರಿಗೂ ಸಂಕಟವಾಗುವುದರ ಜೊತೆಗೆ, ಆಕೆಯೂ ಇತರರ ಕಟು ಮಾತು ಕೇಳಿ ಶಿಕ್ಷೆ ಅನುಭವಿಸಬೇಕಾಗುತ್ತದೆ.

- Advertisement -

Latest Posts

Don't Miss