Sunday, September 8, 2024

Latest Posts

ದಾನಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲಾ ಅನ್ನೋದು ಇದಕ್ಕೆ ನೋಡಿ.. ಭಾಗ 2

- Advertisement -

ಈ ಹಿಂದಿನ ಭಾಗದಲ್ಲಿ ನಾವು ನಿಮಗೆ ಜುಗ್ಗನಾದ ಜಗ್ಗಪ್ಪ, ಸಹೋದರನ ಮನೆಯಲ್ಲಿ ಮಾಡಿದ ಭಕ್ಷ್ಯ ಭೋಜನ ಕಂಡು ಆಸೆ ಪಟ್ಟಿದ್ದರ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ ಏನಾಯಿತು ಅನ್ನೋ ಬಗ್ಗೆ ಕಥೆ ಹೇಳಲಿದ್ದೇವೆ.

ಒಂದೆರಡು ವಾರ ಬಗ್ಗೆಯೇ ಯೋಚನೆ ಮಾಡಿ ಮಾಡಿ, ಅವನು ಸೊರಗಲು ಶುರುವಾಗುತ್ತಾನೆ. ಒಮ್ಮೆ ಅವನು ಅನಾರೋಗ್ಯಕ್ಕೀಡಾಗುತ್ತಾನೆ. ಆವಾಗ ಅವನ ಪತ್ನಿ ಬಂದು ಅವನ ಅನಾರೋಗ್ಯಕ್ಕೆ ಕಾರಣವೇನು ಎಂದು ಕೇಳುತ್ತಾಳೆ. ಅದಕ್ಕೆ ಅವನು ಸಹೋದರನ ಮನೆಯಲ್ಲಿ ಮತ್ತು ಅರಮನೆಯಲ್ಲಿ ಭಕ್ಷ್ಯ ಭೋಜನ ನೋಡಿದ ಬಗ್ಗೆ, ಅವನಿಗೂ ಅದನ್ನು ತಿನ್ನಬೇಕು ಎಂದು ಆಸೆಯಾದ ಬಗ್ಗೆ ಹೇಳುತ್ತಾನೆ.

ಮಾತು ಮಾತಿಗೂ ಸುಳ್ಳು ಹೇಳುವವರು ಈ ಕಥೆಯನ್ನ ಖಂಡಿತಾ ಓದಿ.. ಭಾಗ 2

ಅದಕ್ಕೆ ಅವನ ಪತ್ನಿ, ನೀವು ಅದಕ್ಕೆ ಬೇಕಾದ ದಿನಸಿ ಸಾಮಾನನ್ನು ಖರೀದಿಸಿ ತನ್ನಿ. ನಾನು ಒಂದಿಷ್ಟು ಭೋಜನ ತಯಾರಿಸುತ್ತೇನೆ ಅದನ್ನು ನಮ್ಮ ಅಕ್ಕಪಕ್ಕದ ಮನೆಯವರಿಗೆಲ್ಲ ಹಂಚೋಣ ಎನ್ನುತ್ತಾಳೆ. ಅದಕ್ಕೆ ಜಗ್ಗಪ್ಪನಿಗೆ ಕೋಪ ಬರುತ್ತದೆ. ಅವನು ಅಕ್ಕಪಕ್ಕದವರ ಮನೆಯಲ್ಲಿ ಅಡಿಗೆ ಮಾಡುತ್ತಾರೆ. ನೀನು ಅವರಿಗೆಲ್ಲ ಅಡುಗೆ ಮಾಡಿ ಹಂಚಬೇಕಂತೆನಿಲ್ಲ ಎನ್ನುತ್ತಾನೆ. ಅದಕ್ಕೆ ಪತ್ನಿ, ಸರಿ ನಾನು ಮಾಡಿದ ಅಡುಗೆಯನ್ನು ಪರಿವಾರಕ್ಕಾದರೂ ಹಂಚೋಣ ಎನ್ನುತ್ತಾಳೆ.

ಅದಕ್ಕೆ ಜಗ್ಗಪ್ಪ, ನೀನು ಈ ದಿನಸಿಗೆ ಬೇಕಾದ ಹಣವನ್ನ ನಿನ್ನ ಅಪ್ಪನ ಮನೆಯಿಂದ ತಂದು ಕೊಡುತ್ತಿಯಾ ಎಂದು ಕೇಳುತ್ತಾನೆ. ಅದಕ್ಕೆ ಅವಳಿಗೆ ಬೇಸರವಾಗುತ್ತದೆ. ಆಗ ಅವಳು, ಸರಿ ನಾನು ನೀವು ಇಬ್ಬರೇ ತಿನ್ನುವಷ್ಟು ಭೋಜನ ಮಾಡುತ್ತೇನೆ ಎನ್ನುತ್ತಾಳೆ. ಅದಕ್ಕೆ ಜಗ್ಗಪ್ಪ, ಏನೂ ಬೇಕಾಗಿಲ್ಲ. ನನಗೊಬ್ಬನಿಗೆ ಮಾಡಿಕೊಳ್ಳಬೇಕಾದಷ್ಟು ದಿನಸಿಯನ್ನು ಕಟ್ಟಿ ಕೊಡು, ನಾನು ಕಾಡಿಗೆ ಹೋಗಿ ಭೋಜನ ತಯಾರಿಸಿಕೊಂಡು ತಿನ್ನುತ್ತೇನೆಂದು ಹೇಳುತ್ತಾನೆ. ಪತ್ನಿ ಬೇಸರದಿಂದಲೇ ಅವನಿಗೆ ಬೇಕಾದಷ್ಟು ದಿನಸಿ ಕಟ್ಟುಕೊಡುತ್ತಾಳೆ. ಕಾಡಿಗೆ ಸೇವಕನೊಂದಿಗೆ ಹೋದ ಜಗ್ಗಪ್ಪ, ಸೇವಕನಿಂದ ಬೇಕಾದಷ್ಟು ಸೇವೆ ಮಾಡಿಸಿಕೊಂಡು ಮನೆಗೆ ಕಳುಹಿಸುತ್ತಾನೆ.

ನಂತರ ತಾನು ಅನ್ನ, ಸಾರು, ಪಾಯಸವನ್ನೆಲ್ಲ ಮಾಡಿ ಇನ್ನೇನು ಊಟ ಮಾಡಬೇಕು ಅನ್ನುವಷ್ಟರಲ್ಲಿ, ಅಲ್ಲಿ ಇಬ್ಬರು ಸಾಧುಗಳು ಬರುತ್ತಿದ್ದರು. ಅವರು ತನ್ನ ಬಳಿಯೇ ಬರುವುದನ್ನು ನೋಡಿ, ಜಗ್ಗಪ್ಪ, ನೀವು ಇಲ್ಲಿ ಯಾಕೆ ಬರುತ್ತಿದ್ದೀರಿ..? ಹಳ್ಳಿಗೆ ಹೋಗುವ ದಾರಿ ಆ ಕಡೆ ಉಂಟು, ಅಲ್ಲಿ ಹೋಗಿ ಎನ್ನುತ್ತಾನೆ. ಆದರು ಅವರು ಜಗ್ಗಪ್ಪನಲ್ಲಿಯೇ ಬರುತ್ತಾರೆ. ಮತ್ತು ಅವನು ಮಾಡಿದ ಅನ್ನವನ್ನ ದಾನ ಮಾಡಲು ಹೇಳುತ್ತಾರೆ. ಆದ್ರೆ ಜಗ್ಗಪ್ಪ ಒಪ್ಪುವುದಿಲ್ಲ.

ದಾನಕ್ಕಿಂತ ಪುಣ್ಯದ ಕೆಲಸ ಮತ್ತೊಂದಿಲ್ಲಾ ಅನ್ನೋದು ಇದಕ್ಕೆ ನೋಡಿ.. ಭಾಗ 1

ಅದಕ್ಕೆ ಸಾಧುಗಳು, ಹಾಗೆ ಮಾಡಬೇಡ. ನಾವಾಗಿಯೇ ನಿನ್ನಲ್ಲಿ ದಾನ ಕೇಳುತ್ತಿದ್ದೇವೆ. ಸ್ವಲ್ಪವಾದರೆ, ಸ್ವಲ್ಪವೇ ಕೊಡು. ಆದರೆ ಬರಿಗೈಯಲ್ಲಿ ಕಳುಹಿಸಬೇಡ. ನೀನು ದಾನ ಮಾಡಿದಷ್ಟು ನಿನ್ನ ಪಾತ್ರೆಯಲ್ಲಿ ಭೋಜನ ತುಂಬುತ್ತದೆ ಎನ್ನುತ್ತಾರೆ. ಮನಸ್ಸಿಲ್ಲದ ಮನಸ್ಸಿನಿಂದ ಜುಗ್ಗಪ್ಪ ಅವರಿಬ್ಬರಿಗೂ ಅನ್ನ, ಸಾರು, ಪಾಯಸ ಬಡಿಸುತ್ತಾನೆ. ಅವರಿಬ್ಬರಿಗೂ ಊಟ ಬಡಿಸಿದರೂ, ಅವರ ಭೋಜನ ಕಡಿಮೆಯಾಗುವುದಿಲ್ಲ. ಇದೆಂಥ ಚಮತ್ಕಾರವೆಂದು, ಜಗ್ಗಪ್ಪ ಮತ್ತಷ್ಟು ಅನ್ನಾಹಾರವನ್ನು ಅವರಿಗೆ ಬಡಿಸುತ್ತಾನೆ. ಆದರೂ ಭೋಜನ ಕಡಿಮೆಯಾಗುವುದಿಲ್ಲ.

ಆಗ ಸಾಧುಗಳು ಹೇಳುತ್ತಾರೆ. ಈ ಮಾತಿನ ಅರ್ಥ, ನೀನು ದಾನ ಮಾಡಿದಷ್ಟು ದೇವರು ನಿನಗೆ ಮತ್ತಷ್ಟು ದಾನ ಮಾಡುವ ಶಕ್ತಿ ಕೊಡುತ್ತಾನೆ. ಹಾಗಾಗಿ ನೀನು ಖುಷಿಯಿಂದ ಇರು, ಇತರರಿಗೂ ದಾನ ಮಾಡು ಎನ್ನುತ್ತಾರೆ. ಜಗ್ಗಪ್ಪನಿಗೆ ತನ್ನ ತಪ್ಪಿನ ಅರಿವಾಗುತ್ತದೆ. ಜಗ್ಗಪ್ಪ ಮಾಡಿದ ಅನ್ನವನ್ನ ತನ್ನ ಪತ್ನಿಗೆ ಮತ್ತು ಮನೆಗೆಲಸದವರಿಗೆಲ್ಲ ಹಂಚಿ ತಿನ್ನುತ್ತಾನೆ.

- Advertisement -

Latest Posts

Don't Miss