Thursday, December 4, 2025

Latest Posts

ಜೀವನದಲ್ಲಿ ಸೋಲುತ್ತಿದ್ದೀರಿ ಎನ್ನಿಸುತ್ತಿದ್ದಲ್ಲಿ ಈ ಕಥೆ ಓದಿ..

- Advertisement -

ಮನುಷ್ಯ ಅಂದ ಮೇಲೆ ಸೋಲು ಗೆಲುವು, ಸುಖ ದುಃಖ, ನೋವು ನಲಿವು ಎಲ್ಲವೂ ಇರುತ್ತದೆ. ಅದನ್ನೇ ಜೀವನ ಅನ್ನೋದು. ಕೆಲವರು ಕಷ್ಟಪಟ್ಟು ಯಶಸ್ಸಿನ ಮೆಟ್ಟಿಲೇರುತ್ತಾರೆ. ಇನ್ನು ಕೆಲವರು ಕಷ್ಟ ಹೆಚ್ಚಾಯ್ತೆಂದು ಅರ್ಧಕ್ಕೆ ಗುರಿಯನ್ನ ಬಿಟ್ಟುಬಿಡ್ತಾರೆ. ಮತ್ತೆ ಕೆಲವರು ಎಷ್ಟು ಕಷ್ಟಪಟ್ಟರೂ ಸೋಲೆ ಕಾಣುತ್ತಾರೆ. ಹಾಗೆ ಜೀವನದಲ್ಲಿ ಸೋಲುತ್ತಿದ್ದೀರಿ ಎನ್ನಿಸುತ್ತಿದ್ದಲ್ಲಿ ನಾವು ಹೇಳುವ ಕಥೆಯನ್ನ ಕೇಳಿ..

ಒಂದೂರಲ್ಲಿ ಓರ್ವ ಸಾಧುವಿದ್ದ. ಅವನು ನೃತ್ಯ ಮಾಡಿದ್ರೆ, ಮಳೆ ಬರುತ್ತದೆ ಎಂದು ಸುದ್ದಿಇತ್ತು. ಅದರಂತೆ ಅವನು ಯಾವಾಗ ನೃತ್ಯ ಮಾಡುತ್ತಾನೋ,  ಆಗ ಮಳೆ ಬಂದೇ ಬರುತ್ತಿತ್ತು. ಆ ಊರಲ್ಲಿ ಬರಗಾಲ ಬಂದಾಗ, ಊರ ಜನ ಸಾಧುವಿನ ಬಳಿ ಬಂದು ನೃತ್ಯ ಮಾಡುವಂತೆ ವಿನಂತಿಸುತ್ತಿದ್ದರು. ಅವನು ಅವರೆಲ್ಲರ ಮನವಿಗೆ ಒಪ್ಪಿ ನೃತ್ಯ ಮಾಡುತ್ತಿದ್ದ. ಮಳೆಯೂ ಬರುತ್ತಿತ್ತು.

ಈ 7 ಮಾತುಗಳನ್ನು ಎಂದಿಗೂ ಯಾರಲ್ಲಿಯೂ ಹೇಳಬೇಡಿ..ಭಾಗ 2

ಒಮ್ಮೆ ಆ ಊರಿಗೆ ಸಿಟಿಯಿಂದ ಮೂವರು ಯುವಕರು ಬಂದರು. ಆ ಊರಿನಲ್ಲಿ ಸಾಧುವಿನ ಬಗ್ಗೆ ಜನ ಮಾತನಾಡುವುದನ್ನ ಆ ಯುವಕರು ಕೇಳಿಸಿಕೊಂಡರು. ಅದನ್ನು ಕೇಳಿ ಯುವಕರು ಊರಿನವರ ಬಳಿ ಷರತ್ತು ಹಾಕಿದರು. ಸಾಧು ನೃತ್ಯ ಮಾಡಿದರಷ್ಟೇ ಮಳೆ ಬರುತ್ತದೆ ಅನ್ನೋದು ಸುಳ್ಳು. ನಾವೂ ಕೂಡ ನರ್ತಿಸುತ್ತೇವೆ. ನಾವು ನರ್ತಿಸಿದಾಗಲೂ ಮಳೆ ಬರಬಹುದು ಎಂದು ಹೇಳುತ್ತಾರೆ. ಆಗ ಆ ಊರಿನ ಜನ ಷರತ್ತನ್ನು ಒಪ್ಪಿಕೊಂಡು ಆ ಯುವಕರನ್ನು ಸಾಧುವಿನ ಬಳಿ ಕರೆ ತರುತ್ತಾರೆ.

ಸಾಧುವಿನ ಬಳಿಯೂ ಯುವಕರು ಬಾಜಿ ಕಟ್ಟುತ್ತಾರೆ. ಅದನ್ನ ಸಾಧು ಒಪ್ಪಿಕೊಳ್ಳುತ್ತಾನೆ. ಮೊದಲ ಯುವಕ ನೃತ್ಯ ಮಾಡುತ್ತಾನೆ. ಮಳೆ ಬರುವುದಿಲ್ಲ. ಎರಡನೇಯ ಯುವಕ ಒಂದು ಗಂಟೆ ನೃತ್ಯ ಮಾಡುತ್ತಾನೆ ಮಳೆ ಬರುವುದಿಲ್ಲ. ಮೂರನೇ ಯುವನೂ ನೃತ್ಯ ಮಾಡುತ್ತಾನೆ. ಮಳೆ ಬರುವುದಿಲ್ಲ. ನಂತರ ಸಾಧು ನೃತ್ಯ ಮಾಡಲು ಆರಂಭಿಸುತ್ತಾನೆ. ಒಂದು ಗಂಟೆ ಕಳಿಯುತ್ತದೆ ಮಳೆ ಬರುವುದಿಲ್ಲ. ಎರಡು, ಮೂರು, ನಾಲ್ಕು ಗಂಟೆ ಕಳೆಯುತ್ತದೆ. ಮಳೆ ಬರುವುದಿಲ್ಲ.

ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕಂದ್ರೆ ಈ ಮಾತು ಕೇಳಿ..

ಸಂಜೆಯಾಗುತ್ತದೆ ಆಗ ಮಳೆ ಬರಲು ಶುರುವಾಗುತ್ತದೆ. ಮಳೆ ಬರುವವರೆಗೂ ಸತತ 6 ಗಂಟೆಗಳ ಕಾಲ ಸಾಧು ನೃತ್ಯ ಮಾಡುತ್ತಾನೆ. ಮಳೆ ಬರಲು ಶುರುವಾದ ಮೇಲೆ ನೃತ್ಯ ಮಾಡುವುದನ್ನು ನಿಲ್ಲಿಸುತ್ತಾನೆ. ಅವನ ಬಳಿ ಯುವಕರು ಕ್ಷಮೆ ಕೇಳುತ್ತಾನೆ. ಮತ್ತು ಇದು ಹೇಗೆ ಸಾಧ್ಯ ಎಂದು ಕೇಳುತ್ತಾರೆ. ಅದಕ್ಕೆ ಸಾಧು ಹೇಳುತ್ತಾನೆ, ನಾನು ನೃತ್ಯ ಮಾಡುವಾಗ ಎರಡು ವಿಷಯವನ್ನು ತಲೆಯಲ್ಲಿಟ್ಟುಕೊಳ್ಳುತ್ತೇನೆ.

ಮೊದಲನೇಯ ಮಾತಂದ್ರೆ, ನಾನು ನೃತ್ಯ ಮಾಡುತ್ತೇನೆಂದರೆ ಮಳೆ ಬರಲೇಬೇಕು. ಮತ್ತು ಎರಡನೇಯ ಮಾತಂದ್ರೆ ಮಳೆ ಬರುವವರೆಗೂ ನಾನು ನೃತ್ಯ ಮಾಡುತ್ತೇನೆ ಎನ್ನುತ್ತಾನೆ. ಇದರ ಅರ್ಥವೇನೆಂದರೆ, ನಾವು ಏನಾದರು ಸಾಧಿಸಬೇಕು ಅಂದ್ರೆ, ಅಧನ್ನ ಸಾಧಿಸುವವರೆಗೂ ಕೆಲಸ ಮಾಡಬೇಕು. ಮತ್ತು ಸಾಧಿಸಲೇಬೇಕು ಅನ್ನುವ ಛಲ ನಮ್ಮಲ್ಲಿರಬೇಕು.

- Advertisement -

Latest Posts

Don't Miss