Tuesday, October 22, 2024

Latest Posts

ಮಾಡಿದ ಕರ್ಮಾ ಬಿಡೋದಿಲ್ಲಾ ಅಂತಾ ಹೇಳೋದ್ಯಾಕೆ ಗೊತ್ತಾ..?

- Advertisement -

ಯಾರಾದರೂ ತಪ್ಪು ಮಾಡಿದಾಗ, ನೀವು ಮಾಡಿದ ಕರ್ಮ ನಿಮ್ಮನ್ನು ಬಿಡೋದಿಲ್ಲಾ ಅಂತಾ ಹೇಳ್ತಾರೆ. ಅಂದ್ರೆ ನಾವು ಏನಾದರೂ ತಪ್ಪು ಮಾಡಿದ್ರೆ, ಅಥವಾ ಬೇರೆಯವರಿಗೆ ಕೇಡು ಬಯಸಿದ್ರೆ, ಮುಂದೆ ನಮಗೂ ಅಂಥದ್ದೇ ಪರಿಸ್ಥಿತಿ ಬರುತ್ತದೆ ಎಂದರ್ಥ. ಅದೇ ರೀತಿ ನಾವು ಯಾರಿಗಾದರೂ ಒಳ್ಳೆದನ್ನ ಮಾಡಿದ್ರೆ, ಅಥವಾ ಒಳ್ಳೆಯದನ್ನ ಬಯಸಿದ್ರೂ ನಮಗೆ ಒಳ್ಳೆಯದಾಗದಿದ್ದರೂ, ಕೆಟ್ಟದ್ದಂತೂ ಆಗೋದಿಲ್ಲಾ ಅಂತಾ ಹಿರಿಯರು ಹೇಳಿದ್ದನ್ನ ನೀವು ಕೇಳಿರ್ತೀರಿ. ಹಾಗಾದ್ರೆ ನಿಜವಾಗ್ಲೂ ನಾವು ಮಾಡಿದ ಕರ್ಮ ನಮ್ಮನ್ನು ಕಾಡತ್ತೆ ಮತ್ತು ಕಾಪಾಡತ್ತೆ ಅನ್ನೋದು ನಿಜಾನಾ..? ಯಾಕೆ ಹಾಗೆ ಹೇಳೋದು ಅಂತಾ ತಿಳಿಯೋಣ ಬನ್ನಿ..

ಓರ್ವ ಬೌದ್ಧ ಭಿಕ್ಷು ಮತ್ತು ಅವನ ಶಿಷ್ಯ ಕಾಡಿನಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ಮಾಡುತ್ತಿದ್ದರು. ಗುರುವಿಗೆ ವಯಸ್ಸಾಗುತ್ತಾ ಬಂತು. ಆದ್ರೆ ಶಿಷ್ಯ ಇನ್ನೂ ಚಿಕ್ಕ ವಯಸ್ಸಿನವನು. ಒಮ್ಮೆ ಗುರು ಧ್ಯಾನ ಮಾಡುವ ಸಂದರ್ಭದಲ್ಲಿ, ಅವರಿಗೆ ತಮ್ಮ ಶಿಷ್ಯನ ಆಯಸ್ಸು ಇನ್ನು 7 ದಿನದಲ್ಲೇ ಮುಗಿಯಲಿದೆ ಎಂದು ಗೊತ್ತಾಗುತ್ತದೆ. ಅವರು ಶಿಷ್ಯನನ್ನು ಕರೆದು, ನೀನು 7 ದಿನ ನಿನ್ನ ಮನೆಗೆ ಹೋಗಿ ಇದ್ದಿ ಬಾ. ನಿನ್ನ ಕುಟುಂಬಸ್ಥರೊಂದಿಗೆ ಸಮಯ ಕಳಿ. ಆದರೆ ಎಂಟನೇಯ ದಿನ ಸಂಜೆಯೊಳಗೆ ನೀನು ಇಲ್ಲಿ ಬರಬೇಕು ಎಂದು ಹೇಳಿದರು.

ಅದಕ್ಕೆ ಒಪ್ಪಿದ ಶಿಷ್ಯ, ಧನ್ಯವಾದ ಹೇಳಿ, ತನ್ನ ಮನೆಗೆ ಹೊರಟ. ಆದರೆ ಗುರುವಿಗೆ ಮಾತ್ರ, ತನ್ನ ಶಿಷ್ಯ ಇನ್ನೊಂದು ವಾರದಲ್ಲೇ ಮರಣ ಹೊಂದುತ್ತಾನಲ್ಲಾ ಅನ್ನುವ ಬೇಸರ ಕಾಡುತ್ತಿತ್ತು. ಇತ್ತ ಶಿಷ್ಯ ತನ್ನ ಊರಿಗೆ ಹೋಗುವ ಸಂದರ್ಭದಲ್ಲಿ, ಒಂದು ನದಿ ದಾಟಬೇಕಿತ್ತು. ಅವನು ನದಿ ದಾಟಲು ಹೋಗುವ ಸಂದರ್ಭದಲ್ಲಿ, ಅಲ್ಲಿ ಇರುವೆಗಳ ಗುಂಪೊಂದು ಆಟವಾಡುತ್ತಿರುತ್ತದೆ. ಅದನ್ನು ನೋಡಿದ ಶಿಷ್ಯನಿಗೆ ಇಷ್ಟು ಮುದ್ದಾಗಿರುವ ಇರುವೆಗಳು ನದಿಗೆ ಬಿದ್ದರೆ, ಅಥವಾ ನದಿಯ ನೀರು ಅದರ ಮನೆ ಮೇಲೆ ಬಿದ್ದರೆ, ಅವುಗಳಿಗೆ ಹಾನಿಯಾಗಬಹುದು ಎಂದು ಅವನು ಯೋಚಿಸುತ್ತಾನೆ.

ಮತ್ತು ನದಿಯ ನೀರು ಅವುಗಳಿಗೆ ತೊಂದರೆ ಕೊಡದಂತೆ, ಮಣ್ಣಿನಿಂದ ಸಣ್ಣ ಸೇತುವೆ ನಿರ್ಮಿಸಿ, ಅಲ್ಲಿಂದ ಹೋಗುತ್ತಾನೆ. 7 ದಿನಗಳ ಕಾಲ ಶಿಷ್ಯ ಅವನ ಕುಟುಂಬಸ್ಥರೊಂದಿಗೆ ಕಾಲ ಕಳೆಯುತ್ತಾನೆ. 7ನೇ ದಿನ ಮುಗಿದು ಎಂಟನೇಯ ದಿನಕ್ಕೆ ತನ್ನ ಗುರುಗಳ ಬಳಿ ಹೊರಡಲು ಅಣಿಯಾಗುತ್ತಾನೆ. ಅತ್ತ ಗುರು, ಇಷ್ಟೊತ್ತಿಗೆ ಶಿಷ್ಯ ಇಹಲೋಕವನ್ನು ತ್ಯಜಿಸಿರುತ್ತಾನೆ ಎಂದು ಯೋಚಿಸುತ್ತಾ, ಬೇಸರದಲ್ಲಿರುತ್ತಾನೆ.

ಗುರು ತನ್ನ ಶಿಷ್ಯ ಸಾವನ್ನಪ್ಪಿರಬಹುದು ಎಂದು ಯೋಚಿಸುತ್ತಿರುವಾಗಲೇ, ಅವರ ಶಿಷ್ಯ ನಗು ನಗುತ್ತ ಗುರುಗಳ ಬಳಿ ಬಂದು ಅವರ ಕಾಲಿಗೆ ನಮಸ್ಕರಿಸುತ್ತಾನೆ. ಗುರುವಿಗೆ ಆಶ್ಚರ್ಯವಾಗುತ್ತದೆ. ಇದು ಹೇಗೆ ಸಾಧ್ಯ, ಇವನು ಇನ್ನು 7 ದಿನಗಳಲ್ಲಿ ಸಾವನ್ನಪ್ಪುತ್ತಾನೆಂದು ನನಗೆ ತಿಳಿದಿತ್ತು. ಆದರೆ ಎಂಟನೇಯ ದಿನವಾದ್ರೂ ಇವನು ಜೀವಂತವಿದ್ದಾನೆ. ಇದು ಹೇಗೆ ಸಾಧ್ಯವೆಂದು ಗುರುವಿಗೆ ಆಶ್ಚರ್ಯವಾಗುತ್ತದೆ. ಅವರು ಶಿಷ್ಯನಲ್ಲಿ ಮನೆಗೆ ಹೋಗುವಾಗ, ಹೋದ ಮೇಲೆ ಏನೇನು ನಡಿಯಿತು ಎಂದು ಕೇಳುತ್ತಾರೆ.

ಅದಕ್ಕೆ ಶಿಷ್ಯ, ಹೋಗುವಾಗ ನಡೆದ ಘಟನೆಯನ್ನೆಲ್ಲ ಗುರುವಲ್ಲಿ ಹೇಳುತ್ತಾನೆ. ಆಗ ಗುರುಗಳಿಗೆ ಇವನು ಲೆಕ್ಕವಿಲ್ಲದಷ್ಟು ಇರುವೆಗಳ ಜೀವ ಉಳಿಸಿದ್ದಾನೆ. ಹಾಗಾಗಿ ಇವನ ಆಯುಷ್ಯ ಹೆಚ್ಚಿದೆ ಎಂದು ಅರ್ಥ ಮಾಡಿಕೊಳ್ಳುತ್ತಾರೆ. ಈ ರೀತಿ ಆ ಶಿಷ್ಯ ಮಾಡಿದ ಒಳ್ಳೆಯ ಕೆಲಸಕ್ಕೆ ತಕ್ಕ ಕರ್ಮ ಅವನಿಗೆ ಕಾಪಾಡಿತು.

ಪಾಂಡವರು ಕುಂಭಕರಣನ ತಲೆ ಬುರುಡೆಯಲ್ಲಿ ಹೋಗಿದ್ದರಂತೆ.. ಯಾಕೆ ಗೊತ್ತಾ..?

ಶ್ರೀಕೃಷ್ಣನಿಗೇಕೆ ಛಪ್ಪನ್ನಾರು ಭೋಜನವನ್ನ ನೈವೇದ್ಯ ಮಾಡಲಾಗತ್ತೆ..?

ಚೈತ್ರ ನವರಾತ್ರಿಯಲ್ಲಿ ದುರ್ಗೆಯ ಮೂರ್ತಿಯನ್ನ ಯಾವ ಮಣ್ಣಿನಿಂದ ಮಾಡಲಾಗತ್ತೆ ಗೊತ್ತಾ..?

- Advertisement -

Latest Posts

Don't Miss