Sunday, September 8, 2024

Latest Posts

ಎಲ್ಲ ಸಮಯದಲ್ಲೂ ಖುಷಿಯಾಗಿರಬೇಕು ಅಂದ್ರೆ ಈ ಕಥೆ ಓದಿ..

- Advertisement -

ಎಲ್ಲ ಸಮಯದಲ್ಲೂ ಖುಷಿಯಾಗಿರುವ ಮನುಷ್ಯ, ಜೀವನದಲ್ಲಿ ಎಂಥ ಸಮಸ್ಯೆ ಬಂದರೂ ಅದನ್ನು ದಾಟಿ ಬರಬಲ್ಲ. ಆದ್ರೆ ಹಾಗಿರಲು ಎಲ್ಲರಿಂದ ಸಾಧ್ಯವಿಲ್ಲ. ಯಾರಾದರೂ ನಮ್ಮ ಬಗ್ಗೆ ಸ್ವಲ್ಪ ತಪ್ಪು ಮಾತನಾಡಿದರೆ, ನಮಗೆ ಕೋಪ ಬರುತ್ತದೆ. ನಮ್ಮ ಪ್ರೀತಿಪಾತ್ರರು ನಮಗೆ ಬೈದರೆ, ದುಃಖವಾಗುತ್ತದೆ. ನಮ್ಮ ಬಳಿ ಕೆಲವು ವಸ್ತುಗಳು ಇರದೇ, ಅದು ಬೇರೆಯವರ ಬಳಿ ಇದ್ದಾಗ, ಅದನ್ನು ನೋಡಿ ನಮಗೆ ದುಃಖವಾಗುತ್ತದೆ. ಆದ್ರೆ ನೀವು ಇದ್ದುದರಲ್ಲೇ ಖುಷಿಯಾಗಿರಬೇಕು ಅಂದ್ರೆ ಇವತ್ತು ನಾವು ಹೇಳುವ ಕಥೆ ಕೇಳಬೇಕು.

ಒಂದೂರಿನಲ್ಲಿ ಓರ್ವ ಬೌದ್ಧ ಭಿಕ್ಷು ಮತ್ತು ಅವನ ಶಿಷ್ಯನಿದ್ದ. ಭಿಕ್ಷುವಿಗೆ ವಯಸ್ಸಾಗಿತ್ತು. ಜೀವನದ ಅನುಭವವಿತ್ತು. ಆದರೆ ಶಿಷ್ಯ ಯುವಕನಾಗಿದ್ದ. ಇಬ್ಬರೂ 8 ತಿಂಗಳು ಊರೂರು ಸುತ್ತಿ, ಪ್ರವಚನ ಹೇಳುತ್ತಿದ್ದರು. ಮಳೆಗಾಲದಲ್ಲಿ ಒಂದು ಕುಟೀರವನ್ನು ನಿರ್ಮಿಸಿ, ಅದರಲ್ಲಿ ವಾಸಿಸುತ್ತಿದ್ದರು. ಒಮ್ಮೆ ಗುಡುಗು ಸಿಡಿಲು ಸಮೇತ ಜೋರಾಗಿ ಮಳೆ ಬಂತು. ಎರಡು ದಿನ ಕುಟೀರ ಸರಿಯಾಗಿ ಇತ್ತು. ಆದರೆ ಮೂರನೇ ದಿನ ಸುರಿದ ಮಳೆಯ ರಭಸಕ್ಕೆ ಕುಟೀರದ ಅರ್ಧ ಛಾವಣಿ ಕುಸಿದು ಬಿತ್ತು.

ಈ ಸಂಗತಿಗಳನ್ನು ತಿಳಿಯದಿದ್ದಲ್ಲಿ ಬಡವರಾಗಿಯೇ ಉಳಿಯುತ್ತೀರಿ.. ಅರ್ಥಪೂರ್ಣ ಕಥೆ.. ಭಾಗ 2

ಶಿಷ್ಯನಿಗೆ ಸಿಕ್ಕಾಪಟ್ಟೆ ಕೋಪ ಬಂತು. ನಾವು ವರ್ಷದ 8 ತಿಂಗಳು ಊರೂರು ಸುತ್ತಿ ದೇವರ ಬಗ್ಗೆ ಪ್ರವಚನ ಮಾಡುತ್ತೇವೆ. ಆದ್ರೆ ದೇವರು ನಮ್ಮಂಥ ಪಾಪದವರಿಗೆ ಹೀಗೆ ಮಾಡಿಬಿಟ್ಟ ಎಂದು ದೇವರಿಗೆ ಹಿಗ್ಗಾಮುಗ್ಗಾ ಬೈಯ್ಯುತ್ತಿದ್ದ. ಆದರೆ ಅವನ ಪಕ್ಕದಲ್ಲೇ ಕುಳಿತು ದೇವರ ಫೋಟೋವನ್ನು ನೋಡಿ, ಆನಂದ ಬಾಷ್ಪ ಸುರಿಸುತ್ತಿದ್ದ ಬೌದ್ಧ ಭಿಕ್ಷು.

ಅವನು ಈ ರೀತಿ ಹೇಳುತ್ತಿದ್ದ. ನೀನು ನಮ್ಮನ್ನು ಕಾಪಾಡಿದ್ದಕ್ಕೆ ಧನ್ಯವಾದಗಳು. ನಾವು ಇಷ್ಟು ದಿನ ನಿನ್ನ ಬಗ್ಗೆ ಪ್ರವಚನ ಮಾಡಿದ್ದಕ್ಕೂ ಸಾರ್ಥಕವಾಯಿತು. ಗಾಳಿಗೆ ಕೋಪ ಬಂದು, ಅದು ನಮ್ಮ ಅರ್ಧ ಛಾವಣಿಯನ್ನ ಕಿತ್ತುಕೊಂಡು ಹೋಯಿತು. ಇನ್ನರ್ಧ ಛಾವಣಿಯನ್ನ ಉಳಿಸಿ, ನಮ್ಮನ್ನು ಬಚಾಯಿಸಿದ್ದು ನೀನೇ ಆಗಿರುತ್ತಿ. ಹಾಗಾಗಿ ನಿನಗೆ ಕೋಟಿ ಕೋಟಿ ನಮನಗಳು ಎನ್ನುತ್ತಾನೆ. ಇದನ್ನು ಕೇಳಿಸಿಕೊಂಡ ಶಿಷ್ಯನಿಗೆ ಕೋಪ ಬರುತ್ತದೆ. ಅವನು ಸಿಟ್ಟಿನಿಂದ ಮಲಗುತ್ತಾನೆ.

ಈ ಸಂಗತಿಗಳನ್ನು ತಿಳಿಯದಿದ್ದಲ್ಲಿ ಬಡವರಾಗಿಯೇ ಉಳಿಯುತ್ತೀರಿ.. ಅರ್ಥಪೂರ್ಣ ಕಥೆ.. ಭಾಗ 1

ಆ ರಾತ್ರಿ ಗುರುವು ನೆಮ್ಮದಿಯಿಂದ ಕಣ್ತುಂಬ ನಿದ್ದೆ ಮಾಡುತ್ತಾನೆ. ಆದ್ರೆ ಶಿಷ್ಯ ಮಾತ್ರ ಎಲ್ಲಿ ಮಳೆ ಬರುತ್ತದೆಯೋ ಅನ್ನೋ ಚಿಂತೆಯಲ್ಲಿ ನಿದ್ದೆಯೇ ಮಾಡುವುದಿಲ್ಲ. ಮುಂಜಾನೆ 4 ಗಂಟೆಗೆ ಗುರುವಿಗೆ ಎಚ್ಚರವಾದಾಗ, ಅವನು ಆಕಾಶದಲ್ಲಿ ಚಂದ್ರನನ್ನು ನೋಡುತ್ತಾನೆ. ಆ ದೃಶ್ಯ ಸುಂದರವಾಗಿ ಕಾಣುತ್ತದೆ. ಆಗ ಆ ಗುರುವು ಹೇಳುತ್ತಾನೆ. ಈ ಆಕಾಶ ಈ ವೇಳೆ ಇಷ್ಟು ಚೆಂದವಾಗಿ ಕಾಣುತ್ತದೆ ಎಂದು ನನಗೆ ಗೊತ್ತಿರಲೇ ಇಲ್ಲ. ಗೊತ್ತಿದ್ದರೆ, ನಾನು ಅರ್ಧ ಚಾವಣಿಯನ್ನು ತೆಗೆದಿಡುತ್ತಿದೆ. ಗಾಳಿಗೆ ಈ ಅವಕಾಶವನ್ನೇ ಕೊಡುತ್ತಿರಲಿಲ್ಲ ಎನ್ನುತ್ತಾನೆ. ಈ ಕಥೆಯ ತಾತ್ಪರ್ಯವೇನೆಂದರೆ, ನಾವು ಇರುವುದರಲ್ಲೇ ಎಷ್ಟು ಖುಷಿಯಾಗಿರುತ್ತೇವೋ, ಆಗ ನಮ್ಮ ಖುಷಿಯನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ.

- Advertisement -

Latest Posts

Don't Miss