Friday, April 11, 2025

Latest Posts

ದಾನ-ಧರ್ಮ, ಪೂಜೆ ಪುನಸ್ಕಾರ ಮಾಡಿದ್ದರೂ ಜನಕರಾಜ ನರಕಕ್ಕೆ ಹೋದ.. ಯಾಕೆ ಗೊತ್ತಾ..?

- Advertisement -

ಹಿಂದಿನ ಕಾಲದಲ್ಲಿ ರಾಜರೆಲ್ಲ, ದೇವರನ್ನು ಪೂಜಿಸುತ್ತಿದ್ದರು. ದೇವರೊಂದಿಗೆ ಮಾತನಾಡುತ್ತಿದ್ದರು. ಋಷಿ ಮುನಿಗಳ ಮೂಲಕ ದೇವರ ದರ್ಶನ ಮಾಡುತ್ತಿದ್ದರು ಎಂದು ನಾವು ಪುರಾಣ ಕಥೆಗಳಲ್ಲಿ ಕೇಳಿದ್ದೇವೆ. ಜನಕ ರಾಜನೂ ಕೂಡ, ಹಲವು ಪುಣ್ಯ ಕಾರ್ಯಗಳನ್ನು ಮಾಡಿದ್ದ. ದಾನ ಧರ್ಮಗಳನ್ನು ಮಾಡಿದ್ದ. ಆದ್ರೆ ಅವನು ಕೊನೆಗೆ ನರಕಕ್ಕೆ ಹೋಗಬೇಕಾಯಿತು. ಹಾಗಾದ್ರೆ ಜನಕ ರಾಜ ನರಕಕ್ಕೆ ಹೋಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಮಿಥಿಲೆಯ ಮೊದಲ ರಾಜ ನಿಮಿಯಾಗಿದ್ದ. ನಿಮಿಯ ಮಗನೇ ಜನಕ ರಾಜ. ನಿಮಿ ತೀರಿಹೋದ ಬಳಿಕ, ಅವರ ದೇಹದಿಂದ ಜನಕ ರಾಜನ ಜನ್ಮವಾಗಿತ್ತಂತೆ. ಹಾಗಾಗಿ ಜನಕ ಎಂದು ನಾಮಕರಣ ಮಾಡಲಾಯಿತು. ಜನಕ ರಾಜನಿಗೆ ಸಂತಾನವಿರಲಿಲ್ಲ. ಹೀಗಿರುವಾಗ, ತನ್ನ ರಾಜ್ಯದ ಜನ ಬರಗಾಲದಿಂದ ಕಂಗೆಟ್ಟದ್ದನ್ನು ಕಂಡು ಜನಕ ರಾಜನೇ, ಹೊಲ ಊಳಲು ಹೋದ. ಹೀಗೆ ಹೋಗುವಾಗ, ಭೂಮಿಯಲ್ಲಿ ಒಂದು ಪೆಟ್ಟಿಗೆಯಲ್ಲಿ ಒಂದು ಪುಟ್ಟ ಹೆಣ್ಣು ಮಗು ಸಿಕ್ಕಿತು.

ನೇಪಾಳದ ಪಶುಪತಿನಾಥ ದೇವಸ್ಥಾನದ ಸ್ವಾರಸ್ಯಕರ ಸಂಗತಿ..

ದೇವರು ತನ್ನ ಮಡಿಲು ತುಂಬಲು ಈ ಮಗುವನ್ನು ಕಲಿಸಿದ್ದಾನೆಂದು ತಿಳಿದು, ಜನಕ ರಾಜ ಆಕೆಯನ್ನು ತನ್ನ ಸಂತಾನವೆಂದು ಘೋಷಿಸಿದ. ಆಕೆಗೆ ಸೀತೆ, ಜಾನಕಿ ಎಂದು ಹೆಸರಿಟ್ಟ. ಆಕೆ ಮಿಥಿಲೆಯ ಯುವರಾಣಿಯಾಗಿದ್ದಳು. ಆಕೆ ಜನಕನ ಜೀವನದಲ್ಲಿ ಬಂದ ಕೆಲ ವರ್ಷಗಳಲ್ಲೇ ಜನಕನ ಪತ್ನಿ ಮತ್ತೋರ್ವ ಹೆಣ್ಣು ಮಗುವಿಗೆ ಜನ್ಮ ಕೊಟ್ಟಳು. ರಾಜ ಪತ್ನಿ ಮತ್ತು ಮಕ್ಕಳೊಂದಿಗೆ ಸುಖವಾಗಿದ್ದ. ರಾಜ್ಯದ ಜನರ ಒಳಿತಿಗಾಗಿ ಶ್ರಮಿಸುತ್ತಿದ್ದ.

ಹೀಗೆ ದಿನಗಳೆದು ಸೀತೆಯ ವಿವಾಹವಾದ ಬಳಿಕ ಜನಕ ಅನಾರೋಗ್ಯಕ್ಕೀಡಾದ. ಜನಕನ ಸಾವು ಸಮೀಪಿಸಿತು. ಜನಕನ ಮರಣವಾಯಿತು. ಯಮದೂತರು ಬಂದು ಜನಕನನ್ನು ನರಕಕ್ಕೆ ಕರೆದೊಯ್ದರು. ಅಲ್ಲಿ ಕೆಲವರು, ನೀವು ಇಲ್ಲೇ ಇದ್ದುಬಿಡಿ, ನೀವು ಬಂದ ಕೂಡಲೇ ನಮಗೆ ನೆಮ್ಮದಿ ಸಿಕ್ಕಂತಾಗಿದೆ ಎನ್ನುತ್ತಾರೆ. ಆಗ ಜನಕರಾಜ, ಯಮನನ್ನು ಕುರಿತು, ಇವರಿಗೆಲ್ಲ ಯಾಕೆ ಶಿಕ್ಷೆ ಸಿಕ್ಕಿದೆ. ಇವರು ಇದರಿಂದ ಹೇಗೆ ಮುಕ್ತಿ ಹೊಂದುತ್ತಾರೆಂದು ಕೇಳುತ್ತಾನೆ.

ನಿಮಗೆ ಇಂಥ ಕನಸು ಬಿದ್ದಲ್ಲಿ ಈ ಬಗ್ಗೆ ಯಾರಲ್ಲಿಯೂ ಹೇಳಬೇಡಿ..

ಅದಕ್ಕೆ ಯಮ, ಇವರೆಲ್ಲ ಹೆಣ್ಣಿನ ಮೇಲೆ ಅತ್ಯಾಚಾರ, ಕೊಲೆ, ಮೋಸ ವಂಚನೆ ಮಾಡಿ ಬಂದವರು. ಹಾಗಾಗಿ ಇವರನ್ನು ನರಕಕ್ಕೆ ಹಾಕಲಾಗಿದೆ ಎನ್ನುತ್ತಾನೆ. ಇವರಿಗೆ ಮುಕ್ತಿ ಸಿಗಬೇಕೆಂದರೆ, ಇವರಿಗೆ ಯಾರಾದ್ರೂ ತಮ್ಮ ಪುಣ್ಯ ದಾನ ಮಾಡಬೇಕು ಎನ್ನುತ್ತಾನೆ.

ಆಗ ಜನಕ ತಾನು ರಾಮ ನಾಮ ಜಪಿಸಿ ಮಾಡಿದ ಪುಣ್ಯವನ್ನು ಅವರಿಗೆ ದಾನ ಮಾಡಿ, ಅವರನ್ನು ನರಕದಿಂದ ಮುಕ್ತಿ ಮಾಡುತ್ತಾನೆ. ನಂತರ ಜನಕ, ಯಮನನ್ನು ಕುರಿತು, ಹಾಗಾದರೆ ನಾನೇನು ಪಾಪ ಮಾಡಿದ್ದೆ..? ನನ್ನನ್ಯಾಕೆ ನರಕಕ್ಕೆ ತಂದಿದ್ದೀರಿ ಎಂದು ಕೇಳಿದ. ಅದಕ್ಕೆ ಯಮ, ನಿಮ್ಮನ್ನು ಕೊಂಚ ಸಮಯಕ್ಕಾಗಿ ನರಕಕ್ಕೆ ತರಲಾಗಿತ್ತು. ನೀವು ಸುಮ್ಮನೆ ಹೋಗುತ್ತಿದ್ದ ಹಸುವನ್ನು ತಡೆದು ನಿಲ್ಲಿಸಿದ್ದ ಕಾರಣಕ್ಕೆ ನರಕಕ್ಕೆ ಹಾಕಲಾಗಿತ್ತು. ಆದರೆ ನೀವು ಪುಣ್ಯ ದಾನ ಮಾಡಿದ್ದಕ್ಕೆ, ನಿಮ್ಮ ಪುಣ್ಯ ಇನ್ನಷ್ಟು ಹೆಚ್ಚಾಗಿದೆ. ಹಾಗಾಗಿ ನಾವೀಗ ನಿಮ್ಮನ್ನು ಸ್ವರ್ಗಕ್ಕೆ ಕರೆದೊಯ್ಯುತ್ತೇವೆ ಎಂದು ಹೇಳುತ್ತಾರೆ. ಹೀಗೆ ನರಕ್ಕೆ ಹೋಗಬೇಕಾದ ಜನಕರಾಜ ಪುಣ್ಯ ದಾನ ಮಾಡಿ, ಸ್ವರ್ಗಕ್ಕೆ ಹೋಗುತ್ತಾನೆ.

- Advertisement -

Latest Posts

Don't Miss