ಈ ಭೂಮಿಯ ಮೇಲೆ ಜನಿಸುವ ಪ್ರತೀ ಮಗುವೂ, ತಾಯಿಯ ಗರ್ಭದಿಂದ ಜನ್ಮ ಪಡೆಯುತ್ತದೆ. ಹಾಗಾಗಿಯೇ ತಾಯಿಗೆ ಉನ್ನತ ಸ್ಥಾನವನ್ನ ನೀಡಲಾಗಿದೆ. ಆದ್ರೆ ಇಂದಿನ ವಿಜ್ಞಾನ ಮುಂದುವರೆದಿದ್ದು, ಒಂದಿಬ್ಬರು ಪುರುಷರು ಮಗುವನ್ನು ಹೆತ್ತಿದ್ದು ನಿಜ. ಆದ್ರೆ ಹಿಂದಿನ ಕಾಲದಲ್ಲೇ ನಮ್ಮ ಪೂರ್ವಜರು ಇಂಥದ್ದೊಂದು ಕೆಲಸವನ್ನ ಆಗಲೇ ಮಾಡಿದ್ದರು. ಹೀಗೆ ರಘುವಂಶದ ರಾಜನೋರ್ವ ಪುತ್ರನಿಗೆ ಜನ್ಮ ಕೊಟ್ಟಿದ್ದನಂತೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..
ರಘುವಂಶದ ರಾಜ ಇಕ್ಷ್ವಾಕು ಅಯೋಧ್ಯೆಯನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು, ಇಕ್ಷ್ವಾಕು ವಂಶವನ್ನು ಸ್ಥಾಪಿಸಿದ. ಈ ವಂಶದಲ್ಲಿಯೇ ಯುವನಾಶ್ ಎಂಬ ರಾಜನಿದ್ದ. ಅವನಿಗೆ ಸಂತಾನವಿರಲಿಲ್ಲ. ಹಾಗಾಗಿ ರಾಜ ತನ್ನೆಲ್ಲ ಆಸ್ತಿಯನ್ನು ಬಿಟ್ಟು ಕಾಡಿಗೆ ಹೋಗಿ ತಪಸ್ಸು ಮಾಡಿದ. ಅಲ್ಲಿ, ಚ್ಯವನ ಋಷಿ ಯುವನಾಶನನ್ನು ಭೇಟಿಯಾದರು.
ಅವನಿಗೆ ಸಂತಾನ ಪ್ರಾಪ್ತಿಯಾಗಲಿ ಎಂದು ಯಜ್ಞ ಮಾಡಿದರು. ಆ ಯಜ್ಞದಲ್ಲಿ ಒಂದು ಮಡಿಕೆ ನೀರನ್ನು ನೈವೇದ್ಯ ಮಾಡಿ, ಅದನ್ನು ರಾಜನಿಗೆ ನೀಡಿದರು. ಅದನ್ನು ರಾಜನ ಪತ್ನಿ ಕುಡಿದರೆ, ಅವಳಿಗೆ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಅವರವರೇ ಹೇಳಿಕೊಂಡರು. ಅಲ್ಲದೇ, ಈ ನೀರನ್ನು ನಾಳೆ ರಾಜನಿಗೆ ನೀಡಬೇಕು ಎಂದು ಹೇಳಿ, ಎಲ್ಲರೂ ತಮ್ಮ ತಮ್ಮ ಕುಟೀರಕ್ಕೆ ಹೋಗಿ ಮಲಗಿದರು.
ಮಧ್ಯರಾತ್ರಿ ರಾಜನಿಗೆ ಬಾಯಾರಿಕೆಯಾಯಿತು. ಅವನು ಎಲ್ಲ ಋಷಿಗಳನ್ನೂ ಕೂಗಿ ಕರೆದ. ಆದ್ರೆ ಅವನ ಕೂಗಿಗೆ ಯಾರೂ ಓಗೊಡಲಿಲ್ಲ. ರಾಜ ಎಷ್ಟೇ ಹುಡುಕಿದರೂ, ನೀರು ಸಿಗಲಿಲ್ಲ. ಆಗ ಒಂದು ಮಡಿಕೆಯಲ್ಲಿ ನೀರಿಟ್ಟಿದ್ದು ಕಂಡಿತು. ರಾಜ ಅದನ್ನು ಗಟ ಗಟನೆ ಕುಡಿದು ಮಲಗಿದ. ಮರುದಿನ ಋಷಿ ಮುನಿಗಳು ನೋಡಿದಾಗ, ಮಡಿಕೆಯಲ್ಲಿನ ನೀರು ಖಾಲಿಯಾಗಿತ್ತು. ನಂತರ ಅದನ್ನು ರಾಜ ಕುಡಿದನೆಂದು ಗೊತ್ತಾಯಿತು.
ಚಳಿಗಾಲದಲ್ಲಿ ಹೆರಿಗೆಯಾದರೆ ಈ 6ಪದಾರ್ಥಗಳನ್ನು ತೆಗೆದುಕೊಳ್ಳಲೇಬೇಕು…!
ರಾಜನ ಈ ಎಡವಟ್ಟಿನಿಂದ, ರಾಜನ ಪತ್ನಿ ಗರ್ಭವತಿಯಾಗುವುದು ಬಿಟ್ಟು, ರಾಜನೇ ಗರ್ಭ ಧರಿಸಿದ. ಸಮಯ ಕಳೆದ ಬಳಿಕ ಅಶ್ವಿನಿ ದೇವತೆಗಳು ಬಂದು, ರಾಜನಿಗೆ ಶಸ್ತ್ರ ಚಿಕಿತ್ಸೆ ಮಾಡಿ, ರಹಾಜನ ಗರ್ಭದಿಂದ ಮಗುವನ್ನು ತೆಗೆದರು. ಈಗ ಮಗುವಿಗೆ ಆಹಾರ ಹೇಗೆ ಕೊಡುವುದು ಅನ್ನುವ ಯೋಚನೆ ಶುರುವಾಯಿತು. ಆಗ ಇಂದ್ರದೇವ ನಾನು ಈ ಮದುವಿಗೆ ಹಾಲು ಕೊಡುತ್ತೇನೆಂದು ಹೇಳಿ, ಮಗುವಿನ ಬಾಯಿಗೆ ತನ್ನ ಬೆರಳನ್ನು ಹಾಕಿದ. ನಂತರ ಮಮ ಧಾತಾ ಎಂದ. ಅಂದರೆ, ನಾನು ಈ ಮಗುವಿಗೆ ತಾಯಿ ಎಂದು ಅರ್ಥ. ಹಾಗಾಗಿ ಆ ರಾಜನ ಹೆಸರು ಮಂಧಾತಾ ಎಂದು ಇಡಲಾಯಿತು.




