ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ನಿಮಗೆ ಮೊದಲ ಭಾಗದಲ್ಲಿ ಅರ್ಧ ಕಥೆಯನ್ನು ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ ಉಳಿದ ಕಥೆಯ ಬಗ್ಗೆ ತಿಳಿಯೋಣ.
ವಿಷ್ಣುವಿನ ಸವಿ ನುಡಿಯನ್ನ ಕೇಳಿ ಸಂತೋಷಗೊಂಡ ಭೃಗುಋಷಿ, ಲೋಕ ಕಲ್ಯಾಣಕ್ಕಾಗಿ ಮಾಡುತ್ತಿರುವ ಯಾಗದಲ್ಲಿ ನೀವು ಪುರೋಹಿತರಾಗಿ ಬರಬೇಕೆಂದು ಹೇಳಿ ಹೋಗುತ್ತಾರೆ. ಆಗ ಕ್ರೋಧಿತಳಾದ ಲಕ್ಷ್ಮೀ, ಅವರು ನಿಮ್ಮ ಎದೆಗೆ ಒದ್ದರೂ ನೀವ್ಯಾಕೆ ಅವರಿಗೆ ಕ್ಷಮಿಸಿದ್ರಿ, ಶಿಕ್ಷಿಸಲಿಲ್ಲ ಎಂದು ಕೇಳುತ್ತಾಳೆ. ಆಗ ವಿಷ್ಣು, ಋಷಿಗಳು ನಮಗಿಂತ ಹಿರಿಯರಾಗಿರುತ್ತಾರೆ. ಹಾಗಾಗಿ ಅವರನ್ನು ನಾವು ಶಿಕ್ಷಿಸುವುದಿಲ್ಲ ಎನ್ನುತ್ತಾನೆ. ಆದರೆ ನಾನು ನಿಮ್ಮ ಹೃದಯದಲ್ಲಿರುವವಳು. ಅವರು ನಿಮ್ಮ ಎದೆಗೆ ಒದ್ದರೆ, ನನಗೆ ಒದ್ದ ಹಾಗೆ ಎಂದು ಹೇಳಿ, ಕೋಪಗೊಂಡು ಭೂಲೋಕಕ್ಕೆ ಹೋಗುತ್ತಾಳೆ.
ಕುಬೇರನಿಂದ ಶ್ರೀವಿಷ್ಣು ಸಾಲ ಪಡೆಯಲು ಕಾರಣವೇನು..?- ಭಾಗ 1
ಭೂಲೋಕದಲ್ಲಿ ಶ್ರೀಮಂತ ರಾಜನ ಕುಟುಂಬದಲ್ಲಿ ಪದ್ಮಾವತಿಯಾಗಿ ಲಕ್ಷ್ಮೀ ಜನಿಸುತ್ತಾಳೆ. ಆಕೆಯ ಜನನದಿಂದ ಆ ರಾಜ್ಯ ಶ್ರೀಮಂತ ರಾಜ್ಯವಾಗುತ್ತದೆ. ಲಕ್ಷ್ಮೀಯನ್ನು ಹುಡುಕುವ ಸಲುವಾಗಿ ವಿಷ್ಣು, ಶ್ರೀನಿವಾಸನಾಗಿ ಜನ್ಮ ತಾಳುತ್ತಾನೆ. ಇಬ್ಬರೂ ವಯಸ್ಸಿಗೆ ಬರುತ್ತಾರೆ. ಶ್ರೀನಿವಾಸ ಎಷ್ಟೇ ಹುಡುಕಿದರೂ ಲಕ್ಷ್ಮೀ ದೇವಿ ಸಿಗುವುದಿಲ್ಲ.
ಒಮ್ಮೆ ಲಕ್ಷ್ಮೀಯನ್ನು ಹುಡುಕಿಕೊಂಡು ಶ್ರೀನಿವಾಸ ಕಾಡಿಗೆ ಹೋಗುತ್ತಾನೆ. ಅಲ್ಲಿ ನಾಲ್ಕೈದು ಜನ ಹೆಣ್ಣು ಮಕ್ಕಳು ಅವನನ್ನು ಅಡ್ಡಗಟ್ಟಿ, ಇದು ನಾವು ವಾಯುವಿಹಾರಕ್ಕೆ ಬಂದ ಜಾಗ, ಇಲ್ಲಿ ಪುರುಷರು ಬರುವಂತಿಲ್ಲ ಎಂದು ಹೇಳಿ ಕಳುಹಿಸುತ್ತಾರೆ. ಅದರಲ್ಲಿ ಪದ್ಮಾವತಿಯೂ ಇರುತ್ತಾಳೆ. ಆಕೆಗೆ ಇದು ತನ್ನ ಶ್ರೀವಿಷ್ಣು ಎಂದು ಗೊತ್ತಾಗುತ್ತದೆ. ಮತ್ತು ಶ್ರೀನಿವಾಸನಿಗೂ ಆಕೆ ಪದ್ಮಾವತಿ ಎಂದು ಗೊತ್ತಾಗುತ್ತದೆ. ಆದ್ರೆ ಇಬ್ಬರೂ ತಮ್ಮ ತಮ್ಮ ಮನೆಗೆ ಹೋಗುತ್ತಾರೆ.
ರಾಮಾಯಣ ಕಾಲದ ಈ ಶಾಪಗಳು ಈಗಲೂ ಜನ ಅನುಭವಿಸುತ್ತಿದ್ದಾರೆ..
ಶ್ರೀನಿವಾಸ ತನ್ನ ಕುಟೀರಕ್ಕೆ ಬಂದು, ಗುರುಮಾತೆಯಲ್ಲಿ ತನ್ನನ್ನು ಪದ್ಮಾವತಿಯೊಂದಿಗೆ ವಿವಾಹ ಮಾಡಿಕೊಡುವಂತೆ ಕೇಳುತ್ತಾನೆ. ಮಗನ ಇಚ್ಛೆಯಂತೆ ಗುರು ಮಾತೆ, ರಾಜನ ಅರಮನೆಗೆ ಹೋಗಿ, ಪದ್ಮಾವತಿಯನ್ನು ತನ್ನ ಪುತ್ರ ಶ್ರೀನಿವಾಸನೊಂದಿಗೆ ವಿವಾಹ ಮಾಡಿಕೊಡುವಂತೆ ಕೇಳುತ್ತಾಳೆ. ಆಗ ರಾಜ ಗುರು ಬೃಹಸ್ಪತಿಯ ಬಳಿ ಹೋಗಿ, ಈ ಸಂಬಂಧದ ಬಗ್ಗೆ ಕೇಳುತ್ತಾನೆ.
ಆಗ ಬೃಹಸ್ಪತಿ ನಿಶ್ಚಿಂತೆಯಿಂದ ವಿವಾಹ ಮಾಡು. ಆಕೆಯ ಜನ್ಮವಾಗಿರುವುದೇ ಈ ವಿವಾಹಕ್ಕಾಗಿ ಎನ್ನುತ್ತಾನೆ. ಆಗ ರಾಜ, ಗುರುಮಾತೆಯನ್ನು ಮತ್ತೆ ಅರಮನೆಗೆ ಕರೆಸಿ, ಈ ಮದುವೆಗೆ ಒಪ್ಪಿಗೆ ನೀಡುತ್ತಾನೆ. ಕುಟೀರಕ್ಕೆ ಹೋಗಿ ಗುರು ಮಾತೆ ಶ್ರೀನಿವಾಸನಿಗೆ ವಿಷಯ ತಿಳಿಸುತ್ತಾಳೆ. ಇದಾದ ಬಳಿಕ ಏನಾಗುತ್ತದೆ ಎಂದು ಮುಂದಿನ ಭಾಗದಲ್ಲಿ ತಿಳಿಯೋಣ..

