ಶ್ರೀನಿವಾಸ ಮತ್ತು ಪದ್ಮಾವತಿ ವಿವಾಹದ ಬಗ್ಗೆ ನಾವು ಎರಡನೇಯ ಭಾಗದಲ್ಲಿ ನಿಮಗೆ ಅರ್ಧ ಕಥೆಯನ್ನು ಹೇಳಿದ್ದೆವು. ಈಗ ಅದರ ಮುಂದುವರಿದ ಕಥೆಯನ್ನು ತಿಳಿಯೋಣ.
ಶ್ರೀನಿವಾಸ ಮತ್ತು ಪದ್ಮಾವತಿ ವಿವಾಹದ ವಿಷಯಕ್ಕೆ ಸಂಬಂಧಿಸಿದಂತೆ, ರಾಜ ಮಾತೆ ಶ್ರೀನಿವಾಸನಿಗೆ ಸುದ್ದಿ ತಿಳಿಸುತ್ತಾಳೆ. ಆದರೆ ನೀನು ಕುಟೀರದಲ್ಲಿರುತ್ತಿ. ಪದ್ಮಾವತಿ ಅರಮನೆಯಲ್ಲಿ ಹುಟ್ಟಿ ಬೆಳೆದ ಹೆಣ್ಣು. ಆಕೆ ವಿವಾಹದ ಬಳಿಕ, ಇಲ್ಲಿ ನಿನ್ನೊಂದಿಗೆ ಹೇಗಿರುತ್ತಾಳೆ ಎಂದು ಕೇಳುತ್ತಾಳೆ. ಈ ಬಗ್ಗೆ ಯೋಚಿಸಿದ ಶ್ರೀನಿವಾಸ, ಹೌದು, ಆಕೆ ಅರಮನೆಯಲ್ಲಿದ್ದವಳು. ಈ ಕುಟೀರಕ್ಕೆ ಬಂದು ಹೇಗಿರುತ್ತಾಳೆ ಎಂದು ಯೋಚಿಸುತ್ತಾನೆ.
ಕುಬೇರನಿಂದ ಶ್ರೀವಿಷ್ಣು ಸಾಲ ಪಡೆಯಲು ಕಾರಣವೇನು..?- ಭಾಗ 1
ನಂತರ ಕುಬೇರನ ಬಳಿ ಸಾಲ ಪಡೆದು ವಿವಾಹವಾಗಿ, ಪದ್ಮಾವತಿಯನ್ನು ಒಳ್ಳೆಯ ಮನೆಯಲ್ಲಿಡಬೇಕು ಎಂದು ನಿರ್ಧರಿಸುತ್ತಾನೆ. ಕುಬೇರನ ಬಳಿ ಶ್ರೀನಿವಾಸ ರಾಶಿ ರಾಶಿ ಸಾಲ ಪಡೆಯುತ್ತಾನೆ. ನಂತರ ಕುಬೇರ, ನೀನು ಸಾಲವೇನೋ ಪಡೆದಿದ್ದಿಯ. ಆದ್ರೆ ಇದನ್ನು ಹೇಗೆ ತೀರಿಸುತ್ತಿಯಾ ಎಂದು ಕೇಳುತ್ತಾನೆ. ಆಗ ಶ್ರೀನಿವಾಸ, ನಾನು ಕಲಿಯುವ ಮುಗಿಯುವುದರೊಳಗಾಗಿ, ಬಡ್ಡಿ ಸಮೇತವಾಗಿ ನಿಮ್ಮ ಸಾಲವನ್ನು ತೀರಿಸುತ್ತೇನೆಂದು ಹೇಳುತ್ತಾನೆ.
ಇದಾದ ಬಳಿಕ ಶ್ರೀನಿವಾಸ ಮತ್ತು ಪದ್ಮಾವತಿಯ ವಿವಾಹ ವಿಜೃಂಭಣೆಯಿಂದ ನೆರವೇರುತ್ತದೆ. ಆ ಶ್ರೀನಿವಾಸನೇ ನಾವು ಪೂಜಿಸುವ ಬಾಲಾಜಿ, ತಿರುಪತಿ ತಿಮ್ಮಪ್ಪ, ಏಳು ಬೆಟ್ಟದ ಅಧಿಪತಿ, ಗೋವಿಂದ. ಕುಬೇರನ ಬಳಿ ಶ್ರೀನಿವಾಸ ಮಾಡಿದ್ದ ಸಾಲವನ್ನೇ ಅವನ ಭಕ್ತರು ಇಂದು ತೀರಿಸುತ್ತಿದ್ದಾರೆ. ನೀವು ವರ್ಷದ ಯಾವ ದಿನ ತಿರುಪತಿಗೆ ಹೋದರು, ಮದುವೆ ಮನೆಯಲ್ಲಿ ಕಾಣುವ ಸದ್ದು ಗದ್ದಲವನ್ನೇ ಅಲ್ಲಿ ಕಾಣುತ್ತೀರಿ.




