ಸೋಂಬೇರಿತನ ಅನ್ನೋದು ನಮ್ಮ ಶತ್ರುವಿದ್ದಂತೆ. ಅದು ಎಲ್ಲಿಯವರೆಗೂ ನಮ್ಮ ಜೊತೆ ಇರುತ್ತದೆಯೋ, ಅಲ್ಲಿಯವರೆಗೂ ನಾವು ಉದ್ಧಾರವಾಗಲು ಸಾಧ್ಯವಿಲ್ಲ. ಹಾಗಾಗಿ ಸೋಂಬೇರಿತನ ಬಿಡಬೇಕು ಅಂತಾ ಹೇಳ್ತಾರೆ ಹಿರಿಯರು. ನಾವಿಂದು ಹೇಳುವ ಕಥೆ ಕೇಳಿದ್ರೆ, ನೀವು ಸೋಂಬೇರಿತನವನ್ನ ಬಿಡುತ್ತೀರಿ. ಹಾಗಾದ್ರೆ ಯಾವುದು ಆ ಕಥೆ ಅಂತಾ ತಿಳಿಯೋಣ ಬನ್ನಿ..
ಗೌತಮ ಬುದ್ಧರಿಗೆ ಮೂರು ಜನ ಶಿಷ್ಯಂದಿರಿದ್ದರು. ಅದರಲ್ಲಿ ಓರ್ವ ಶಿಷ್ಯ ಸೋಂಬೇರಿ ಶಿಷ್ಯನಾಗಿದ್ದ. ಆದರೆ ಗೌತಮ ಬುದ್ಧ ಮೂವರಿಗೂ ಒಂದೇ ರೀತಿಯ ಪ್ರೀತಿ, ಸ್ನೇಹವನ್ನು ಕೊಡುತ್ತಿದ್ದರು. ಒಮ್ಮೆ ಆ ಮೂವರನ್ನು ಕೂರಿಸಿಕೊಂಡು ಬುದ್ಧರು ಕಥೆ ಹೇಳಲು ಶುರು ಮಾಡಿದರು. ಒಂದೂರಲ್ಲಿ ಓರ್ವ ಬ್ರಾಹ್ಮಣನಿದ್ದ. ಅವನು ಉತ್ತಮ ಗುಣವುಳ್ಳ ಬ್ರಾಹ್ಮಣನಾಗಿದ್ದ. ಆದರೆ ಅವನಿಗೆ ಕೆಟ್ಟ ಚಟವೊಂದಿತ್ತು. ಅದೇ ಸೋಂಬೇರಿತನ. ಅವನು ಯಾವುದಾದರೂ ಕೆಲಸ ಮಾಡಲು ಹೊರಟು, ನಾಳೆ ಮಾಡೋಣ, ನಾಡಿದ್ದು ಮಾಡೋಣವೆಂದು ಕೆಲಸವನ್ನು ಮುಂದಕ್ಕೆ ಹಾಕುತ್ತಿದ್ದ. ಯಾಕಂದ್ರೆ ಅವನು ಪ್ರಯತ್ನಕ್ಕಿಂತ ಹೆಚ್ಚು ಭಾಗ್ಯದ ಮೇಲೆ ನಂಬಿಕೆ ಇಟ್ಟಿದ್ದ.
ನೆಮ್ಮದಿ ಬೇಕಂದ್ರೆ ಈ 4 ಸಂಗತಿಯಿಂದ ದೂರವಿರಿ..
ಒಮ್ಮೆ ಆ ಬ್ರಾಹ್ಮಣನ ಮನೆಗೆ ಸಾಧು ಬಂದ. ಸಾಧುವಿಗೆ ಭಕ್ಷ್ಯ ಭೋಜನ ಕೊಟ್ಟು ಸೇವೆ ಮಾಡಿದ. ಬ್ರಾಹ್ಮಣನ ಸೇವೆಗೆ ಮೆಚ್ಚಿದ ಸಾಧು, ಅವನಿಗೊಂದು ಚಿನ್ನದ ಕಲ್ಲನ್ನು ಕೊಟ್ಟ. ನೀನು ಇದನ್ನು ತೆಗೆದುಕೊಂಡು ನಿನಗೆ ಬೇಕಾದಷ್ಟು ಚಿನ್ನ ಮಾಡಿಕೋ, ಎಂಟನೇ ದಿನ ನಾನು ಬಂದು ಈ ಕಲ್ಲನ್ನು ತೆಗೆದುಕೊಂಡು ಹೋಗುತ್ತೇನೆಂದು ಹೇಳಿದ. ಆಗಲಿ ಎಂದ ಬ್ರಾಹ್ಮಣ.
ಮರುದಿನ ಆ ಚಿನ್ನದ ಕಲ್ಲಿನಿಂದ ಕೆಲ ಚಿನ್ನಾಭರಣ ಮಾಡಿಕೊಂಡು, ಅದನ್ನು ಮಾರಿ ಮನೆಗೆ ಬೇಕಾದ ದಿನಸಿ ಸಾಮಾನನ್ನು ತಂದ. ಚಿನ್ನ ಮಾಡಿದ ಕಾರಣ ಮನೆಯಲ್ಲಿದ್ದ ಲೋಹ ಮುಗಿದಿತ್ತು. ಮರುದಿನ ಸೋಂಬೇರಿಯಂತೆ ಬಿದ್ದಿದ್ದ ಆತನನ್ನು ಆತನ ಪತ್ನಿ ಬೈದಳು. ಆಗ ಅವನು ಮಾರುಕಟ್ಟೆಗೆ ಲೋಹ ತರಲು ಹೋದ. ಆದ್ರೆ ಲೋಹದ ಬೆಲೆ ಹೆಚ್ಚಾಗಿತ್ತು. ಮತ್ತೆ ಮರುದಿನ ಹೋದ, ಲೋಹದ ಬೆಲೆ ಮತ್ತೂ ಹೆಚ್ಚಾಗಿತ್ತು. ಆದ್ರೆ ಅವನು ಲೋಹ ಕೊಂಡುಕೊಂಡು ಚಿನ್ನ ಮಾಡಿ ಮಾರಿದ್ದರೆ, ಅದರ ಹತ್ತು ಪಟ್ಟು ಲಾಭ ಬರುತ್ತಿತ್ತು. ಆದ್ರೆ ಅವನು ಲೋಹದ ಬೆಲೆ ಹೆಚ್ಚೆಂದು ಹಾಗೆ ಬಿಟ್ಟು ಬಂದ.
ಚಳಿಗಾಲದಲ್ಲಿ ರಾಗಿಲಡ್ಡು ವಿಶೇಷ.. ಈ ಸಮಸ್ಯೆಗಳಿಗೆ ದಿವ್ಯ ಔಷಧ..!
ಸತತ ಎಂಟು ದಿನಗಳ ಕಾಲ ಇದೇ ರೀತಿ ಮಾರುಕಟ್ಟೆಗೆ ಹೋಗುವುದು. ಲೋಹದ ಬೆಲೆ ಹೆಚ್ಚೆಂದು ಮರಳಿ ಬರುವುದು. ಇದೇ ಆಗಿತ್ತು. ಎಂಟನೇಯ ದಿನ ಸಾಧು ಮನೆಗೆ ಬಂದ. ತನ್ನ ಚಿನ್ನದ ಕಲ್ಲನ್ನು ಕೇಳಿದ. ಆದ್ರೆ ಆ ಬ್ರಾಹ್ಮಣ, ಸಾಧುಗಳೇ ನೀವು ಇನ್ನೊಂದು ವಾರ ನನಗೆ ಸಮಯ ಕೊಡಿ. ನಾನು ಲೋಹ ಖರೀದಿಸಿ, ಚಿನ್ನ ಮಾಡಿಕೊಂಡು, ನಿಮಗೆ ಕಲ್ಲು ಕೊಡುತ್ತೇನೆಂದು ಹೇಳಿದ. ಆದ್ರೆ ಸಾಧು, ಇಲ್ಲ ಇದು ಸಾಧ್ಯವಿಲ್ಲ. ನಿನ್ನ ಸ್ಥಾನದಲ್ಲಿ ಬೇರೆಯವರಿದ್ದರೆ, ಇಷ್ಟೊತ್ತಿಗೆ ಎಷ್ಟೋ ಚಿನ್ನವನ್ನು ಮಾಡಿಕೊಳ್ಳುತ್ತಿದ್ದರು. ನೀನು ಮೂರ್ಖ, ಸೋಂಬೇರಿ, ನೀನೆಂದೂ ಉದ್ಧಾರವಾಗುವುದಿಲ್ಲವೆಂದು ಬೈದು ಹೋದ. ಈ ಕಥೆಯನ್ನು ಹೇಳುತ್ತ ಬುದ್ಧ, ತನ್ನ ಶಿಷ್ಯಂದಿರಿಗೆ ಸೋಂಬೇರಿತನ ಎಂಥ ಶತ್ರು, ಅದರಿಂದ ಎಷ್ಟು ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳುತ್ತಾರೆ.