Thursday, December 5, 2024

Latest Posts

ಭಕ್ತನನ್ನು ಪರೀಕ್ಷಿಸಿದ್ದ ಶ್ರೀಕೃಷ್ಣ.. ಚಿಕ್ಕ ಕಥೆ..

- Advertisement -

ವಿಷ್ಣು, ಶಿವ, ಬ್ರಹ್ಮ, ದುರ್ಗೆ, ಕೃಷ್ಣ ಹೀಗೆ ಎಲ್ಲ ದೇವತೆಗಳ ಬಗ್ಗೆ ನಾವು ನಿಮಗೆ ಹಲವು ಕಥೆಗಳನ್ನು ಹೇಳಿದ್ದೆವು. ಇಂದು ನಾವು ಶ್ರೀಕೃಷ್ಣ ತನ್ನ ಭಕ್ತನನ್ನು ಹೇಗೆ ಪರೀಕ್ಷಿಸಿದ ಅನ್ನೋ ಕಥೆಯನ್ನ ಹೇಳಲಿದ್ದೆವೆ.

ಒಂದೂರಲ್ಲಿ ಓರ್ವ ಕೃಷ್ಣನ ಭಕ್ತನಿದ್ದ. ಅವನ ಹೆಸರು ಗಿರಿಧರ. ಅವನು ಪ್ರತಿದಿನ ಬೆಳಿಗ್ಗೆ ಬೇಗ ಎದ್ದು, ನದಿಯಲ್ಲಿ ಮಿಂದು, ಭಕ್ತಿಯಿಂದ ಶ್ರೀಕೃಷ್ಣನ ಪೂಜೆ ಮಾಡಿ, ಭೀಕ್ಷಾಟನೆ ಮಾಡಿ, ಅವನಿಗೆ ಸಿಕ್ಕ ಆಹಾರವನ್ನು ತಿಂದು, ಆರಾಮವಾಗಿ ನಿದ್ರಿಸುತ್ತಿದ್ದ. ಇದೇ ಅವನ ದಿನನಿತ್ಯದ ಕೆಲಸವಾಗಿತ್ತು.

ಒಮ್ಮೆ ಶ್ರೀಕೃಷ್ಣನಿಗೆ ತನ್ನ ಭಕ್ತನನ್ನು ಪರೀಕ್ಷಿಸಬೇಕು ಅಂತಾ ಅನ್ನಿಸಿತು. ಆಗ ಕೃಷ್ಣ ಒಂದು ಕಟ್ಟೆಯ ಮೇಲೆ ಸ್ವರ್ಣದ ನಾಣ್ಯವಿರುವ ಚೀಲವನ್ನು ಇರಿಸಿದ. ಗಿರಿಧಝರ ಆ ಕಟ್ಟೆಯ ಬಳಿ ಹೋಗುವಾಗ, ಆ ನಾಣ್ಯದ ಚೀಲವನ್ನು ನೋಡಿದ. ಅಕ್ಕ ಪಕ್ಕ ಅದರ ವಾರಸುದಾರರು ಯಾರೂ ಕಾಣಲಿಲ್ಲ. ಇದು ದೇವರ ದಯೆ ಎಂದು ಹೇಳಿ, ಆ ಚೀಲವನ್ನು ಹೊತ್ತುಕೊಂಡು ಹೊರಟ.

ಬಟ್ಟೆಯಲ್ಲಿ ಅಡಗಿದೆ ಭಾಗ್ಯ ಮತ್ತು ದೌರ್ಭಾಗ್ಯ.. ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು..?

ಹಾಗೆ ಹೋಗುವಾಗ ದಾರಿ ನಡುವೆ ಓರ್ವ ಭಿಕ್ಷುಕ ಸಿಕ್ಕ. ಅವನು ಗಿರಿಧರನನ್ನು ಕುರಿತು, ಸ್ವಾಮಿ ನಾನು ಎರಡು ದಿನದದಿಂದ ಊಟ ಮಾಡಿಲ್ಲ. ನಿಮ್ಮಲ್ಲಿರುವ ನಾಣ್ಯದಲ್ಲಿ ಒಂದು ನಾಣ್ಯವನ್ನು ನನಗೆ ಕೊಡಿ, ನಾನು ನನ್ನ ಹೊಟ್ಟೆ ತುಂಬಿಸಿಕೊಳ್ಳುತ್ತೇನೆಂದು ಹೇಳಿದ. ಆದರೆ ಗಿರಿಧರ ದುರಾಸೆಯಿಂದಿದ್ದು, ಭಿಕ್ಷುಕನ ಮಾತು ಕೇಳಿಯೂ ಕೇಳದ ಹಾಗೆ ಹೋದ.

ಆದ್ರೆ ಗಿರಿಧರನನ್ನು ಓರ್ವ ಕಳ್ಳ ಹಿಂಬಾಲಿಸುತ್ತಿದ್ದ. ಗಿರಿಧರ ಮುಂದೆ ಹೋಗುತ್ತಿದ್ದಂತೆ, ಅವನ ಕಾಲಿಗೆ ಗಾಜಿನ ಚೂರು ತಾಕಿ, ನಾಣ್ಯದ ಚೀಲವನ್ನು ಕೆಳಗೆ ಹಾಕಿ, ಗಾಜನನ್ನು ತೆಗೆಯಲು ಹೋದ. ಇದೇ ಸರಿಯಾದ ಸಮಯವೆಂದು ಭಾವಿಸಿದ ಕಳ್ಳ, ಆ ನಾಣ್ಯದ ಚೀಲವನ್ನು ತೆಗೆದುಕೊಂಡು ಓಡಿದ. ಗಿರಿಧರ ಪೇಚು ಮೋರೆ ಹೊತ್ತುಕೊಂಡು, ಮನೆಕಡೆ ನಡೆದ.

ಅವನಿಗೆ ತಾನು ಭಿಕ್ಷುಕನಿಗೆ ಒಂದು ನಾಣ್ಯ ಕೊಟ್ಟಿದ್ದರೆ, ಪುಣ್ಯಾವದರೂ ಲಭಿಸುತ್ತಿತ್ತು ಅನ್ನುವ ಪಶ್ಚಾತಾಪವಿತ್ತು. ಇದನ್ನು ಕಂಡ ಕೃಷ್ಣ ಮನುಷ್ ರೂಪ ಧರಿಸಿ ಬಂದು, ಗಿರಿಧರನಿಗೊಂದು ನಾಣ್ಯ ದಾನ ಮಾಡಿದ. ಗಿರಿಧರ ಅದನ್ನ ತೆಗೆದುಕೊಂಡು ಹೋಗುವಾಗ, ಓರ್ವ ಮನುಷ್ ಮೀರನ್ನು ತನ್ನ ಬಲೆಯಲ್ಲಿ ಹಾಕಿದ್ದ. ಮತ್ತು ಅದರಿಂದ ಆಹಾರ ತಯಾರಿಸಲು ಒಂದು ಪಾತ್ರೆಯನ್ನಿಟ್ಟುಕೊಂಡಿದ್ದ.

ಮಾಂಸಾಹಾರವನ್ನು ನೈವೆದ್ಯವಾಗಿ ಸ್ವೀಕರಿಸುವ ದೇವರು..!

ಇದನ್ನು ಕಂಡ ಭಕ್ತನಿಗೆ ಬೇಸರ ಉಂಟಾಯಿತು. ಅವನು ಆ ಮೀನುಗಾರನ ಬಳಿ ಹೋಗಿ, ನೀನು ಈ ಬಂಗಾರದ ನಾಣ್ಯ ತೆಗೆದುಕೊ, ನನಗೆ ಆ ಮೀನು ಮತ್ತು ಪಾತ್ರೆ ಕೊಡು ಎಂದು ಹೇಳಿದ. ಒದ್ದಾಡುತ್ತಿರುವ ಮೀನನ್ನು ಬಲೆಯಿಂದ ತೆಗೆದು ಪಾತ್ರೆಯಲ್ಲಿ ನೀರು ತುಂಬಿಸಿ, ಆ ಪಾತ್ರೆಗೆ ಹಾಕಿದ. ನಂತರ ಅದನ್ನು ಮನೆಗೆ ತೆಗೆದುಕೊಂಡು ಹೋದ. ಕೆಲ ದಿನಗಳ ಬಳಿಕ, ಆ ಮೀನನ್ನು ಮತ್ತೆ ನದಿಗೆ ಬಿಡಬೇಕು ಎಂದು ಬಂದ. ಪಾತ್ರೆಯಲ್ಲಿದ್ದ ನೀರು ಮತ್ತು ಮೀನನ್ನು ನದಿಗೆ ಬಿಟ್ಟ.

ಆದ್ರೆ ಪಾತ್ರೆಯಲ್ಲಿ ಒಂದು ವಜ್ರವಿತ್ತು. ಆ ವಜ್ರ ಕಂಡು ಗಿರಿಧರನಿಗೆ ಆಶ್ಚರ್ಯವಾಯ್ತು. ಆ ವಜ್ರ ಎಲ್ಲಿಂದ ಬಂತು ಎಂದು ಯೋಚಿಸುತ್ತ ಮಲಗಿದ. ಕನಸ್ಸಿನಲ್ಲಿ ಬಂದ ಶ್ರೀಕೃಷ್ಣ, ಅದು ನಿನಗಾಗಿ ನಾನು ಕಳುಹಿಸಿದ ಉಡುಗೊರೆ. ನೀನು ಒಂದು ಸ್ವರ್ಣವನ್ನು ಅಂದು ಭಿಕ್ಷುಕನಿಗೆ ಕೊಟ್ಟಿದ್ದಿದ್ದರೆ, ಎಲ್ಲ ಸ್ವರ್ಣವೂ ನಿನ್ನದಾಗುತ್ತಿತ್ತು. ಆದ್ರೆ ದುರಾಸೆಯಿಂದ ನೀನು ಅದನ್ನು ಕಳೆದುಕೊಂಡೆ. ಆದ್ರೆ ನೀನು ಮೀನಿಗೆ ಜೀವದಾನ ಮಾಡಿದ್ದಕ್ಕೆ, ಮೀನು ತಾನು ನುಂಗಿದ್ದ ಮಜ್ರವನ್ನು ಆ ಪಾತ್ರೆಗೆ ಹಾಕಿದೆ. ಇನ್ನು ಆ ವಜ್ರ ನಿನ್ನದೇ ಎನ್ನುತ್ತಾನೆ. ಗಿರಿಧರ ಆ ವಜ್ರ ತೆಗೆದುಕೊಂಡು ವ್ಯಾಪಾರ ಆರಂಭಿಸಿ, ದೊಡ್ಡ ವ್ಯಾಪಾರಿಯಾಗುತ್ತಾನೆ.

- Advertisement -

Latest Posts

Don't Miss