Friday, October 18, 2024

Latest Posts

ನಾರದರಿಂದ ಶ್ರೀವಿಷ್ಣು ಮಾಡಿದ ಅವಮಾನಕ್ಕೆ ಸಿಕ್ಕ ಶಾಪವೆಂಥದ್ದು ಗೊತ್ತೇ..?

- Advertisement -

ಸನಾತನ ಧರ್ಮದಲ್ಲಿ ಎಂತೆಂಥ ಘಟನೆಗಳು ನಡೆದಿತ್ತು ಎಂದು ಹಲವು ಕಥೆಗಳನ್ನ ಕೇಳಿ ನಾವು ತಿಳಿದುಕೊಳ್ಳಬಹುದು. ಅಂದೇ ದೇವ ದೇವತೆಗಳಲ್ಲಿ ಪ್ರೀತಿ- ಪ್ರೇಮವಿತ್ತು ಅನ್ನೋದು ಕೂಡ ನಾವು ಕೇಳಿದ್ದೇವೆ, ಓದಿದ್ದೇವೆ. ಅದೇ ರೀತಿ ಶ್ರೀವಿಷ್ಣು ಮತ್ತು ಲಕ್ಷ್ಮೀದೇವಿ ಯಾವ ರೀತಿ ದೂರವಾದರು, ಇದಕ್ಕೆ ಕಾರಣವೇನು..? ಯಾರು ಇವರಿಬ್ಬರಿಗೆ ಶಾಪ ಹಾಕಿದರೂ..? ಈ ಎಲ್ಲ ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ನಾರದರು ತಾನು ಬ್ರಹ್ಮಚಾರಿಯೆಂಬ ಅಹಂ ಹೊಂದಿದ್ದರು. ತ್ರಿಲೋಕ ಸಂಚಾರಿಯಾಗಿದ್ದ ನಾರದರು, ಎಲ್ಲರಿಂದ ತಾನು ಬ್ರಹ್ಮಚಾರಿಯೆಂದು ಪ್ರಶಂಸೆ ಪಡೆದು, ಬೀಗುತ್ತಿದ್ದರು. ಹೀಗಾಗಿ ನಾರದರ ಅಹಂ ಮುರಿಯಲು ಶ್ರೀ ವಿಷ್ಣು ಮಾಯಾನಗರವನ್ನು ಸ್ಥಾಪಿಸಿದ. ಮತ್ತು ಅಲ್ಲಿ ಲಕ್ಷ್ಮೀ ದೇವಿಯ ಸ್ವಯಂವರ ರಚಿಸಿದ. ನಾರದರಿಗೆ ಆ ಮಾಯಾ ನಗರವನ್ನ ರಚಿಸಿದ್ದು ವಿಷ್ಣು ಎಂದು ಗೊತ್ತಿರಲಿಲ್ಲ. ಆದ್ರೆ ಆ ನಗರದಲ್ಲಿ ಸ್ವಯಂವರ ಇದೆ ಎಂಬುದು ಗೊತ್ತಿತ್ತು. ತಾನು ಅಲ್ಲಿ ಹೋಗಿ ಮಧುಮಗಳಿಗೆ ಆಶೀರ್ವದಿಸಿ ಬರೋಣವೆಂದು ನಾರದರು ಹೊರಟರು.

ಯಾರಿಗೆ ಈ ಗುಣಗಳಿರುತ್ತದೆಯೋ, ಅಂಥವರು ನಾಯಕರಾಗುತ್ತಾರೆ..

ಆದ್ರೆ ಮಧುಮಗಳನ್ನು ಹರಸಲು ಹೋದ ನಾರದರಿಗೆ ಮಧುಮಗಳಾದ ಲಕ್ಷ್ಮೀ ದೇವಿಯನ್ನು ಕಂಡು, ತಾನೇ ಇವಳನ್ನು ವರಿಸಬೇಕೆಂಬ ಆಸೆಯುಂಟಾಯಿತು. ಆಗ ನಾರದರು ಶ್ರೀವಿಷ್ಣುವಿನ ಬಳಿ ಹೋಗಿ, ವಿಷ್ಣು, ಹೊಸ ನಗರ ಒಂದರಲ್ಲಿ, ಸುಂದರ ಹೆಣ್ಣಿನ ಸ್ವಯಂವರ ರಚಿಸಲಾಗಿದೆ. ನಾನೂ ಅದರಲ್ಲಿ ಪಾಲ್ಗೊಂಡು, ಆಕೆಯ ಮನಸ್ಸನ್ನು ಗೆದ್ದು, ಆಕೆಯನ್ನ ವರಿಸಬೇಕು. ಅದಕ್ಕಾಗಿ ನಿನ್ನ ಸಹಾಯ ಬೇಕು ಎನ್ನುತ್‌ತಾನೆ.

ಆಗ ವಿಷ್ಣು , ನನ್ನಿಂದೇನು ಸಹಾಯವಾಗಬೇಕು ಹೇಳಿ ನಾರದರೇ ಎಂದು ಕೇಳುತ್ತಾನೆ. ಆಗ ನಾರದರು, ನನಗೂ ನಿನ್ನಂತೆ ಸುಂದರಗೊಳಿಸು, ನಾನು ನಿನ್ನಂತೆ ಗಮನ ಸೆಳೆಯುವ ಸೌಂದರ್ಯ ಹೊಂದಬೇಕು. ಆಕೆ ನನ್ನನ್ನು ನೋಡಿದ ತಕ್ಷಣ, ಇವನೇ ನನ್ನರಸ ಎಂದು ವರಿಸಬೇಕು ಎಂದು ಹೇಳುತ್ತಾನೆ. ವಿಷ್ಣು ಸರಿ ಹಾಗೆ ಆಗಲಿ, ಹೊರಡಿ ಎನ್ನುತ್ತಾನೆ.

ನಾರದು ತಾನು ಹೇಗೆ ಕಾಣುತ್ತಿದ್ದೇನೆಂದು ಕನ್ನಡಿಯನ್ನ ಸಹ ನೋಡದೇ, ಸ್ವಯಂವರಕ್ಕೆ ಹೋಗುತ್ತಾರೆ. ಅಲ್ಲಿ ಎಲ್ಲರೂ ನಾರದರ ಮುಖ ನೋಡಿ ಮುಸಿ ಮುಸಿ ನಗುತ್ತಾರೆ. ಆದ್ರೆ ನಾರದರು ಮಾತ್ರ, ತಾನು ಸುಂದರವಾಗಿ ಕಾಣುತ್ತಿರಬೇಕು ಅದಕ್ಕೆ ಎಲ್ಲರೂ ನನ್ನನ್ನು ನೋಡಿ ನಗುತ್ತಿದ್ದಾರೆಂದು ತಿಳಿಯುತ್ತಾರೆ. ನಂತರ ಲಕ್ಷ್ಮೀ ಸ್ವಯಂವರಕ್ಕೆ ಬಂದಾಗ, ಆಕೆಯ ಎದರು ನಾರದರು ಬರುತ್ತಾರೆ. ಲಕ್ಷ್ಮೀ ನಗಲು ಶುರುಮಾಡುತ್ತಾಳೆ.

ನಂತರ ಮುಂದೆ ಹೋಗಿ, ಶ್ರೀ ವಿಷ್ಣುವಿಗೆ ಹಾರ ತೊಡಿಸುತ್ತಾಳೆ. ಇದನ್ನು ನೋಡಿ ನಾರದರಿಗೆ ಅವಮಾನವಾಗುತ್ತದೆ. ಅವರು ಕನ್ನಡಿ ನೋಡಿಕೊಳ್ಳುತ್ತಾರೆ. ತಮ್ಮ ಮುಖ ವಾನರನಂತಾಗಿರುವುದನ್ನು ಕಂಡು ನಾರದರಿಗೆ ಬೇಸರವಾಗುತ್ತದೆ. ವಿಷ್ಣು ಹೀಗೆ ಮಾಡಿದ್ದಕ್ಕೆ, ಮುಂದಿನ ಯುಗದಲ್ಲಿ ಅವನು ತನ್ನ ಮನದನ್ನೇ ಲಕ್ಷ್ಮೀಯನ್ನ ಕಳೆದುಕೊಳ್ಳುವಂತಾಗಲಿ, ಆಕೆಯನ್ನ ಪಡೆಯುವುದಕ್ಕೆ, ಅವನಿಗೆ ವಾನರ ಸಹಾಯ ಅವಶ್ಯವಾಗಿ ಬೇಕಾಗಲಿ ಎಂದು ಶಾಪ ಹಾಕುತ್ತಾರೆ.

ಕಾಫಿ ಕುಡಿಯೋಕ್ಕೂ ಮುನ್ನ ಈ ವಿಷಯವನ್ನ ಗಮನದಲ್ಲಿಡಿ..

ಹಾಗಾಗಿಯೇ ರಾಮಾಯಣ ಕಾಲದಲ್ಲಿ ವಿಷ್ಣುವಿನ ರಾಮಾವತಾರದಲ್ಲಿ, ಸೀತೆಗಾಗಿ ರಾಮ ಹಪಹಪಿಸುತ್ತಾನೆ. ರಾವಣನಿಂದ ಆಕೆಯನ್ನು ಕರೆತರಲು, ಹನುಮ ಸೇರಿ, ವಾನರ ಸೇನೆಯ ಸಹಾಯ ಪಡೆಯುತ್ತಾನೆ.

- Advertisement -

Latest Posts

Don't Miss