ಮೊದಲ ಭಾಗದಲ್ಲಿ ನಾವು ಲಕ್ಷ್ಮೀ ವೃದ್ಧೆಯ ವೇಷದಲ್ಲಿ ಮತ್ತು ವಿಷ್ಣು ಬ್ರಾಹ್ಮಣನ ವೇಷದಲ್ಲಿ ಭಕ್ತರನ್ನು ಪರೀಕ್ಷಿಸಲು ಹೋದ ಬಗ್ಗೆ ಹೇಳಿದ್ದೆವು. ಲಕ್ಷ್ಮೀ ವೃದ್ಧೆಯ ರೂಪದಲ್ಲಿ ಓರ್ವ ಹೆಂಗಸಿನ ಮನೆಗೆ ಹೋಗಿ, ನೀರು ಕುಡಿದಳು. ನಂತರ ಲೋಟ ವಾಪಸ್ ಕೊಡುವಾಗ, ಅದು ಚಿನ್ನದ ಲೋಟವಾಗಿ ಮಾರ್ಪಾಡಾಗಿತ್ತು. ಹಾಗಾದ್ರೆ ಮುಂದೇನಾಯ್ತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತಾನು ತಾಮ್ರದ ಲೋಟೆಯಲ್ಲಿ ನೀರು ಕೊಟ್ಟರೆ, ಅದು ಚಿನ್ನದ್ದಾಗಿ ವಾಪಾಸ್ ಆಗಿದೆ. ಹಾಗಾದ್ರೆ ಈಕೆಗೆ ಊಟವೂ ಕೊಡೋಣ, ಪಾತ್ರೆಯೂ ಚಿನ್ನದ್ದಾಗಿ ಬದಲಾಗಬಹುದು ಎಂದು ಹೆಂಗಸು, ದುರಾಲೋಚನೆ ಮಾಡುತ್ತಾಳೆ. ಹಾಗಾಗಿ ವೃದ್ಧೆಗೆ ಊಟ ಮಾಡಿಕೊಂಡು ಹೋಗುವಂತೆ ಹೇಳುತ್ತಾಳೆ. ಅದಕ್ಕೆ ವೃದ್ಧೆ ಬೇಡ ನನಗೆ ಹಸಿವಿಲ್ಲ. ನೀನು ಪ್ರವಚನಕ್ಕೆ ಹೋಗು ಎನ್ನುತ್ತಾಳೆ.
ವಿಷ್ಣು ಮತ್ತು ಲಕ್ಷ್ಮೀಯ ನಡುವೆ ನಡೆದಿತ್ತು ದೊಡ್ಡ ಜಗಳ.. ಭಾಗ 1
ಪ್ರವಚನಕ್ಕೆ ಹೋದ ಮಹಿಳೆಗೆ ಪ್ರವಚನದಲ್ಲಿ ಧ್ಯಾನವಿರಲಿಲ್ಲ. ಬದಲಾಗಿ ಮನದಲ್ಲಿ ಚಿನ್ನದ ಲೋಟೆಯ ಯೋಚನೆ ಇತ್ತು. ಆಕೆ ಅಲ್ಲಿ ಬಂದಿದ್ದ ಮಹಿಳೆಯರಿಗೂ ಈ ಬಗ್ಗೆ ಹೇಳಿದಳು. ಅವರಿಗೂ ಪ್ರವಚನದಲ್ಲಿ ಮನಸ್ಸಾಗಲಿಲ್ಲ. ಚಿನ್ನದ ಲೋಟೆಯ ಆಲೋಚನೆಯೇ ಬರತೊಡಗಿತ್ತು. ಬರು ಬರುತ್ತ ಪ್ರವಚನ ಕೇಳುವವರ ಸಂಖ್ಯೆ ಕಡಿಮೆಯಾಗಿತ್ತು.
ಇದಕ್ಕೆ ಕಾರಣವೇನೆಂದು ವಿಷ್ಣು, ತಾನುಳಿದ ಮನೆಯ ಯಜಮಾನನಲ್ಲಿ ಕೇಳಿದ. ಅದಕ್ಕೆ ಅವನು, ಗ್ರಾಮಕ್ಕೆ ಓರ್ವ ವೃದ್ಧೆ ಬಂದಿದ್ದಾಳೆ. ಆಕೆ ಯಾರ ಮನೆಯಲ್ಲಿ ನೀರು ಕುಡಿಯುತ್ತಾಳೋ, ಹಾಲು ಕುಡಿಯುತ್ತಾಳೋ, ಆ ಲೋಟೆ ಚಿನ್ನದ್ದಾಗುತ್ತದೆ. ತಟ್ಟೆಯಲ್ಲಿ ಊಟ ಮಾಡಿದ್ರೆ, ತಟ್ಟೆ ಚಿನ್ನದ್ದಾಗುತ್ತದೆ. ಎಲ್ಲರೂ ಆಕೆ ತಮ್ಮ ಮನೆಗೆ ಬರಲಿ ಎಂದು ಕಾಯುತ್ತಿದ್ದಾರೆ. ಹಾಗಾಗಿ ಯಾರೂ ಪ್ರವಚನಕ್ಕೆ ಬರುತ್ತಿಲ್ಲ ಎನ್ನುತ್ತಾನೆ.
ಭಗವದ್ಗೀತೆಯಲ್ಲಿ ಈ ಒಂದು ಚಿಕ್ಕ ಕಥೆ ಕೇಳಿದರೆ ನಿಮ್ಮ ಜೀವನ ಬದಲಾಗುತ್ತದೆ..!
ಈ ಮಾತು ಕೇಳಿ, ಲಕ್ಷ್ಮೀ ದೇವಿ ಭೂಲೋಕಕ್ಕೆ ಬಂದಿದ್ದಾಳೆಂದು ವಿಷ್ಣುವಿಗೆ ಗೊತ್ತಾಗುತ್ತದೆ. ನಂತರ ಲಕ್ಷ್ಮೀ ದೇವಿ, ಯಜಮಾನನ ಮನೆಯ ಬಳಿ ಬರುತ್ತಾಳೆ. ಆಕೆಯನ್ನು ಕುರಿತು ಯಜಮಾನ, ಮಾತೆ ನೀವು ಎಲ್ಲರ ಮನೆಗೂ ಹೋಗಿದ್ದೀರಿ. ಆದ್ರೆ ನನ್ನ ಮನೆಗೆ ಮಾತ್ರ ಬರಲಿಲ್ಲ ಎನ್ನುತ್ತಾನೆ. ಆಗ ವೃದ್ಧೆ, ನಾನು ಮೊದಲು ನಿಮ್ಮ ಮನೆಗೆ ಬರುವವಳಿದ್ದೆ. ಆದ್ರೆ ನಿಮ್ಮ ಮನೆಯಲ್ಲಿ ಪ್ರವಚನ ಹೇಳುವ ಬ್ರಾಹ್ಮಣನಿದ್ದಾನಲ್ಲಾ. ಹಾಗಾಗಿ ನಾನು ನಿಮ್ಮ ಮನೆಗೆ ಬರಲಿಲ್ಲ. ನೀನು ಅವನನ್ನು ಮನೆಯಿಂದ ಓಡಿಸು, ನಂತರ ನಾನು ಬರುತ್ತೇನೆಂದು ಹೇಳುತ್ತಾಳೆ.
ತಕ್ಷಣ ಮನೆಗೆ ಬಂದ ಯಜಮಾನ, ಬ್ರಾಹ್ಮಣನನ್ನು ಕುರಿತು, ನೀವು ನನ್ನ ಮನೆಯಲ್ಲಿ ಉಳಿದಿದ್ದು ಸಾಕು. ಇನ್ನು ನೀವು ಧರ್ಮಶಾಲೆಗೆ ಹೋಗಿ. ನಾನು ಬೇರೆ ಅತಿಥಿಯನ್ನು ಬರ ಮಾಡಿಕೊಳ್ಳಬೇಕು ಎನ್ನುತ್ತಾನೆ. ಅಷ್ಟೊತ್ತಿಗೆ ಆ ಮನೆಗೆ ಬಂದ ವೃದ್ಧೆ, ಯಜಮಾನರೇ ನೀವು ಕೊಂಚ ಹೊರಗೆ ಹೋಗಿ ಎನ್ನುತ್ತಾಳೆ. ನಂತರ ವಿಷ್ಣುವಿನಲ್ಲಿ ಕುರಿತು, ನೋಡಿದಿರಾ ಪ್ರಭು, ಜನ ನನಗಾಗಿ ಪ್ರಾರ್ಥಿಸುತ್ತಾರೆ ಎಂದು ಹೇಳುತ್ತಾಳೆ. ಇದನ್ನು ನೋಡಿದ ವಿಷ್ಣು, ಹೌದು ದೇವಿ, ನಿನ್ನನ್ನೇ ಜನ ಹೆಚ್ಚು ಪೂಜಿಸುತ್ತಾರೆ ಎಂದು ಹೇಳುತ್ತಾನೆ. ನಂತರ ಲಕ್ಷ್ಮೀ ವಿಷ್ಣು ಸೇರಿ ವೈಕುಂಠಕ್ಕೆ ಹೋಗುತ್ತಾರೆ.

