Sunday, September 8, 2024

Latest Posts

ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1

- Advertisement -

ಮನುಷ್ಯನ ಉನ್ನತಿಗೆ ಹಲವು ಕಾರಣಗಳಿದೆ. ಅವನು ನಿಯತ್ತಿನಿಂದ ಇದ್ದರೆ, ಶ್ರಮಪಟ್ಟು ದುಡಿದರೆ, ಬುದ್ಧಿವಂತಿಕೆ ಉಪಯೋಗಿಸಿದರೆ ಓರ್ವ ಮನುಷ್ಯ ತನ್ನ ಯಶಸ್ಸಿನ ಮೆಟ್ಟಿಲನ್ನೇರುತ್ತಾನೆ. ಆದ್ರೆ ಓರ್ವ ಮನುಷ್ಯನ ಅವನತಿಗೆ ಮೂರು ಕಾರಣಗಳಿದೆ. ಅದೇನು ಅನ್ನೋ ಬಗ್ಗೆ ಶ್ರೀಕೃಷ್ಣ ಹೇಳಿದ್ದಾನೆ. ಹಾಗಾದ್ರೆ ಶ್ರೀಕೃಷ್ಣನ ಪ್ರಕಾರ, ಮನುಷ್ಯನ ಅವನತಿಗೆ ಕಾರಣವಾಗುವ ಮೂರು ಸಂಗತಿಗಳೇನು ಅಂತಾ ತಿಳಿಯೋಣ ಬನ್ನಿ..

ತುಳಸಿದಾಸರು ತಮ್ಮ ಪತ್ನಿಯನ್ನು ತೊರೆಯಲು ಕಾರಣವೇನು..?

ಒಂದು ಊರಿನಲ್ಲಿ ಓರ್ವ ಸಂತನಿದ್ದ. ಅವನನ್ನು ಭೇಟಿಯಾದವರೆಲ್ಲ, ಉತ್ತಮರಾಗಿ ಬದಲಾಗುತ್ತಿದ್ದರು. ಅದೇ ಊರಿನಲ್ಲಿ ಓರ್ವ ಕ್ರೂರಿ ರಾಜನಿದ್ದ. ಅವನು ಕೂಡ ಸನ್ಯಾಸಿಯನ್ನ ಭೇಟಿ ಮಾಡಿದ. ಅವನೂ ಕೂಡ ಉತ್ತಮ ವ್ಯಕ್ತಿಯಾಗಿ ಬದಲಾದ. ಆಗ ರಾಜನಿಗೆ, ನಾನು ಸನ್ಯಾಸಿಯನ್ನ ಭೇಟಿ ಮಾಡಿದ ಬಳಿಕ ಇಷ್ಟು ಒಳ್ಳೆಯವನಾದೆ. ಸನ್ಯಾಸಿ ನನ್ನೊಂದಿಗಿದ್ದರೆ, ನನಗೆ ಇನ್ನೂ ಒಳ್ಳೆಯದಾಗುತ್ತದೆ ಎಂದುಕೊಂಡ.

ತಕ್ಷಣ ಸನ್ಯಾಸಿಯ ಬಳಿ, ನೀವು ನನ್ನ ಜೊತೆ ನನ್ನ ಅರಮನೆಗೆ ಬಂದು ವಾಸಿಸುತ್ತೀರಾ ಎಂದು ಕೇಳಿದ. ಇದಕ್ಕೆ ಒಪ್ಪಿದ ಸನ್ಯಾಸಿ ರಾಜನ ಜೊತೆ ಅರಮನೆಗೆ ಬಂದ. ಸನ್ಯಾಸಿಗೆ ಭೂರಿ ಭೋಜನ, ಕೋಣೆಯ ವ್ಯವಸ್ಥೆ ಮಾಡಲಾಯಿತು. ಪ್ರತಿದಿನ ಸಮಯಕ್ಕೆ ಸರಿಯಾಗಿ ಭೋಜನ ಮತ್ತು ಉತ್ತಮ ನಿದ್ದೆ ಮಾಡುತ್ತಿದ್ದ ಸನ್ಯಾಸಿ, ಉಳಿದ ಸಮಯದಲ್ಲಿ ಶಾಂತವಾದ ಸ್ಥಳದಲ್ಲಿ ಧ್ಯಾನ ಮಾಡುತ್ತಿದ್ದರು.

ಎಂಥ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾಗುತ್ತದೆ ..?

ಒಮ್ಮೆ ರಾಜ ಮತ್ತು ರಾಣಿ ಇಬ್ಬರೂ ಬೇರೆ ರಾಜ್ಯಕ್ಕೆ ಹೋಗಬೇಕಾದ ಸಂದರ್ಭ ಬಂತು. ಆಗ ಸನ್ಯಾಸಿಯನ್ನು ನೋಡಿಕೊಳ್ಳಲು ರಾಜ, ಓರ್ವ ಆಳನ್ನು ನೇಮಿಸಿದ. ಆದ್ರೆ ರಾಜ ಬೇರೆ ರಾಜ್ಯಕ್ಕೆ ಹೋದ ಬಳಿಕ, ಆ ಸೇವಕನಿಗೆ ಅನಾರೋಗ್ಯ ಉಂಟಾಯಿತು. ಅವನು ಸನ್ಯಾಸಿಯನ್ನು ಬಿಟ್ಟು ಹೋದ. ಈಗ ಸನ್ಯಾಸಿಗೆ ಸಮಯಕ್ಕೆ ಸರಿಯಾಗಿ ಊಟ ಸಿಗುತ್ತಿರಲಿಲ್ಲ.

ಕೆಲ ದಿನಗಳ ಬಳಿಕ ರಾಜ ರಾಣಿ ಮರಳಿ ಬಂದಾಗ, ಸನ್ಯಾಸಿ ಕೋಪದಲ್ಲಿ ಜಗಳವಾಡಿದ. ಕೆಲ ಸಮಯದ ಬಳಿಕ ರಾಜ, ತನ್ನ ರಾಣಿಯ ಬಳಿಯೇ ಸನ್ಯಾಸಿಗೆ ಭೋಜನ ಏರ್ಪಾಡು ಮಾಡಲು ಹೇಳಿದ. ಪ್ರತಿದಿನ ರಾಣಿ ಸನ್ಯಾಸಿಗೆ ಭೋಜನ ತಂದು ಕೊಡುತ್ತಿದ್ದಳು. ಇದೇ ಸಮಯದಲ್ಲಿ ಸನ್ಯಾಸಿ ರಾಣಿಯ ಸೌಂದರ್ಯಕ್ಕೆ ಮರುಳಾದ. ರಾಜನ ಬಳಿ ತನಗೆ ರಾಣಿ ಬೇಕೆಂದು ಕೇಳಿದ. ನಂತರ ಏನಾಯಿತು. ರಾಜ ರಾಣಿಯನ್ನ ಸನ್ಯಾಸಿಗೆ ಒಪ್ಪಿಸಿದನೇ..? ಸನ್ಯಾಸಿಗೆ ರಾಣಿ ಹೇಗೆ ಬುದ್ಧಿ ಕಲಿಸಿದಳು..? ಇತ್ಯಾದಿ ವಿಷಯವನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss