Monday, October 6, 2025

Latest Posts

ಪಾಂಡವರು ಸ್ವರ್ಗಕ್ಕೆ ಹೋಗಬೇಕಾದರೆ ಏನಾಯಿತು..? ಅವರೆಲ್ಲರಿಗೂ ಸ್ವರ್ಗ ಸಿಕ್ಕಿತೇ..?- ಭಾಗ 2

- Advertisement -

ಮೊದಲ ಭಾಗದಲ್ಲಿ ನಾವು ದ್ರೌಪದಿ, ನಕುಲ, ಸಹದೇವ, ಅರ್ಜುನ, ಭೀಮ ಸ್ವರ್ಗಕ್ಕೆ ಹೋಗದೇ, ಭೂಲೋಕದಲ್ಲೇ ಸಾವನ್ನಪ್ಪಿದ್ದರ ಬಗ್ಗೆ ಮಾಹಿತಿ ನೀಡಿದ್ದೆವು. ಈ ಭಾಗದಲ್ಲಿ ಯುಧಿಷ್ಠಿರ ಮತ್ತು ನಾಯಿ ಸ್ವರ್ಗ ಲೋಕಕ್ಕೆ ಹೋದ ಕಥೆ ಬಗ್ಗೆ ತಿಳಿಯೋಣ..

ಕೊನೆಯದಾಗಿ ಯುಧಿಷ್ಠಿರ ಮತ್ತು ನಾಯಿ ಸ್ವರ್ಗಕ್ಕೆ ಹೋಗುತ್ತದೆ. ಆಗ ಇಂದ್ರ, ಯುಧಿಷ್ಠಿರ ನೀನು ಮಾತ್ರ ಸ್ವರ್ಗ ಲೋಕಕ್ಕೆ ಬರಬಹುದು. ಈ ನಾಯಿ ಬರಲಾಗುವುದಿಲ್ಲ ಎನ್ನುತ್ತಾನೆ. ಆಗ ಯುಧಿಷ್ಠಿರ, ಇದು ಭೂಲೋಕದಿಂದ ನನ್ನೊಂದಿಗೆ ಸ್ವಾಮಿ ನಿಷ್ಠೆಯಿಂದ ಬಂದ ನಾಯಿ, ಇದನ್ನೂ ಸ್ವರ್ಗಕ್ಕೆ ಕರೆದುಕೊಳ್ಳಿ ಎಂದು ಹೇಳುತ್ತಾನೆ.

ಆಗ ನಾಯಿಯ ರೂಪದಲ್ಲಿದ್ದ ಯಮಧರ್ಮ ನಿಜವಾದ ರೂಪಕ್ಕೆ ಬಂದು, ಯುಧಿಷ್ಠಿರನ ನಿಷ್ಠೆಯನ್ನು ಮೆಚ್ಚುತ್ತಾನೆ. ನಂತರ ಯುಧಿಷ್ಠಿರನನ್ನು ಸ್ವರ್ಗಲೋಕಕ್ಕೆ ಕರೆಯುತ್ತಾನೆ. ಸ್ವರ್ಗಕ್ಕೆ ಹೋದ ಯುಧಿಷ್ಠಿರನಿಗೆ ಆಶ್ಚರ್ಯ ಕಾದಿರುತ್ತದೆ. ಅಲ್ಲಿ ದುರ್ಯೋಧನನಿರುತ್ತಾನೆ. ಆದರೆ ಅವನ ತಮ್ಮಂದಿರಿರುವುದಿಲ್ಲ.

ಆಗ ಯುಧಿಷ್ಠಿರ, ನನ್ನ ಸಹೋದರರು ಇರುವಲ್ಲಿ ನಾನು ಹೋಗುತ್ತೇನೆ. ನನ್ನನ್ನು ನನ್ನ ಸಹೋದರರಿದ್ದಲ್ಲಿ, ಕರೆದುಕೊಂಡು ಹೋಗಿ ಎನ್ನುತ್ತಾನೆ. ಆಗ ದೂತ, ಯುಧಿಷ್ಠಿರನನ್ನು ಕರೆದುಕೊಂಡು, ನರರಕಕ್ಕೆ ಹೊರಡುತ್ತಾನೆ. ಅಲ್ಲಿ ಹದ್ದು, ಕಾಗೆಗಳು, ಕೊಳೆತ ಶವಗಳೆಲ್ಲ ಇರುತ್ತದೆ. ಆ ಜಾಗ ಕೆಟ್ಟ ವಾಸನೆಯಿಂದ ತುಂಬಿರುತ್ತದೆ.

ಅಲ್ಲಿ ಕೆಲವರು ಯುಧಿಷ್ಠಿರನನ್ನು ಕರುಣಾಜನಕವಾಗಿ ಕರೆಯುತ್ತಾರೆ. ನೀವೆಲ್ಲ ಯಾರೆಂದು ಯುಧಿಷ್ಠಿರ ಕೇಳಿದಾಗ, ಕರ್ಣ, ಅರ್ಜುನ, ನಕುಲ, ಸಹದೇವ, ಭೀಮ ಎಂಬ ಧ್ವನಿ ಕೇಳಿ ಬರುತ್ತದೆ. ಆಗ ಯುಧಿಷ್ಠಿರ ದೂತನನ್ನು ಕುರಿತು, ನೀನು ಇಲ್ಲಿಂದ ಹೋಗು. ನಾನು ನನ್ನ ಅಣ್ಣ ತಮ್ಮಂದಿರೊಂದಿಗೆ ಇರುತ್ತೇನೆ ಎನ್ನುತ್ತಾನೆ. ಆಗ ದೂತ ಇಂದ್ರನ ಬಳಿ ಹೋಗಿ, ನಡೆದ ವಿಷಯಗಳನ್ನ ತಿಳಿಸುತ್ತಾನೆ.

ಇಂದ್ರ ಆ ಸ್ಥಳಕ್ಕೆ ಬರುತ್ತಾನೆ. ಇಂದ್ರನ ಪ್ರವೇಶವಾಗುತ್ತಿದ್ದಂತೆ, ಆ ನರಕ ಸ್ವರ್ಗವಾಗಿ ಮಾರ್ಪಾಡಾಗುತ್ತದೆ. ಆಗ ಯುಧಿಷ್ಠಿರನಿಗೆ ಇಂದ್ರ, ಇವರೆಲ್ಲ ದೇವರ ಸ್ವರೂಪವಾಗಿದ್ದಾರೆ. ಭೀಮ ವಾಯು ದೇವನ ಅಂಶವಾಗಿದ್ದು, ಕರ್ಣ ಸೂರ್ಯದೇವನ ಅಂಶ, ಅರ್ಜುನ ನನ್ನ ಅಂಶವಾಗಿದ್ದು, ನಕುಲ ಸಹದೇವರು ಅಶ್ವಿನಿ ದೇವತೆಗಳ ಅಂಶವಾಗಿದ್ದಾರೆ. ಮತ್ತು ದ್ರೌಪದಿ ಸಾಕ್ಷಾತ್ ಲಕ್ಷ್ಮೀಯ ಸ್ವರೂಪವಾಗಿದ್ದಾಳೆ. ಇವರೆಲ್ಲ ದೈವಾಂಶ ಸಂಭೂತರಾಗಿದ್ದು, ನಿನ್ನ ಧರ್ಮ ನಿಷ್ಠೆಯನ್ನು ಪರೀಕ್ಷಿಸಲು, ಈ ರೀತಿ ನಕರ ಸೃಷ್ಟಿಸಲಾಗಿತ್ತು ಎನ್ನುತ್ತಾನೆ. ಇಲ್ಲಿಗೆ ಪಾಂಡವರು ಸ್ವರ್ಗಕ್ಕೆ ಹೋದ ಕಥೆ ಮುಕ್ತಾಯ.

- Advertisement -

Latest Posts

Don't Miss