ಇಂದಿನ ಕಾಲದಲ್ಲಿ ಸೋಶಿಯಲ್ ಮೀಡಿಯಾ ಹವಾ ಜೋರಾಗಿದ್ದು, ಕೆಲವರ ಟ್ಯಾಲೆಂಟ್ ಬೆಳಕಿಗೆ ಬರುತ್ತಿದೆ. ಇನ್ನು ಕೆಲವರು ಇಲ್ಲ ಸಲ್ಲದ ಹೇಳಿಕೆ ಕೊಟ್ಟು ಫೇಮಸ್ ಆಗುತ್ತಿದ್ದಾರೆ. ಯಾರೋ ಬಡವ ಇದ್ದಕ್ಕಿದ್ದಂತೆ ಶ್ರೀಮಂತನಾದನಂತೆ ಅನ್ನೋ ಮಾತೂ ಕೂಡ ನಾವು ಕೇಳಿರ್ತೀವಿ. ಕೆಲ ವರ್ಷಗಳಿಂದ ಬೆಂಗಳೂರು, ಮುಂಬೈನ ದೊಡ್ಡ ದೊಡ್ಡ ಹೊಟೇಲ್ ಮುಂದೆ ಭಿಕ್ಷೆ ಬೇಡುತ್ತಿರುವ ಭಿಕ್ಷುಕರು ನಿಜವಾಗ್ಲೂ ಕೋಟ್ಯಾಧೀಶ್ವರರಾಗಿದ್ದಾರೆ. ಅದೇ ರೀತಿ ಓರ್ವ ಭಿಕ್ಷುಕ ಕೋಟ್ಯಾಧಿಪತಿಯಾಗಿದ್ದು ಹೇಗೆ ಅನ್ನೋ ಬಗ್ಗೆ ಕಥೆಯೊಂದನ್ನ ನಾವು ನಿಮಗೆ ಹೇಳ್ತೀವಿ ಕೇಳಿ..
ಒಂದೂರಿನಲ್ಲಿ ಓರ್ವ ಮಧ್ಯಮ ವರ್ಗದ ಯುವಕನಿದ್ದ. ಅವನ ಹೆಸರು ರಾಬರ್ಟ್. ಅವನು ಒಂದು ಸಣ್ಣ ಕಂಪೆನೆಯಲ್ಲಿ ಸಣ್ಣ ಕೆಲಸ ಮಾಡುತ್ತಿದ್ದ. ಅವನಿಗೆ ಓರ್ವ ಮಧ್ಯಮ ಕುಟುಂಬದ ಯುವತಿಯೊಂದಿಗೆ ವಿವಾಹವಾಯಿತು. ಆದ್ರೆ ಆಕೆಗೆ ಆಸೆ ಹೆಚ್ಚಾಗಿತ್ತು. ಪ್ರತಿದಿನ ಅದು ತಂದು ಕೊಡು ಇದು ತಂದು ಕೊಡು ಎಂದು ಕಾಡಿಸುತ್ತಿದ್ದಳು. ರಾಬರ್ಟ್‌ಗೆ ಪತ್ನಿಯ ಮೇಲೆ ಪ್ರೀತಿ ಇತ್ತು. ಹಾಗಾಗಿ ತನ್ನಿಂದೆಷ್ಟು ಸಾಧ್ಯವೋ, ಅಷ್ಟು ತಂದು ಕೊಡುತ್ತಿದ್ದ.
ಪುದೀನಾ ಜ್ಯೂಸ್ ಕುಡಿಯುವುದರಿಂದ ಆಗುವ ಆರೋಗ್ಯ ಲಾಭವೇನು..?
ಆದ್ರೆ ದಿನಗಳೆದಂತೆ ಆಕೆಯ ಆಸೆ ಅತಿಯಾಗುತ್ತಾ ಹೋಯಿತು. ಆಕೆಯ ಆಸೆ ತೀರಿಸಲಾಗದೆ, ಆಕೆ ಏನು ಕೇಳಿದರೂ ಏನೋ ಒಂದು ನೆಪ ಹೇಳಿ, ಅದನ್ನು ತಳ್ಳಿ ಹಾಕುತ್ತಿದ್ದ. ಹಾಗಾಗಿ ಆಕೆಗೆ ಕೋಪ ಬಂದು ಆಕೆ ರಾಬರ್ಟ್‌ನನ್ನು ಬಿಟ್ಟು ಹೋದಳು. ಇದರಿಂದ ರಾಬರ್ಟ್ ಬೇಸರಗೊಂಡಿದ್ದ. ಪ್ರತಿದಿನ ಆತ ಆಕೆಯನ್ನ ಮಿಸ್ ಮಾಡಿಕೊಳ್ಳುತ್ತಿದ್ದ. ಕೆಲಸದ ಕಡೆ ಸರಿಯಾಗಿ ಗಮನ ಕೊಡುತ್ತಿರಲಿಲ್ಲ. ಹಾಗಾಗಿ ಅವನನ್ನು ಕೆಲಸದಿಂದ ತೆಗೆದು ಹಾಕಲಾಯಿತು.
ಕೆಲ ದಿನ ತನ್ನ ಬಳಿ ಇರುವ ಹಣದಿಂದಲೇ, ದಿನ ದೂಡಿದ. ಬೇರೆ ಕಡೆ ಕೆಲಸ ಹುಡುಕಿದ. ಆದ್ರೆ ಎಲ್ಲೂ ಕೆಲಸ ಸಿಗಲಿಲ್ಲ. ಕೊನೆಗೆ ಮನೆ ಮನೆಗೆ ಹೋಗಿ ಭಿಕ್ಷೆ ಬೇಡಿ, ತಿನ್ನುವ ಪರಿಸ್ಥಿತಿ ಬಂತು. ರಾಬರ್ಟ್ ಭಿಕ್ಷೆ ಬೇಡಿ ತಿನ್ನುತ್ತಿದ್ದ. ರಸ್ತೆಯಲ್ಲೇ ಮಲಗುತ್ತಿದ್ದ. ಬಡತನದಿಂದ ಮನೆಯೂ ಮಾರಿದ್ದ. ಈ ಕಾರಣಕ್ಕೆ ಅವನ ಬಾಳು ಬೀದಿಗೆ ಬಿದ್ದಿತ್ತು.
ನಿಮ್ಮ ಲಿವರ್ ಸ್ಟ್ರಾಂಗ್ ಆಗಲು ಈ ಟಿಪ್ಸ್ ಅನುಸರಿಸಿ..
ಆದ್ರೆ ಒಮ್ಮೆ ಅವನು ಓರ್ವ ಹೆಂಗಸಿನ ಮನೆಗೆ ಹೋಗಿ ಭಿಕ್ಷೆ ಕೇಳಿದ. ಆಕೆ ಅವನಿಗೆ ಊಟ ಮತ್ತು ನೀರು ಕೊಟ್ಟಳು. ಅವನು ಅಲ್ಲೇ ಕುಳಿತು ಅದನ್ನು ತಿಂದ. ಆ ಹೆಂಗಸಿಗೆ, ಇವನು ಭಿಕ್ಷುಕನಲ್ಲ, ಒಳ್ಳೆ ಮನೆತನದವನ ಹಾಗೆ ಕಾಣುತ್ತಾನೆ ಎನ್ನಿಸಿತು. ಆಕೆ ನೀನು ವಿದ್ಯಾಭ್ಯಾಸ ಕಲಿತಿದ್ದೀಯಾ ಎಂದು ಕೇಳಿದಳು. ಅದಕ್ಕೆ ರಾಬರ್ಟ್, ಹೌದು ನಾನು ವಿದ್ಯೆ ಕಲಿತಿದ್ದೇವೆ. ಇಲ್ಲೇ ಸಮೀಪದಲ್ಲಿರುವ ಕಂಪೆನಿಯಲ್ಲೇ ಕೆಲಸ ಮಾಡುತ್ತಿದ್ದೆ. ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದೇನೆ ಎನ್ನುತ್ತಾನೆ.
ಆಕೆ ಒಳಗೆ ಹೋಗಿ ಅವನಿಗೊಂದು ಪುಸ್ತಕ ತಂದು ಕೊಡುತ್ತಾಳೆ. ಮತ್ತು ಸಮಯ ಸಿಕ್ಕಾಗ ಈ ಪುಸ್ತಕವನ್ನು ಓದು ಎನ್ನುತ್ತಾಳೆ. ರಾಬರ್ಟ್ ಅದನ್ನು ತೆಗೆದುಕೊಂಡು ನಿರ್ಲಕ್ಷ್ಯದಿಂದ ಹೊರಡುತ್ತಾನೆ. ಅದನ್ನು ಮಾರಿ ತಿಂಡಿ ತೆಗೆದುಕೊಳ್ಳುವ ಯೋಚನೆ ಬರುತ್ತದೆ. ಆದ್ರೆ ಅವನು ಹಾಗೆ ಮಾಡುವುದಿಲ್ಲ. ಬದಲಾಗಿ ಆ ಪುಸ್ತಕವನ್ನು ಓದಲು ಶುರು ಮಾಡುತ್ತಾನೆ. ಮುಂದೇನಾಗುತ್ತದೆ..? ಆ ಪುಸ್ತಕದಲ್ಲಿ ಏನಿರುತ್ತದೆ..? ಭಿಕ್ಷುಕನಾಗಿದ್ದ ರಾಬರ್ಟ್ ಹೇಗೆ ಶ್ರೀಮಂತನಾಗುತ್ತಾನೆ..? ಈ ಎಲ್ಲಾ ವಿಷಯಗಳನ್ನ ಮುಂದಿನ ಭಾಗದಲ್ಲಿ ತಿಳಿಯೋಣ..