Thursday, February 20, 2025

Latest Posts

ಭೃಗು ಋಷಿ ಮಹಾವಿಷ್ಣುವಿನ ಎದೆಗೆ ಒದ್ದಿದ್ಯಾಕೆ..? ನಂತರ ಏನಾಯಿತು..?

- Advertisement -

ಭೃಗು ಋಷಿ ವಿಷ್ಣು ದೇವನ ಎದೆಗೆ ಒದ್ದ ಕಥೆಯ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ಭೃಗು ಋಷಿ ಯಾಕೆ ವಿಷ್ಣುವಿನ ಎದೆಗೆ ಒದ್ದರು, ಆಮೇಲೇನಾಯ್ತು ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..

ಬ್ರಹ್ಮನ ಮಾನಸ ಪುತ್ರರಾದ ಭೃಗು ಋಷಿ, ಶ್ರಾವಣ ಮತ್ತು ಭಾದ್ರಪದ ಮಾಸದಲ್ಲಿ ಸೂರ್ಯನ ರಥದಲ್ಲಿ ಸಂಚರಿಸುವ ಏಕೈಕ ಋಷಿಯಾಗಿದ್ದಾರೆ. ಹೀಗೆ ಭೃಗು ಋಷಿ ಮತ್ತು ಇನ್ನಿತರ ಋಷಿಗಳು ಸೇರಿ, ಸರಸ್ವತಿ ನದಿ ತೀರದಲ್ಲಿ ಬ್ರಹ್ಮ, ವಿಷ್ಣು- ಮಹೇಶ್ವರರಲ್ಲಿ ಯಾರು ಶ್ರೇಷ್ಠರು ಅಂತಾ ಚರ್ಚೆ ನಡೆಸುತ್ತಾರೆ. ಆಗ ಭೃಗು ಋಷಿ, ತಾನು ದೇವಲೋಕಕ್ಕೆ ಹೋಗಿ, ಯಾರು ಶ್ರೇಷ್ಠರೆಂದು ಪರೀಕ್ಷಿಸಿ ಬರುತ್ತೇನೆಂದು ಹೇಳುತ್ತಾರೆ.

ಇಂಥ 6 ಜನರನ್ನು ಎಂದಿಗೂ ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಡಿ..

ಮೊದಲು ಬ್ರಹ್ಮನ ಬಳಿ ಹೋದ ಭೃಗು ಋಷಿ, ಬ್ರಹ್ಮನಿಗೆ ನಮಸ್ಕರಿಸದೇ, ಉದ್ಧಟತನ ತೋರುತ್ತಾರೆ. ಈ ವಿಷಯವಾಗಿ ಬ್ರಹ್ಮನಿಗೆ ಕೋಪ ಬಂದರೂ ಕೂಡ, ಬೃಗು ತನ್ನ ಮಾನಸ ಪುತ್ರನೆಂದು ಬ್ರಹ್ಮ ಸುಮ್ಮನಿರುತ್ತಾರೆ. ನಂತರ ಈಶ್ವರನಲ್ಲಿಗೆ ಹೋದಾಗ, ಶಿವ ಭೃಗುವನ್ನು ಆಲಿಂಗಿಸಲು ಬರುತ್ತಾರೆ. ಆದ್ರೆ ಭೃಗು ಮಾತ್ರ, ಪರಮೇಶ್ವರ ನೀವು, ಪಾಪಿಗಳಿಗೆಲ್ಲ ವರ ನೀಡಿ, ಅವರು ದುಷ್ಟ ಕೆಲಸ ಮಾಡಲು ಪ್ರೋತ್ಸಾಹಿಸುತ್ತೀರಾ. ಹಾಗಾಗಿ ನಿಮ್ಮನ್ನು ನಾನೆಂದೂ ಆಲಂಗಿಸುವುದಿಲ್ಲವೆನ್ನುತ್ತಾರೆ.

ಇದನ್ನು ಕೇಳಿ ಶಿವನಿಗೆ ಕೋಪ ಬರುತ್ತದೆ. ಇನ್ನೇನು ಭೃಗು ಋಷಿಯ ಮೇಲೆ ಪ್ರಹಾರ ಮಾಡಲು ಹೋಗುವಾಗ, ಸತಿ ಶಿವನನ್ನು ತಡೆಯುತ್ತಾಳೆ. ೆರಡೂ ಕಡೆಗೆ ಕೋಪ ನೋಡಿದ ಭೃಗು ಋಷಿ, ವಿಷ್ಣುವನ್ನು ಪರೀಕ್ಷಿಸಲು ಹೋಗುತ್ತಾರೆ. ಆಗ ವಿಷ್ಣು ವೈಕುಂಠದಲ್ಲಿ ಲಕ್ಷ್ಮೀಯ ತೊಡೆಯ ಮೇಲೆ ಮಲಗಿರುತ್ತಾನೆ. ಇದನ್ನು ಕಂಡು ಭೃಗು ಋಷಿ, ವಿಷ್ಣುವಿನ ಎದೆಗೆ ಒದೆಯುತ್ತಾರೆ.

ಪತಿಯಾದವನು ಪತ್ನಿಗೆ ಕೆಲ ಸಿಕ್ರೇಟ್‌ಗಳನ್ನು ಹೇಳಬಾರದಂತೆ..!

ಆಗ ವಿಷ್ಣು ಎದ್ದು ನಿಂತು, ಭೃಗು ಋಷಿಯನ್ನು ಕಂಡು ಕೈಮುಗಿಯುತ್ತ, ಕ್ಷಮೆ ಕೇಳುತ್ತಾರೆ. ಮತ್ತು ಭೃಗು ಋಷಿಯನ್ನು ಕುಳ್ಳಿರಿಸಿ, ಕಾಲು ಒತ್ತುತ್ತಾನೆ. ಮತ್ತು ನಿಮ್ಮ ಚರಣದಿಂದ ನಾನು ಧನ್ಯನಾದೆ ಎನ್ನುತ್ತಾನೆ. ಆಗ ಭೃಗು ಋಷಿ ಕಣ್ಣೀರು ಹಾಕುತ್ತಾರೆ. ಮತ್ತು ಕ್ಷಮೆ ಕೇಳಿ, ಉಳಿದ ಋಷಿಗಳ ಬಳಿ ಹೋಗಿ ಯಾರು ಶ್ರೇಷ್ಠರೆಂದು ಉಳಿದ ಋಷಿಗಳಿಗೆ ಹೇಳುತ್ತಾರೆ. ಅಂದಿನಿಂದ ಋಷಿ ಮುನಿಗಳು ಶ್ರೀವಿಷ್ಣುವನ್ನು ಆರಾಧಿಸಲು ಶುರು ಮಾಡುತ್ತಾರೆ.

- Advertisement -

Latest Posts

Don't Miss