ಅಗ್ನಿ ಪರೀಕ್ಷೆ ಅನ್ನೋ ಶಬ್ಧ ಕೇಳಿದ ತಕ್ಷಣ ನಮ್ಮ ತಲೆಗೆ ಹೊಳೆಯುವ ಮೊದಲ ಹೆಸರೇ ಸೀತಾ ಮಾತೆ. ಸೀತೆಗೆ ಶ್ರೀರಾಮ ಗ್ನಿ ಪರೀಕ್ಷೆಗೆ ದೂಡಿದ್ದರ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಯಾಕೆ ಶ್ರೀರಾಮ ಸೀತೆಯನ್ನು ಅಗ್ನಿ ಪರೀಕ್ಷೆಗೆ ಈಡು ಮಾಡಿದನೆಂದು ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.
ಒಮ್ಮೆ ಶ್ರೀರಾಮನ ಮಂತ್ರಿ, ರಾಜ ಬೀದಿಯಲ್ಲಿ ಸುತ್ತಬೇಕಾದರೆ, ಅಲ್ಲಿ ಕೆಲವು ಜನ ರಾಮ ಮತ್ತು ಸೀತೆ ಬಗ್ಗೆ ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ. ಅವರೆಲ್ಲ, ಸೀತೆ ಇಷ್ಟು ದಿನ ರಾವಣನ ಲಂಕೆಯಲ್ಲಿ ಇದ್ದು ಬಂದಳು. ಆದರೂ ಮರ್ಯಾದಾ ಪುರುಷೋತ್ತಮ ಶ್ರೀರಾಮ, ಆಕೆಯನ್ನು ಅಗ್ನಿ ಪರೀಕ್ಷೆಗೆ ಈಡು ಮಾಡದೇ, ತನ್ನ ಅರಮನೆಯಲ್ಲಿಟ್ಟಿದ್ದಾನೆ ಎಂದು ಅವರೆಲ್ಲ ಮಾತನಾಡಿಕೊಳ್ಳುತ್ತಿದ್ದರು.
ಇದನ್ನು ಕೇಳಿಸಿಕೊಂಡ ರಾಮನ ಮಂತ್ರಿ, ಈ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಆಗ ರಾಮ ಎಲ್ಲರಿಗೂ ಆಸ್ಥಾನಕ್ಕೆ ಕರೆದು, ನಮ್ಮ ಪ್ರಜೆಗಳಿಗೆ ಸೀತೆಯ ಬಗ್ಗೆ ಅನುಮಾನವಿದೆ. ಆದ್ರೆ ಸೀತೆ ಅಗ್ನಿ ಪರೀಕ್ಷೆಯಲ್ಲಿ ಗೆದ್ದು, ಅವಳು ಅಗ್ನಿಯಂತೆ ಪವಿತ್ರಳೆಂದು ಸಾಬೀತು ಮಾಡುತ್ತಾಳೆ ಎಂದು ಘೋಷಿಸಿದ. ಅಗ್ನಿ ಪರೀಕ್ಷೆ ನಡೆಯಿತು. ಸೀತೆ ಅಗ್ನಿ ಇಳಿದಳು. ಅಲ್ಲಿಗೆ ಭೂಮಿ ಬಿರಿದು, ಸೀತೆ ಸ್ವರ್ಗ ಸೇರಿದಳು. ಇದೇ ರೀತಿ, ಸೀತೆಯ ಅಗ್ನಿ ಪರೀಕ್ಷೆ ಕುರಿತಂತೆ, ಹಲವು ಧರ್ಮ ಗ್ರಂಥಗಳಲ್ಲಿ, ಹಲವು ರೀತಿ ಬರೆಯಲಾಗಿದೆ. ಆದ್ರೆ ಪ್ರಚಲಿತದಲ್ಲಿರುವ ಕಥೆ ಅಂದ್ರೆ ಇದೇ ಕಥೆ.