ಹಿಂದೂ ಧರ್ಮದ ಪವಿತ್ರ ಕಾರ್ಯಗಳಲ್ಲಿ ಮಹತ್ತರ ಸ್ಥಾನ ಪಡೆದ ಎಲೆಗಳಿವು..
ಸನಾತನ ಧರ್ಮದಲ್ಲಿ ಕೆಲವರು ದೇವರುಗಳಿಗೆ ವಾಹನಗಳಿದೆ. ಮತ್ತು ಅವರು ಆ ವಾಹನದೊಂದಿಗೆ, ಭೂಲೋಕ, ದೇವಲೋಕದಲ್ಲಿ ತಿರುಗುತ್ತಿದ್ದರು ಅನ್ನೋ ಕಥೆಯನ್ನೂ ನಾವು ಕೇಳಿದ್ದೇವೆ. ಓದಿದ್ದೇವೆ. ಕೃಷ್ಣನಿಗೆ ಆಕಳು, ಕಾರ್ತಿಕೇಯನಿಗೆ ನವಿಲು, ವಿಷ್ಣುವಿಗೆ ಶೇಷ, ಇಂದ್ರನಿಗೆ ಐರಾವತ, ಹೀಗೆ ಹಲವು ದೇವತೆಗಳಿಗೆ ವಾಹನಗಳಿದೆ. ಅದೇ ರೀತಿ ಶಿವನಿಗೂ ನಂದಿ ಇದೆ. ಹಾಗಾದ್ರೆ ಈ ನಂದಿ ಯಾರು..? ಯಾಕೆ ಇವನು ಶಿವನ ವಾಹನವಾದ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮನುಷ್ಯನ ಮೃತ್ಯುವಾದ 14ನೇ ದಿನಕ್ಕೆ ಗರುಡ ಪುರಾಣ ಪಠಣ ಮಾಡುವುದೇಕೆ..?
ಶಿಲಾದ ಮುನಿ ಎಂಬ ಋಷಿಗಳಿದ್ದರು. ಇವರಿಗೆ ವೃದ್ಧಾಪ್ಯ ಬರುತ್ತಿದ್ದಂತೆ, ಭಯವೊಂದು ಕಾಡಿತ್ತು. ತಾನು ಸತ್ತ ಮೇಲೆ ತನ್ನ ವಂಶ ಕೊನೆಗೊಳ್ಳುತ್ತದೆ. ಹೀಗಾಗಲು ಬಿಡಬಾರದೆಂದದು ಶಿಲಾದ ಮುನಿಗಳು, ಇಂದ್ರನನ್ನು ಕುರಿತು ತಪಸ್ಸು ಮಾಡಿದರು. ಇಂದ್ರ ಪ್ರತ್ಯಕ್ಷನಾದಾಗ, ತನಗೆ ಸಾವೇ ಇಲ್ಲದ ಚಿರಂಜೀವಿ ಪುತ್ರನನ್ನು ಕರುಣಿಸು ಎಂದು ಬೇಡಿದರು.
ಆಗ ಇಂದ್ರ ಇದು ನನ್ನ ಕೈಯಲ್ಲಿ ಸಾಧ್ಯವಾಗದ ಕೆಲಸ. ಇದಕ್ಕಾಗಿ ನೀವು ಶಿವನನ್ನು ಕುರಿತು ತಪಸ್ಸು ಮಾಡಿ, ಎಂದು ಸಲಹೆ ಕೊಟ್ಟ. ಆಗ ಶಿಲಾದ ಮುನಿಗಳು ಶಿವನನ್ನು ಕುರಿತು ತಪಸ್ಸು ಮಾಡಿದ. ಶಿವ ಪ್ರತ್ಯಕ್ಷನಾದಾಗ ಇದೇ ವರ ಬೇಡಿದರು. ಆಗ ಶಿವ ನನ್ನ ಅಂಶವೇ ನಿನಗೆ ಮಗನಾಗಿ ಜನಿಸುತ್ತಾನೆ. ಮತ್ತು ಅವನಿಗೆ ನಂದಿ ಎಂದು ನಾಮಕರಣ ಮಾಡು ಎಂದು ಹೇಳುತ್ತಾನೆ.
ಯುವ ಜನತೆ ಈ ವಿಷಯಗಳಿಂದ ದೂರವಿದ್ದರೆ ಉತ್ತಮ ಅಂತಾರೆ ಚಾಣಕ್ಯರು..
ಇದಾದ ಬಳಿಕ, ಮುನಿಗಳು ಶಿವನ ಹೆಸರಲ್ಲಿ ಯಜ್ಞ ಮಾಡುತ್ತಾರೆ. ಅದೇ ಯಜ್ಞಕುಂಡದಿಂದ ಮುನಿಗಳಿಗೆ ಓರ್ವ ಮಗ ಜನಿಸುತ್ತಾನೆ. ಅವನಿಗೆ ನಂದಿ ಎಂದು ನಾಮಕರಣ ಮಾಡಲಾಗುತ್ತದೆ. ನಂತರ ಅವನಿಗೆ ಮುನಿಗಳು ವೇದ ಪಾಠಗಳನ್ನು ಮಾಡುತ್ತಾರೆ. ಪುತ್ರ ಜ್ಞಾನಿಯಾಗುತ್ತಾನೆ. ನಂದಿಗೆ 7 ವರ್ಷವಾಗುತ್ತಿದ್ದಂತೆ, ಶಿಲಾದ ಮಹರ್ಷಿಗಳ ಆಶ್ರಮಕ್ಕೆ ಇಬ್ಬರು ತಪಸ್ವಿಗಳು ಬರುತ್ತಾರೆ. ಅವರು ನಂದಿಯನ್ನು ಕಂಡು, ಶಿಲಾದ ಮುನಿಗಳನ್ನು ಕುರಿತು, ನಿಮ್ಮ ಮಗ ಅಲ್ಪಾಯುವಾಗಿದ್ದಾನೆ. ಇನ್ನೊಂದು ವರ್ಷದಲ್ಲಿ ಅವನ ಮರಣವಾಗುತ್ತದೆ ಎಂದು ಹೇಳುತ್ತಾರೆ.
ಗಂಗಾ ಸ್ನಾನ ಮಾಡಿದ್ರೆ ಪುಣ್ಯ ಸಿಗುತ್ತಾ..? ನಿಜಕ್ಕೂ ಗಂಗಾ ಸ್ನಾನ ಎಂದರೇನು..?- ಭಾಗ 2
ಅದನ್ನು ಕೇಳಿ ಶಿಲಾದ ಮುನಿಗಳು ದುಃಖಿತರಾಗುತ್ತಾರೆ. ಅವರ ದುಃಖಕ್ಕೆ ಕಾರಣವೇನೆಂದು ನಂದಿ ಕೇಳಿದಾಗ, ನೀನು ಅಲ್ಪಾಯುಷಿ ಎಂದು ಹೇಳುತ್ತಾರೆ. ಈ ಬಗ್ಗೆ ಕೇಳಲು ತಾನು ಶಿವನನ್ನು ಕುರಿತು ತಪಸ್ಸು ಮಾಡುವುದಾಗಿ, ನಂದಿ ಭುವನ ನದಿಯ ತಟಕ್ಕೆ ಹೋಗುತ್ತಾನೆ. ಅಲ್ಲಿ ಹೋಗಿ, ತಪಸ್ಸು ಮಾಡುತ್ತಾನೆ. ಶಿವ ಪ್ರತ್ಯಕ್ಷನಾದಾಗ, ನಂದಿಗೆ ತಾನೇನು ವರ ಕೇಳಲು ತಪಸ್ಸು ಮಾಡಿದೆ ಅನ್ನೋದೇ ಮರೆತು ಹೋಗುತ್ತದೆ. ಶಿವ ವರ ಕೇಳಲು ಹೇಳಿದಾಗ, ಇನ್ನು ಮುಂದೆ ನಾನು ನಿಮ್ಮ ಬಳಿಯೇ ಇರುವಂತೆ ವರ ಕೊಡಿ ಎಂದು ಕೇಳುತ್ತಾನೆ.
ಜೀವನದಲ್ಲಿ ಕಷ್ಟ ಬಂದಾಗ ಈ 5 ಮಾತುಗಳನ್ನು ಎಂದಿಗೂ ಮರೆಯಬೇಡಿ- ಭಾಗ 1
ಆಗ ಶಿವ ತಥಾಸ್ತು ಎನ್ನುತ್ತಾನೆ. ನಂತರ ನಂದಿ ತನ್ನ ಜನ್ಮ ಪೂರ್ಣಗೊಳಿಸಿ, ಶಿವನ ಸಾನಿಧ್ಯದಲ್ಲಿ ಭೃಂಗಿಯೊಂದಿಗೆ ಇರುತ್ತಾನೆ. ಹೀಗಾಗಿ ನಂದಿ ಶಿವನ ವಾಹನಾಗಿದ್ದಾನೆ. ನಂದಿ ಬರೀ ಶಿವನ ವಾಹನವಲ್ಲದೇ, ಶಿವನ ಪರಮ ಭಕ್ತನೆಂದು ಹೇಳಲಾಗುತ್ತದೆ.