Thursday, April 24, 2025

Latest Posts

ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 3

- Advertisement -

Spiritual: ಈ ಕಥೆಗೆ ಸಂಬಂಧಿಸಿದಂತೆ ಕಳೆದ ಎರಡು ಭಾಗಗಳಲ್ಲಿ ವಿಕ್ರಮಾದಿತ್ಯ ಎಂಥ ಕಷ್ಟ ಅನುಭವಿಸಿದ ಎಂದು ನಾವು ನಿಮಗೆ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಶನಿಯ ಸಾಡೇಸಾಥಿ ಪರಿಣಾಮ ಕೆಟ್ಟದಾಗಿ ಇರಬಾರದು ಅಂದ್ರೆ ಏನು ಮಾಡಬೇಕು ಎನ್ನುವ ಬಗ್ಗೆ ಹೇಳಲಿದ್ದೇವೆ.

ಶನಿದೇವ, ವಿಕ್ರಮಾದಿತ್ಯನ ಕನಸಿನಲ್ಲಿ ಬಂದು ವಿವರಿಸಿದಾಗ, ವಿಕ್ರಮಾದಿತ್ಯ ಹೀಗೆ ಹೇಳುತ್ತಾನೆ. ಹೇ ಶನಿದೇವ ನನಗೆ ಕೊಟ್ಟಂಥ ಶಿಕ್ಷೆ ಇನ್ಯಾರಿಗೂ ಕೊಡಬೇಡ ಎನ್ನುತ್ತಾನೆ. ಅದಕ್ಕೆ ಶನಿದೇವ, ನಾನು ಯಾರ ಜೀವನದಲ್ಲಿ ಹೋಗುತ್ತೇನೋ, ಅವನ ಜೀವನ ಕಷ್ಟಕ್ಕೆ ಸಿಲುಕುತ್ತದೆ. ಆದರೆ ಜನ ಆ ಕಷ್ಟದಿಂದ ಮುಕ್ತಿ ಹೊಂದಬೇಕು ಎಂದಲ್ಲಿ, ಶನಿವಾರದ ದಿನ ನನ್ನ ವೃತವನ್ನು ಮಾಡಬೇಕು. ನನ್ನ ಶ್ಲೋಕವನ್ನು ಪಠಿಸಬೇಕು ಎನ್ನುತ್ತಾನೆ.

ಬೆಳಗಾಗುವುದರೊಳಗೆ, ವಿಕ್ರಮಾದಿತ್ಯನ ಕೈ ಕಾಲು ಸರಿಯಾಗುತ್ತದೆ. ಅವನು ರಾಜನಂತೆ ಸಿದ್ಧವಾಗುತ್ತಾನೆ. ಮತ್ತು ಮೋಹಿನಿಗೆ ತನ್ನೆಲ್ಲ ವಿಷಯ ತಿಳಿಸುತ್ತಾನೆ. ಇಬ್ಬರೂ ಸೇರಿ, ತನ್ನ ರಾಜ್ಯಕ್ಕೆ ಹೋಗುತ್ತಾರೆ. ಅಲ್ಲಿ ವಿಕ್ರಮಾದಿತ್ಯ ಶನಿದೇವನ ಬಗ್ಗೆ ಊರಿಗೆಲ್ಲ ಹೇಳಿ, ಪ್ರತೀ ಶನಿವಾರ ಎಲ್ಲರೂ ಶನಿದೇವನ ವೃತ ಆಚರಿಸಿ ಎಂದು ಹೇಳುತ್ತಾನೆ.

ಶನಿಯ ವಕ್ರದೃಷ್ಟಿ ನಿಮ್ಮ ಮೇಲೆ ಬಿದ್ದಲ್ಲಿ, ನೀವು ಪ್ರತಿದಿನ ಶನಿ ಸ್ತೋತ್ರವನ್ನು ಹೇಳಬೇಕು. ಅದು ಹೀಗಿದೆ..

ನೀಲಾಂಜನ ಸಮಾಭಾಸಂ, ರವಿಪುತ್ರಂ ಯಮಾಗ್ರಜಂ

ಛಾಯಾಮಾರ್ತಾಂಡ ಸಂಭೂತಂ, ತನ್ಮಮಾಮಿ ಶನೈಶ್ಚರಂ

ಇದನ್ನು ಪ್ರತಿದಿನ ಪಠಿಸಿ, ಪ್ರತೀ ಶನಿವಾರ ಶನಿದೇವರಿಗೆ ಎಳ್ಳೆಣ್ಣೆ, ಕಪ್ಪು ಎಳ್ಳು ದಾನ ಮಾಡಿ. ಶನಿವಾರದ ದಿನ ಕಪ್ಪು ಬಟ್ಟೆ ಧರಿಸಬೇಡಿ. ಶನಿವಾರದ ದಿನ ಕಬ್ಬಿಣ ಖರೀದಿಸಬೇಡಿ. ಇದರಿಂದ ಶನಿಯ ಅವಕೃಪೆಗೆ ಪಾತ್ರರಾಗುತ್ತೀರಿ.

- Advertisement -

Latest Posts

Don't Miss