Friday, February 7, 2025

Latest Posts

ಹನುಮನನ್ನು ನೆನೆದವರಿಗೆ ಶನಿ ತೊಂದರೆ ಕೊಡುವುದಿಲ್ಲವೇಕೆ..? ಇದರ ಹಿಂದಿರುವ ಕಾರಣವೇನು..?

- Advertisement -

ಶನಿ ದೇವನೆಂದರೆ, ಬರೀ ಮನುಷ್ಯರಷ್ಟೇ ಅಲ್ಲ, ದೇವತೆಗಳು, ಅಸುರರು ಕೂಡ ಇವನಿಗೆ ಹೆದರುತ್ತಾರೆ. ಯಾಕಂದ್ರೆ ಶನಿ ಮನಸ್ಸು ಮಾಡಿದರೆ, ಶ್ರೀಮಂತ ಭಿಕ್ಷುಕನಾಗಬಲ್ಲ, ಭಿಕ್ಷುಕ ಶ್ರೀಮಂತನಾಗಬಲ್ಲ. ಅಂಥ ಶಕ್ತಿ ಶಾಲಿ ದೇವರು ಅಂದ್ರೆ ಶನಿ. ಆದ್ರೆ ಶನಿ ಯಾರ ಹಗಲೇರುತ್ತಾನೋ, ಅವರು ಸದಾ ಹನುಮನ ಸ್ಮರಣೆ ಮಾಡಿದ್ದಲ್ಲಿ, ಅವರಿಗೆ ಶನಿ ಹೆಚ್ಚು ಕಾಟ ಕೊಡುವುದಿಲ್ಲವೆಂದು ಹೇಳಲಾಗುತ್ತದೆ. ಹಾಗಾದ್ರೆ ಇದರ ಹಿಂದಿರುವ ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಶ್ರೀರಾಮನ ಧ್ಯಾನ ಮಾಡುತ್ತಾ ಹನುಮ ನದಿಯ ತಟದಲ್ಲಿ ಕುಳಿತಿರುತ್ತಾನೆ. ಆಗ ಅಲ್ಲಿಗೆ ಬಂದ ಶನಿ ದೇವ, ಇಂದು ನಾನು ಈ ವಾನರನ ರಾಶಿಗೆ ಪ್ರವೇಶಿಸಿ, ಇವನ ನೆಮ್ಮದಿಯನ್ನೇ ನಾಶ ಮಾಡುತ್ತೇನೆಂದು ಹೇಳುತ್ತಾನೆ. ಹಾಗೆ ಹೇಳಿ. ಹನುಮನಲ್ಲಿ ಬಂದು, ಎ ವಾನರ ನೋಡಿಲ್ಲಿ, ನಾನು ಶನಿದೇವ ಬಂದಿದ್ದೇನೆ. ಇಂದು ನಿನ್ನ ದಿನವನ್ನೇ ನಾವು ಹಾಳುಗೆಡುವುತ್ತೇನೆ. ನಿನ್ನ ರಾಶಿಗೆ ಪ್ರವೇಶಿಸಿ, ನಿನ್ನ ನೆಮ್ಮದಿಯನ್ನ ಕಸಿಯುತ್ತೇನೆಂದು ಹೇಳುತ್ತಾನೆ.

ಈ 5 ಜನರನ್ನು ಎಂದಿಗೂ ದ್ವೇಷಿಸಬೇಡಿ ಎನ್ನುತ್ತಾರೆ ಚಾಣಕ್ಯರು..

ಆಗ ಹನುಮ, ಯಾರು ನೀವು..? ಇಷ್ಟು ಕ್ರೋಧದಿಂದ ಯಾಕೆ ಮಾತನಾಡುತ್ತಿದ್ದೀರಿ..? ಎಂದು ಕೇಳುತ್ತಾನೆ. ಆಗ ಮತ್ತೂ ಕ್ರೋಧಿತನಾದ ಶನಿ, ನಾನು ಯಾರೆಂದು ಗೊತ್ತಿಲ್ಲವೇ..? ನನ್ನ ಹೆಸರು ಕೇಳಿದರೆ ಎಲ್ಲರೂ ನಡುಗುತ್ತಾರೆ. ನಾನು ಯಾರ ರಾಶಿಗೆ ಪ್ರವೇಶಿಸುತ್ತೇನೋ, ಅವರ ನೆಮ್ಮದಿಯೇ ಹಾಳಾಗುತ್ತದೆ. ಇಂದು ನಿನ್ನ ನೆಮ್ಮದಿ ಹಾಳು ಮಾಡುತ್ತೇನೆ ಎಂದು ಹನುಮನ ಎಡಗೈಯನ್ನು ಎಳೆಯುತ್ತಾನೆ. ಹನುಮ ಬಿಡಿಸಿಕೊಳ್ಳುತ್ತಾನೆ. ಆಗ ಹನುಮನ ಬಲಗೈ ಎಳೆಯುತ್ತಾನೆ.

ಆಗ ಹನುಮನಿಗೂ ಸಿಟ್ಟು ಬರುತ್ತದೆ. ಆದರೂ ಸಮಾಧಾನದಿಂದಿದ್ದು, ಶ್ರೀರಾಮನಾಮ ಜಪಿಸುತ್ತಾನೆ. ಈ ವೇಳೆ ಶನಿ, ನೀನೇನು, ನಿನ್ನ ರಾಮನೂ ಕೂಡ ನನಗೇನು ಮಾಡಲು ಸಾಧ್ಯವಿಲ್ಲವೆಂದು ಹೇಳುತ್ತಾನೆ. ತನ್ನ ಒಡೆಯನನ್ನು ಹಂಗಿಸಿದ್ದಕ್ಕೆ ಕೋಪಗೊಂಡ ಹನುಮ, ತನ್ನ ಬಾಲದಿಂದ ಶನಿಯನ್ನು ಕಟ್ಟಿಹಾಕಿ ಎಳೆದೊಯ್ಯುತ್ತಾನೆ. ಈ ವೇಳೆ ಶನಿಯ ದೇಹ ಒಮ್ಮೆ ಬೆಟ್ಟಕ್ಕೆ ತಾಕುತ್ತದೆ, ಮತ್ತೊಮ್ಮೆ ಭೂಮಿಗೆ ತಾಕುತ್ತದೆ. ಮಗದೊಮ್ಮೆ ಮರಕ್ಕೆ ತಾಕುತ್ತದೆ. ಹೀಗೆ ಶನಿಯ ಮೈ ಕೈ ಎಲ್ಲ ನೋವಾಗುತ್ತದೆ.

ಕುರುವಂಶ ನಾಶಕ್ಕಾಗಿ ಶಕುನಿ ರಚಿಸಿದ್ದ ಈ 3 ತಂತ್ರ..

ಆಗ ಶನಿಗೆ ತಾನೆಂಥ ತಪ್ಪು ಮಾಡಿದೆ ಎಂದು ಅರ್ಥವಾಗುತ್ತದೆ. ಹನುಮನಲ್ಲಿ ಶನಿ ಕ್ಷಮೆಯಾಚನೆ ಮಾಡುತ್ತಾನೆ. ಆಗ ಹನುಮ, ನೀನು ಯಾರ ಹೆಗಲಮೇಲಾದರೂ ಏರು, ಆದರೆ ನನ್ನ ಭಕ್ತರಿಗೆ ತೊಂದರೆ ಕೊಟ್ಟರೆ, ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ ಎನ್ನುತ್ತಾನೆ. ಈ ಕಾರಣಕ್ಕೆನೇ ಹನುಮನ ಆರಾಧನೆ ಮಾಡಿದವರಿಗೆ ಶನಿ ಹೆಚ್ಚು ತೊಂದರೆ ಕೊಡುವುದಿಲ್ಲವೆನ್ನಲಾಗಿದೆ. ಅಲ್ಲದೇ, ಹನುಮನಿಂದ ಶನಿಗಾದ ನೋವಿಗೆ ಪರಿಹಾರವೆಂದೇ, ಭಕ್ತರು ಎಳ್ಳೆಣ್ಣೆ ನೀಡಬೇಕು ಎನ್ನಲಾಗಿದೆ.

- Advertisement -

Latest Posts

Don't Miss