Sunday, September 8, 2024

Latest Posts

ಯಾರ ಶಾಪದಿಂದಾಗಿ ಕೃಷ್ಣನ ಗೆಳೆಯ ಸುಧಾಮ ಬಡವನಾದ ಗೊತ್ತಾ..?

- Advertisement -

ಶ್ರೀಕೃಷ್ಣನಂಥ ದೇವನೇ ಸುಧಾಮನ ಗೆಳೆಯನಾಗಿರುವಾಗ ಸುಧಾಮ ಬಡವನಾಗಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡೋದು ಸಹಜ. ಆದ್ರೆ ಶಾಪ ಸಿಕ್ಕ ಕಾರಣಕ್ಕೆ, ಸುಧಾಮ ಬಡವನಾಗಿದ್ದ. ಹಾಗಾದ್ರೆ ಯಾರ ಶಾಪದಿಂದ ಸುಧಾಮ ಬಡವನಾದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿಯನ್ನ ತಿಳಿಯೋಣ ಬನ್ನಿ..

ನವರಾತ್ರಿಯ ಮೂರನೇ ದಿನದ ಪ್ರಸಾದ ರೆಸಿಪಿ..

ಒಬ್ಬಳು ಬಡ ಬ್ರಾಹ್ಮಣ ವೃದ್ಧೆ ಇದ್ದಳು. ಆಕೆ ಬೆಳಿಗ್ಗೆಯಿಂದ ಸಂಜೆಯವರೆಗೂ ಊರೂರು ತಿರುಗಿ ಬೇಡಿದರೂ, ಆಕೆಗೆ ಬರೀ ಎರಡು ಮುಷ್ಠಿ ಕಡಲೆ ಕಾಳು ಸಿಕ್ಕಿತು. ಅವಳು ತನ್ನ ಕುಟೀರಕ್ಕೆ ಹೋಗುವ ವೇಳೆಗೆ ರಾತ್ರಿಯಾಗಿತ್ತು. ಆಗ ಆಕೆ ತಾನಿಂದು ಬೇಡಿ ತಂದ ಕಡಲೆ ಕಾಳನ್ನು ತಿನ್ನುವುದಿಲ್ಲ. ಬದಲಾಗಿ ನಾಳೆ ಬೆಳಿಗ್ಗೆ ಶ್ರೀಕೃಷ್ಣನಿಗೆ ನೇವೇದ್ಯ ಮಾಡಿ, ಇದನ್ನು ನಾನು ತಿನ್ನುತ್ತೇನೆಂದು ಹೇಳಿ, ನೀರು ಕುಡಿದು ಮಲಗುತ್ತಾಳೆ.

ಬಾಲಗೋಪಾಲನನ್ನು ನೋಡಲು ಬಂದ ಶನಿ ಕಣ್ಣೀರು ಹಾಕಿದ್ದೇಕೆ..?

ಆದ್ರೆ ರಾತ್ರಿ ವೇಳೆ ಇವಳ ಗುಡಿಸಿಗೆ ಬಂದ ಕಳ್ಳರು, ಇವಳು ಕಟ್ಟಿಟ್ಟಿದ್ದ ಬುತ್ತಿಯಲ್ಲಿ ಹಣವಿದೆ ಎಂದು ತಿಳಿದು ಅದನ್ನು ಕದ್ದು ಓಡುತ್ತಾರೆ. ಬೆಳಿಗ್ಗೆ ಎದ್ದು ನೋಡಿದಾಗ ವೃದ್ಧೆಗೆ ಆಕೆಯ ಕಡಲೆ ಬುತ್ತಿ ಕಾಣುವುದಿಲ್ಲ. ಆಗ ಆಕೆ, ಈ ಕಡಲೆಯನ್ನು ತಿಂದವರು ನನ್ನಂತೆ ಬಡವರಾಗಲಿ, ಅವರಿಗೆ ತಿನ್ನಲು ಸರಿಯಾಗಿ ಊಟ ಸಿಗದೇ ಹೋಗಲಿ ಎಂದು ಶಾಪ ಹಾಕುತ್ತಾಳೆ.

ಈಕಡೆ ಧಾನ್ಯ ಕದ್ದು ಓಡಿದ್ದ ಕಳ್ಳರು, ಒಂದು ಆಶ್ರಮಕ್ಕೆ ಬರುತ್ತಾರೆ. ಆ ಆಶ್ರಮದಲ್ಲೇ ಸುಧಾಮ ಮತ್ತು ಶ್ರೀಕೃಷ್ಣ ವಿದ್ಯೆ ಪಡೆಯುತ್ತಿರುತ್ತಾರೆ. ಕಳ್ಳರು ಆ ಆಶ್ರಮಕ್ಕೆ ಬಂದಾಗ, ಅಲ್ಲಿದ್ದವರು ಕಳ್ಳರನ್ನು ನೋಡಿದರೆಂದು ತಿಳಿದು, ಕಳ್ಳರು ಕೈಯಲ್ಲಿದ್ದ ಕಡಲೆ ಚೀಲವನ್ನು ಅಲ್ಲೇ ಬಿಟ್ಟು ಓಡುತ್ತಾರೆ. ನಂತರ ಕೃಷ್ಣ ಮತ್ತು ಸುಧಾಮ, ವನಕ್ಕೆ ಹೋಗುವ ವೇಳೆ, ಋಷಿ ಪತ್ನಿ ಆ ಕಡಲೆ ಚೀಲವನ್ನು ಸುಧಾಮನಿಗೆ ಕೊಟ್ಟು, ಹಸಿವಾದಾಗ, ಇದರಲ್ಲಿರುವ ಕಡಲೆಯನ್ನು ತಿನ್ನು ಎನ್ನುತ್ತಾರೆ.

ನವರಾತ್ರಿಯಲ್ಲಿ ಮರೆತೂ ಕೂಡ ಈ ತಪ್ಪುಗಳನ್ನು ಮಾಡಬೇಡಿ..

ಸುಧಾಮ ಅಂತರ್ಯಾಮಿಯಾಗಿರುವುದರಿಂದ ಸುಧಾಮನಿಗೆ ಈ ಕಡಲೆ ಯಾರದ್ದು ಮತ್ತು ಆಕೆ ಈ ಕಡಲೆ ತಿಂದವರು ದರಿದ್ರರಾಗಲಿ ಎಂದು ಶಾಪ ಹಾಕಿದ್ದಾಳೆ ಅನ್ನುವ ವಿಷಯ ಗೊತ್ತಿತ್ತು. ಹಾಗಾಗಿ ಈ ಬಗ್ಗೆ ಯೋಚಿಸಿದ ಸುಧಾಮ, ಲೋಕವನ್ನು ರಕ್ಷಿಸುವ ಕೃಷ್ಣ ದರಿದ್ರನಾದರೆ ಹೇಗೆ ಎಂದು ಎಲ್ಲ ಕಡಲೆಯನ್ನು ತಾನೇ ತಿಂದು, ವೃದ್ಧೆಯ ಶಾಪಕ್ಕೊಳಗಾಗುತ್ತಾನೆ. ಇದೇ ಕಾರಣಕ್ಕೆ ಸುಧಾಮ ಬಡವನಾಗುತ್ತಾನೆ.

- Advertisement -

Latest Posts

Don't Miss