ಮೊದಲ ಭಾಗದಲ್ಲಿ ನಾವು ಶ್ರೀರಾಮನ ಹೆಸರಿನಲ್ಲಿ ಭಾರವಾದ ಕಲ್ಲನ್ನೂ ಕೂಡ ತೇಲಿಸುವ ಶಕ್ತಿ ಇರುವ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಮತ್ತಷ್ಟು ಶ್ರೀರಾಮನ ಕಥೆಯನ್ನು ಹೇಳಲಿದ್ದೇವೆ.
ಒಮ್ಮೆ ಶ್ರೀರಾಮನ ಅರಮನೆಯಲ್ಲಿ ರಾಮ ಶ್ರೇಷ್ಠವೋ, ರಾಮನಾಮ ಶ್ರೇಷ್ಠವೋ ಎಂಬ ಚರ್ಚೆ ನಡೆಯುತ್ತಿತ್ತು. ಈ ಚರ್ಚೆಯಲ್ಲಿ ಋಷಿಮುನಿಗಳು, ಶ್ರೀರಾಮ, ನಾರದರು ಭಾಗವಹಿಸಿದ್ದರು. ನಾರದರ ಪ್ರಕಾರ, ರಾಮನಾಮ ಶ್ರೇಷ್ಠ. ಆದ್‌ರೆ ಉಳಿದವರ ಪ್ರಕಾರ ರಾಮನೇ ಶ್ರೇಷ್ಠವೆಂದು ಚರ್ಚೆ. ಈ ವೇಳೆ ಆ ಸಭೆಗೆ ಹನುಮಂತ ಬಂದ. ನಾರದರು ತಾವೇ ಸರಿ ಎಂದು ಸಾಬೀತುಪಡಿಸಲು ಒಂದು ಉಪಾಯ ಮಾಡಿದರು.
ಹನುಮನ ಬಳಿ ಹೋಗಿ, ವಿಶ್ವಾಮಿತ್ರರನ್ನು ಬಿಟ್ಟು, ಉಳಿದ ಎಲ್ಲ ಋಷಿಮುನಿಗಳಿಗೆ ನಮಸ್ಕರಿಸಲು ಹೇಳಿದರು. ಹನುಮಾನ ಅದೇ ರೀತಿ ಮಾಡಿದ. ನಂತರ ನಾರದರೇ ವಿಶ್ವಾಮಿತ್ರರ ಬಳಿ ಹೋಗಿ, ನೋಡಿ ವಿಶ್ವಾಮಿತ್ರರೇ ನಿಮ್ಮಂಥ ಶ್ರೇಷ್ಠ ಮುನಿಗಳನ್ನ ಹನುಮಂತ ಕಡೆಗಣಿಸಿದ್ದಾನೆಂದು ಹೇಳಿದರು. ನಾರದ ಮಾತು ಕೇಳಿ, ವಿಶ್ವಾಮಿತ್ರರಿಗೆ ಕೋಪ ಬಂತು. ಆ ವಾನರ ನನ್ನನ್ನು ಅವಮಾನಿಸಿದ್ದಾನೆ. ಅವನಿಗೆ ಶಿಕ್ಷೆ ಕೊಡಲೇಬೇಕೆಂದು ನಿರ್ಧರಿಸಿದರು.
ಆಗ ಶ್ರೀರಾಮನ ಬಳಿ ಹೋಗಿ, ನಿನ್ನ ದೂತ ನನಗೆ ನಮಸ್ಕರಿಸದೇ, ನನ್ನನ್ನು ಅವಮಾನಿಸಿದ್ದಾನೆ. ನೀನು ಈಗಲೇ ನಿನ್ನ ಬಾಣದಿಂದ ಅವನಿಗೆ ಮೃತ್ಯುದಂಡ ನೀಡಬೇಕೆಂದು ಹೇಳುತ್ತಾರೆ. ವಿಶ್ವಾಮಿತ್ರರ ಮಾತನ್ನು ತಳ್ಳಿ ಹಾಕಲು ಆಗದೇ, ಶ್ರೀರಾಮ, ಬಾಣ ಹಿಡಿದು ಹನುಮನಿಗೆ ಗುರಿ ಇಡುತ್ತಾನೆ. ಆಗ ಹನುಮ ಓಡಿ ಹೋಗಿ, ಮರದ ಮೇಲೆ ಹತ್ತಿ ಕುಳಿತು, ರಾಮ ನಾಮ ಜಪಿಸಲು ಶುರು ಮಾಡುತ್ತಾನೆ. ರಾಮ ಸರಿಯಾಗಿ ಗುರಿ ಇಟ್ಟು ಹನುಮನ ಬಳಿ ಬಾಣ ಬಿಡುತ್ತಾನೆ. ಆದರೆ ಹನುಮನ ಒಂದು ಕೂದಲು ಕೂಡ, ಅತ್ತ ಇತ್ತ ಸರಿಯುವುದಿಲ್ಲ. ಹನುಮ ಆರಾಮವಾಗಿ ರಾಮನಾಮ ಜಪ ಮಾಡುತ್ತ, ಮರದ ಮೇಲೆ ಕುಳಿತುಕೊಂಡಿರುತ್ತಾನೆ.
ಆಗ ಸಭೆಯಲ್ಲಿದ್ದ ಎಲ್ಲರೂ ಆಶ್ಚರ್ಯದಿಂದ ಈ ದೃಶ್ಯವನ್ನ ನೋಡುತ್ತ, ಇದು ಹೇಗೆ ಸಾಧ್ಯ ಎಂದು ಮಾತನಾಡಿಕೊಳ್ಳುತ್ತಾರೆ. ಆಗ ನಾರದರು, ಶ್ರೀರಾಮ, ನೀನೇಷ್ಟೆ ಬಾಣ ಬಿಟ್ಟರೂ, ನಿನ್ನ ಬಾಣದಿಂದ ಹನುಮನಿಗೆ ಏನೂ ಆಗುವುದಿಲ್ಲ. ಏಕೆಂದರೆ ಹನುಮ ರಾಮನಾಮ ಜಪವನ್ನ ಮಾಡುತ್ತ ಮರದ ಮೇಲೆ ಕುಳಿತಿದ್ದಾನೆ. ನಾನು ಹೇಳಿದ ಹಾಗೆ, ರಾಮನಿಗಿಂತ, ರಾಮನಾಮವೇ ಶ್ರೇಷ್ಠವೆಂದು ನಾನು ಸಾಬೀತು ಮಾಡಿದ್ದೇನೆ. ಹನುಮಂತ ವಿಶ್ವಾಮಿತ್ರರನ್ನು ಅವಮಾನ ಮಾಡಿಲ್ಲ. ಬದಲಾಗಿ ನಾನೇ ಈ ರೀತಿಯಾಗುವಂತೆ ಮಾಡಿದ್ದೆ ಎಂದು ಹೇಳುತ್ತಾರೆ. ವಿಶ್ವಾಮಿತ್ರರು ಕೋಪ ಕಡಿಮೆ ಮಾಡಿಕೊಂಡು, ರಾಮನಾಮವನ್ನು ಕೊಂಡಾಡುತ್ತಾರೆ. ರಾಮನಾಮ ಜಪದ ಬಗ್ಗೆ ಇರುವ ಮತ್ತಷ್ಟು ಕಥೆಯನ್ನ ಮುಂದಿನ ಭಾಗದಲ್ಲಿ ತಿಳಿಯೋಣ..
ಈ ಸ್ಮಶಾನ ಮಧ್ಯದಲ್ಲಿ ಚಿತೆಯ ಎದುರು ವೇಶ್ಯೆಯರು ನೃತ್ಯ ಮಾಡುತ್ತಾರೆ.. ಯಾಕೆ ಗೊತ್ತಾ..?