Friday, November 22, 2024

Latest Posts

ಯಮನನ್ನೇ ಗೊಂದಲಕ್ಕೆ ತಳ್ಳಲು ಹೋದ ಅಹಂಕಾರಿ ಕಲಾಕಾರನಿಗೆ ಸಾವು ಸಂಭವಿಸಿದ ಕಥೆ..

- Advertisement -

ಅಂಹಕಾರ ಅನ್ನೋದು ನಮ್ಮನ್ನ ಸುಡುವ ಬೆಂಕಿ. ಇದೊಂಥರಾ ಸಿಟ್ಟಿನ ರೀತಿಯೇ ಕೆಲಸ ಮಾಡತ್ತೆ. ಎಲ್ಲ ವಿಷಯದಲ್ಲೂ, ಎಲ್ಲರ ಬಳಿಯೂ ಅಹಂಕಾರ ತೋರಿಸಬಾರದು. ಅದರಲ್ಲೂ ನಿಮ್ಮ ಮನೆಯವರ ಬಳಿಯಾಗಲಿ, ನಿಮಗೆ ಒಳಿತನ್ನ ಬಯಸುವವರ ಬಳಿ, ನಿಮ್ಮ ಅಭಿಮಾನಿಗಳ ಬಳಿ, ನಿಮ್ಮನ್ನು ಪ್ರೀತಿ, ಕಾಳಜಿಯಿಂದ ಕಾಣುವವರ ಬಳಿ ಎಂದಿಗೂ ಅಹಂಕಾರ ತೋರಿಸಬೇಡಿ. ನಿಮ್ಮ ಓದಿನ ಬಗ್ಗೆ, ಕೆಲಸದ ಬಗ್ಗೆ, ದುಡಿಮೆಯ ಬಗ್ಗೆ ಯಾವುದರ ಬಗ್ಗೆಯೂ ಅಹಂಕಾರವಿರಬಾರದು. ಯಾಕಂದ್ರೆ ಅಹಂಕಾರ ಮಾಡಿದ್ರೆ, ದೇವರು ತಕ್ಕ ಪಾಠವನ್ನು ಕಲಿಸುತ್ತಾನೆ. ಹೀಗೆ ಅಹಂಕಾರ ಮಾಡಿದ ಕಲಾಕಾರನ ಪರಿಸ್ಥಿತಿ ಏನಾಯಿತು ಅನ್ನೋ ಬಗ್ಗೆ ಒಂದು ಕಥೆ ತಿಳಿಯೋಣ ಬನ್ನಿ..

ಹಿಂದಿನ ಕಾಲದಲ್ಲಿ ಒಬ್ಬ ಮೂರ್ತಿ ತಯಾರಿಸುವ ಕಲಾಕಾರನಿದ್ದ. ಅವನು ಹೇಗೆ ಮೂರ್ತಿ ತಯಾರಿಸುತ್ತಿದ್ದನೆಂದರೆ ಮೂರ್ತಿಯೂ ಜೀವಂತ ಮನುಷ್ಯನ ರೀತಿ ಇರುತ್ತಿತ್ತು. ಮೂರ್ತಿ ಮತ್ತು ಜೀವಂತ ಮನುಷ್ಯನನ್ನು ಅಕ್ಕಪಕ್ಕ ನಿಲ್ಲಿಸಿದ್ದಲ್ಲಿ, ಯಾವುದು ಮೂರ್ತಿ ಮತ್ತು ಯಾವುದು ಮನುಷ್ಯ ಎಂದು ಹೇಳುವುದು ಕಷ್ಟವಾಗುತ್ತಿತ್ತು. ಅಷ್ಟು ಪರ್ಫೆಕ್ಟ್ ಆಗಿರುತ್ತಿತ್ತು ಆ ಮೂರ್ತಿ. ಹಾಗಾಗಿ ಅವನು ಮಾಡಿದ ಮೂರ್ತಿಯಲ್ಲಿ ಯಾರೂ ತಪ್ಪನ್ನು ಕಂಡು ಹಿಡಿಯುತ್ತಿರಲಿಲ್ಲ.

ನಮಗೆ ಎಷ್ಟೇ ಸಿಟ್ಟು ಬಂದರೂ, ನಾವು ತಾಳ್ಮೆಗೆಡಬಾರದು ಅನ್ನೋದಕ್ಕೆ ಕಾರಣವೇನು..?

ಒಮ್ಮೆ ಜ್ಯೋತಿಷಿಯ ಬಳಿ ಕಲಾಕಾರ ಜಾತಕ ತೋರಿಸಲು ಹೋದ. ಆ ಜ್ಯೋತಿಷಿ, ನೀನಿನ್ನು ಒಂದೇ ವಾರದಲ್ಲಿ ಸಾವನ್ನಪ್ಪುತ್ತಿಯಾ ಎಂದು ಹೇಳಿದ. ತಾನು ಹೇಗಾದರೂ ಮಾಡಿ ಬದುಕಬೇಕೆಂದು ಕಲಾಕಾರ, ತನ್ನಂತೇ ಇರುವ 10 ಮೂರ್ತಿಯನ್ನ ತಯಾರಿಸಿದ. ಆ ಮೂರ್ತಿಗಳು ಧ್ಯಾನ ಮಾಡುವಂತೆ ಇತ್ತು. ತನ್ನ ಸಾವಿನ ಸಮಯ ಸಮೀಪಿಸುತ್ತಿದ್ದಂತೆ ಕಲಾಕಾರ, ಆ ಮೂರ್ತಿಯಲ್ಲಿರುವಂತೆ ಬಟ್ಟೆ ಧರಿಸಿ, ಧ್ಯಾನ ಮಾಡುತ್ತಿರುವಂತೆ, ಆ ಮೂರ್ತಿಗಳ ಪಕ್ಕ ಕುಳಿತ.

ಕಲಾಕಾರನನ್ನು ಕರೆದೊಯ್ಯಲು ಯಮ ಬಂದ. ಆದ್ರೆ ಯಮನಿಗೆ ಗೊಂದಲವುಂಟಾಯಿತು. ಇಷ್ಟೆಲ್ಲ ಕಲಾಕಾರರು ಧ್ಯಾನಕ್ಕೆ ಕುಳಿತಿದ್ದಾರೆ. ಇದರಲ್ಲಿ ನಿಜವಾದ ಕಲಾಕಾರ ಯಾರು ಎಂದು ಯಮ ಯೋಚಿಸತೊಡಗಿದ. ಆ ಅವನಿಗೊಂದು ಉಪಾಯ ಹೊಳೆಯಿತು. ಆಗ ಯಮ, ಈ ಮೂರ್ತಿಗಳೆಲ್ಲ ಸುಂದರವಾಗಿದೆ. ಆದರೆ ಇದರಲ್ಲೊಂದು ಕೊರತೆ ಇದೆ ಎಂದು ಹೇಳಿದ.

ನಿಮ್ಮ ಮನೆಯಲ್ಲಿ ಹೀಗೆ ಪೂಜೆ ಮಾಡಿದರೆ…ನಿಮ್ಮ ಪೂಜೆ ದೇವರಿಗೆ ತಲುಪುತ್ತದೆ..!

ಇದನ್ನು ಕೇಳುತ್ತಿದ್ದಂತೆ, ಅಹಂಕಾರ ನೆತ್ತಿಗೇರಿಸಿಕೊಂಡ ಕಲಾಕಾರ, ನಾನು ಮಾಡಿದ ಮೂರ್ತಿಯಲ್ಲಿ ಕೊರತೆಯೇ..? ಸಾಧ್ಯವೇ ಇಲ್ಲ. ಎಷ್ಟೋ ವರ್ಷಗಳಿಂದ ನಾನು ಮೂರ್ತಿ ಮಾಡಿಕೊಂಡು ಬರುತ್ತಿದ್ದೇವೆ. ಇಲ್ಲಿಯವರೆಗೆ ನಾನು ಮಾಡಿದ ಮೂರ್ತಿಯಲ್ಲಿ ಯಾರಿಗೂ ಕೊರತೆ ಹುಡುಕಲು ಸಾಧ್ಯವಾಗಿಲ್ಲ. ಈಗ ನಿನಗೆ ಏನು ಕೊರತೆ ಕಾಣುತ್ತಿದೆ ಹೇಳು ಎಂದು ಕೇಳಿದ.

ಆಗ ಯಮ, ಹೌದು ಒಂದು ಕೊರತೆ ಇದೆ. ಕಲಾಕಾರನಲ್ಲಿರುವ ಅಹಂಕಾರ ಈ ಮೂರ್ತಿಗಳಲ್ಲಿ ಕಾಣುತ್ತಿಲ್ಲ ಎಂದು ಹೇಳಿ, ಕಲಾಕಾರನನ್ನು ಯಮ ಕರೆದೊಯ್ಯುತ್ತಾನೆ. ಹೀಗೆ ತಾನು ಅಪ್ರತಿಮ ಕಲಾಕಾರನೆಂದು ಮೆರೆದಿದ್ದಕ್ಕೆ, ಅವನಿಗೆ ಸಾವು ಅನುಭವಿಸಬೇಕಾಯಿತು. ಈ ಕಾರಣಕಕೆ ಅಹಂಕಾರ ಮಾಡಬಾರದು ಅಂತಾ ಹೇಳೋದು.

- Advertisement -

Latest Posts

Don't Miss