ಪಾಪ ಕರ್ಮಗಳನ್ನು ಮಾಡಿದವರು ನರಕಕ್ಕೆ ಹೋಗುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ರೆ ಯಮರಾಜ ಓರ್ವ ವೇಶ್ಯೆಯನ್ನು ಸ್ವರ್ಗಕ್ಕೆ ಕಳುಹಿಸಿದ್ದನಂತೆ. ಹಾಗಾದ್ರೆ ಯಮ ಯಾಕೆ ಹೀಗೆ ಮಾಡಿದ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಭದ್ರಪುರ ಎಂಬಲ್ಲಿ ಓರ್ವ ಸಾಧುವಿದ್ದರು. ಅವರು ನದಿ ನೀರಲ್ಲಿ ಮಿಂದು, ಪೂಜೆ ಪುನಸ್ಕಾರ ಮಾಡಿ, ಸತ್ಸಂಗ ಮಾಡಲು ಕುಳಿತುಕೊಳ್ಳುತ್ತಿದ್ದರು. ಅವರ ಮಾತನ್ನು ಕೇಳಲು ಹಲವರು ಆಗಮಿಸುತ್ತಿದ್ದರು. ಹೀಗೆ ಸತ್ಸಂಗ ಕೇಳಿ ಹೋದವರು, ಸಾಧುವನ್ನು ತುಂಬ ಹೊಗಳುತ್ತಿದ್ದರು. ಮತ್ತು ಅವರಿಗೆ ಕಾಣಿಕೆ ನೀಡುತ್ತಿದ್ದರು.
ಸಾವಿರ ವರ್ಷ ಮೊಸಳೆಯ ಜೊತೆ ಗಜೇ೦ದ್ರನ ಕಾದಾಟ…!
ಅದೇ ಊರಿನಲ್ಲಿ ಝುಮ್ಕಿ ಅನ್ನೋ ಹೆಸರಿನ ವೇಶ್ಯೆ ಇರುತ್ತಿದ್ದಳು. ಅವಳಿಗೆ ದೇವರ ಮೇಲೆ ಹೆಚ್ಚು ಭಕ್ತಿ ಇತ್ತು. ಅವಳೂ ಕೂಡ ಬೆಳಿಗ್ಗೆ ನದಿ ನೀರಿನಲ್ಲಿ ಮಿಂದು, ದೇವರ ದರ್ಶನ ಮಾಡಿ, ದಿನಚರಿ ಆರಂಭಿಸುತ್ತಿದ್ದಳು. ಒಮ್ಮೆ ದೇವಸ್ಥಾನಕ್ಕೆ ಹೋದಾಗ ಅಲ್ಲಿ ಆ ಸಾಧು ಬಂದಿರುತ್ತಾರೆ. ಆಗ ವೇಶ್ಯೆ ಅವರ ಕಾಲಿಗೆ ನಮಸ್ಕಾರ ಮಾಡಲು ಹೋಗುತ್ತಾಳೆ. ಆದ್ರೆ ಅಲ್ಲಿದ್ದ ದೇವಸ್ಥಾನದ ಪೂಜಾರಿ ಅವಳಿಗೆ ಹೀಗೆ ಮಾಡಬೇಡ ಎನ್ನುತ್ತಾರೆ. ಸಾಧು ಇದಕ್ಕೆ ಕಾರಣ ಕೇಳಿದಾಗ, ಅವಳೋರ್ವ ವೇಶ್ಯೆ ಎನ್ನುತ್ತಾರೆ.
ಆಗ ಸಾಧುಗಳು, ನೀನು ಸತ್ಸಂಗ ಕೇಳಲು ನನ್ನ ಕುಟೀರಕ್ಕೆ ಬಾ, ನಿನಗೆಲ್ಲ ಒಳ್ಳೆಯದಾಗುತ್ತದೆ ಎನ್ನುತ್ತಾರೆ. ವೇಶ್ಯೆ ಪ್ರತಿದಿನ ಸತ್ಸಂಗ ಕೇಳಲು ಬರುತ್ತಾಳೆ. ಆಗ ಸಾಧುಗಳು ಆಕೆಗೆ, ನೀನು ಈಗ ಮಾಡುವ ಕೆಲಸವನ್ನು ಬಿಟ್ಟು, ಹಣ್ಣಿನ ವ್ಯಾಪಾರ ಮಾಡು ಎನ್ನುತ್ತಾರೆ. ಆಕೆ ತನ್ನಲ್ಲಿದ್ದ ದುಡ್ಡನ್ನು ಸೇರಿಸಿ, ಹಣ್ಣು ಖರೀದಿಸಿ ಮಾರುತ್ತಾಳೆ. ಶುರುವಿನಲ್ಲಿ ಆಕೆಯ ಬಳಿ ಯಾರೂ ಹಣ್ಣು ಖರೀದಿಸಲು ಬರುತ್ತಿರಲಿಲ್ಲ. ಆದರೆ ದಿನಗಳೆದಂತೆ, ಆಕೆಯ ಬಳಿ ಎಲ್ಲರೂ ಹಣ್ಣು ಖರೀದಿಸಲು ಬಂದರು.
ಗಾಯತ್ರಿ ಮಂತ್ರವನ್ನು ಹೀಗೆ ಪಠಿಸಿ ಅದೃಷ್ಟ ನಿಮ್ಮದಾಗಿಸಿಕೊಳ್ಳಿ..
ನಂತರ ಆಕೆ ತನ್ನ ವ್ಯಾಪಾರದಿಂದ ಬಂದ ಲಾಭದಲ್ಲಿ ಕೊಂಚ ಭಾಗವನ್ನು ಬಡವರಿಗೆ ಕೊಡಲು ಪ್ರಾರಂಭಿಸಿದಳು. ಇದರಿಂದ ಊರಲ್ಲಿ ಆಕೆಗೆ ಉತ್ತಮ ಹೆಸರು ಬರಲಾರಂಭಿಸಿತು. ಹೀಗೆ ದಿನಗಳೆದು, ಝುಮ್ಕಿ ವೃದ್ಧೆಯಾದಳು. ಸಾಧು ಮತ್ತು ಝಮ್ಕಿ ಇಬ್ಬರೂ ಒಂದೇ ದಿನ ಮರಣ ಹೊಂದಿದರು. ಇಬ್ಬರೂ ಯಮಲೋಕಕ್ಕೆ ಹೋದರು.
ಆಗ ಯಮ ಝುಮ್ಕಿಯನ್ನು 2 ದಿನ ನರಕಕ್ಕೆ ಹೋಗಿ, ನಂತರ ಸ್ವರ್ಗಕ್ಕೆ ಹೋಗಲು ಹೇಳಿದರು. ಆದರೆ ಸಾಧುವಿಗೆ ಆಜೀವನ ಪರ್ಯಂತ ನರಕಕ್ಕೆ ಹೋಗಲು ಹೇಳಿದರು. ಇದಕ್ಕೆ ಕಾರಣವೇನು ಎಂದು ಸಾಧು ಕೇಳಿದಾಗ, ಉತ್ತರಿಸಿದ ಯಮ, ನೀನು ಜೀವನಪೂರ್ತಿ ಎಲ್ಲರಿಗೂ ಒಳ್ಳೆ ಗುಣವೆಂದರೇನೆಂದು ತಿಳಿಸಿಕೊಟ್ಟೆ. ಆದರೆ, ನೀನು ಅದನ್ನು ಅಳವಡಿಸಿಕೊಳ್ಳಲಿಲ್ಲ. ದುಡ್ಡಿಗಾಗಿ, ನೀನು ಸತ್ಸಂಗ ಮಾಡುತ್ತಿದ್ದೆ. ಹಾಗಾಗಿ ನಿನಗೆ ನರಕ ಪ್ರಾಪ್ತಿಯಾಗಿದೆ. ಅದೇ ವೇಶ್ಯೆ ತನ್ನ ತಪ್ಪನ್ನು ತಿದ್ದಿಕೊಂಡು, ಹಣ್ಣಿನ ವ್ಯಾಪಾರ ಮಾಡಿ, ಬಡವರಿಗೆ ಸಹಾಯ ಮಾಡಿದಳು. ಹಾಗಾಗಿ ಅವಳಿಗೆ 2 ದಿನ ನರಕ, ಉಳಿದ ಜೀವನ ಸ್ವರ್ಗ ಸಿಕ್ಕಿದೆ ಎನ್ನುತ್ತಾನೆ.