Tuesday, October 22, 2024

Latest Posts

ಟೆನ್ಶನ್‌ನಿಂದ ಮುಕ್ತಿ ಸಿಗಬೇಕಾ..? ಹಾಗಾದ್ರೆ ನಾವಿಲ್ಲಿ ಹೇಳಿರುವ ಆಹಾರ ತಿನ್ನಿ..

- Advertisement -

ಇಂದಿನ ಜೀವಮಾನದಲ್ಲಿ ಯುವಪೀಳಿಗೆಯ ಸಮಸ್ಯೆ ಅಂದ್ರೆ ಸ್ಟ್ರೆಸ್. ಕೆಲಸದ ಟೆನ್ಶನ್‌ನಿಂದ, ಕೌಟುಂಬಿಕ ಸಮಸ್ಯೆಯಿಂದ ಬೇಸತ್ತ ಯುವಕ ಯುವತಿಯರು, 30 ದಾಟುತ್ತಿದ್ದಂತೆ, ಮುದುಕರ ರೀತಿಯಾಗಿಬಿಡುತ್ತಾರೆ. 31ನೇ ವಯಸ್ಸಿಗೆ ಬಿಳಿ ಕೂದಲು, ರೋಗ ರುಜಿನಗಳು ಅಂಟಿಕೊಳ್ಳುವ ಭಯವೆಲ್ಲ ಕಾಡಲು ಶುರುವಾಗಿದೆ. ಹೀಗೆಲ್ಲ ಯಾಕಾಗುತ್ತಿದೆಯಂದರೆ, ಎಲ್ಲದಕ್ಕೂ ಟೆನ್ಶನ್ ತೆಗೆದುಕೊಳ್ಳುವ ಸ್ವಭಾವ ಹೆಚ್ಚಾಗುತ್ತಿರುವ ಕಾರಣ. ಇದಕ್ಕೆ ಕಾರಣವೇನಂದ್ರೆ ಆಹಾರ ಸೇವನೆಯ ಪ್ರಭಾವ. ಹಾಗಾದ್ರೆ ಯಾವ ರೀತಿಯ ಆಹಾರ ತಿಂದ್ರೆ, ನಮ್ಮ ಮಾನಸಿಕ ಸ್ಥಿತಿ ಸರಿಯಾಗುತ್ತದೆ..? ನಾವು ಯಾವಾಗಲೂ ಚೈತನ್ಯದಾಯಕವಾಗಿರಲು ಏನು ಸೇವಿಸಬೇಕು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಸಿಕ್ಕಿದ್ದೆಲ್ಲ, ಸಿಕ್ಕ ಸಿಕ್ಕ ಸಮಯದಲ್ಲಿ ತಿಂದ್ರೆ, ಅದು ನಮ್ಮ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಮೇಲೆ ಪ್ರಭಾವ ಬೀರುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ಬ್ರೆಡ್ಡೋ, ಬಿಸ್ಕಿಟ್ಟನ್ನೋ ತಿಂಡಿ ಅಂತಾ ತಿಂದು, ಮಧ್ಯಾಹ್ನ ನಾಲ್ಕು ತುತ್ತು ಹೊಟೇಲ್ ಅನ್ನ ಉಂಡು, ಸಂಜೆ ಟೀ, ಸ್ನ್ಯಾಕ್ಸ್ ತಿಂದ್ರೆ, ಅಲ್ಲಿಗೆ ದಿನ ಮುಗಿದ ಹಾಗೆ. ಇನ್ನು ರಾತ್ರಿ ಊಟ ಮಾಡೋಣವೆಂದರೆ, ಸಂಜೆ ತಿಂದ ಹೊಟೇಲ್ ಸ್ನ್ಯಾಕ್ಸ್ ಜೀರ್ಣವಾಗಿರೋದಿಲ್ಲಾ. ಹಾಗಾಗಿ ರಾತ್ರಿ ಊಟ ಸ್ಕಿಪ್ ಮಾಡಿ, ನಿದ್ದೆ ಮಾಡಿಬಿಡೋದು.

ಹೀಗೆ ದಿನಚರಿಯಾದ್ರೆ, ನಮ್ಮ ದೇಹಕ್ಕೆ ಪೋಷಕಾಂಶ ಎಲ್ಲಿಂದ ಸಿಗಬೇಕು..? ಹೀಗೆ ತಿಂದ್ರೆ, ನಾವು ಮುದುಕರ ಹಾಗೆ ಕಾಣದೇ, ಇನ್ನೋನು ಯಾವಕರಂತಿರಲು ಸಾಧ್ಯವಾದೀತೇ..? ಹಾಗಾಗಿ ತಿನ್ನುವ ರೀತಿಯನ್ನು ಬದಲಾಯಿಸಿ. ಇದರಿಂದ ನಿಮ್ಮ ಜೀವನವೇ ಬದಲಾಗುತ್ತದೆ. ನಿಮ್ಮ ದೇಹ ಸಧೃಡವಾಗುತ್ತದೆ. ಯೌವನಯುತವಾಗಿ, ಅಂದವಾಗಿ ಕಾಣುತ್ತೀರಿ. ಚೈತನ್ಯದಾಯಕವಾಗಿ, ಆಫೀಸು ಕೆಲಸ, ಮನೆಯ ಒತ್ತಡವನ್ನೆಲ್ಲ ನಿಭಾಯಿಸುವ ಶಕ್ತಿ ನಿಮ್ಮಲ್ಲಿ ಬರುತ್ತದೆ.

ಸೋರೇಕಾಯಿ ಮತ್ತು ಸೌತೇಕಾಯಿ. ಇದರಲ್ಲಿ ನೀರಿನ ಅಂಶ ಹೆಚ್ಚಾಗಿರುತ್ತದೆ. ಮ್ಯಾಗ್ನಿಶಿಯಂ, ಐರನ್ ಸೇರಿ ಹಲವಾರು ಪೋಷಕಾಂಶಗಳಿಂದ ಸೋರೆಯಕಾಯಿ ಮತ್ತು ಸೌತೇಕಾಯಿ ಭರಪೂರವಾಗಿದೆ. ಹಾಗಾಗಿ ನೀವು ಸೋರೆಕಾಯಿಯ ಸಾರು, ಅಥವಾ ಪಲ್ಯ ಮಾಡಿ ಸೇವಿಸಿ. ಹಸಿ ಸೌತೇಕಾಯಿಯನ್ನು ಸೇವಿಸಿ. ಇದು ಹೊಟ್ಟೆ ಸಮಸ್ಯೆಯನ್ನ ದೂರ ಮಾಡುತ್ತದೆ. ಇದರಿಂದ ರಕ್ತ ಸಂಚಾರ ಸುಗಮವಾಗುತ್ತದೆ. ಮತ್ತು ನೀವು ಯಾವಾಗಲೂ ಚೈತನ್ಯದಾಯಕವಾಗಿರುವಂತೆ ಮಾಡುತ್ತದೆ.

ಎರಡನೇಯದಾಗಿ ಕುಂಡಬಳಕಾಯಿ ಮತ್ತು ಹೀರೆಕಾಯಿ. ನೀವು ಈ ತರಕಾರಿಗಳ ಪಲ್ಯ, ಸಾರು, ಚಟ್ನಿ ಮಾಡಿ ತಿನ್ನಬಹುದು. ವಿಟಾಮಿನ್ ಇ, ಎ ಹೊಂದಿರುವ ಈ ತರಕಾರಿಗಳು, ನಿಮ್ಮ ಆರೋಗ್ಯವನ್ನ ಉತ್ತಮವಾಗಿರಿಸುವಲ್ಲಿ ಸಹಾಯಕವಾಗಿದೆ. ಇದರೊಂದಿಗೆ ನೀವು ಹಲವಾರು ಹಸಿ ತರಕಾರಿ, ಹಣ್ಣುಗಳನ್ನ ತಿನ್ನಿ. ಆದಷ್ಟು ನೀರಿನಂಶವುಳ್ಳ ತರಕಾರಿ, ಹಣ್ಣನ್ನ ತಿನ್ನಿ. ನೀವು ಜಂಕ್‌ಫುಡ್ ಬದಲು. ಹೀಗೆ ಆರೋಗ್ಯಕರ ಆಹಾರವನ್ನ ಒಂದು ತಿಂಗಳು ಸೇವಿಸಿ, ನಿಮ್ಮ ಎಷ್ಟೆಲ್ಲ ಉತ್ತಮ ಬದಲಾವಣೆಗಳಾಗುತ್ತದೆ ನೋಡಿ..

- Advertisement -

Latest Posts

Don't Miss