ಚಳಿಗಾಲದಲ್ಲಿ ಇಂಥ ಖಾಯಿಲೆಗಳು ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತದೆ..

Health Tips: ಚಳಿಗಾಲ ಬಂತಂದ್ರೆ, ನೆಗಡಿ- ಕೆಮ್ಮು, ಜ್ವರ ಎಲ್ಲವೂ ಬರುತ್ತದೆ. ಹಾಗಾಗಿ ನಾವು ಚಳಿಗಾಲದಲ್ಲಿ ಎಷ್ಟೇ ಆರೋಗ್ಯ ಕಾಳಜಿ ಮಾಡಿದರೂನು ಕಡಿಮೆಯೇ. ಹಾಗಾಗಿ ಡಾ.ಆಂಜೀನಪ್ಪಾ ಅವರು ಚಳಿಗಾಲದಲ್ಲಿ ನಾವು ಯಾವ ರೀತಿ, ಆರೋಗ್ಯ ಕಾಳಜಿ ಮಾಡಬೇಕು ಅಂತಾ ಹೇಳಿದ್ದಾರೆ. ಅದೇ ರೀತಿ ಇಂದು ಚಳಿಗಾಲದಲ್ಲಿ ಯಾವ ಖಾಯಿಲೆಗಳು ಹೆಚ್ಚಾಗಿರುತ್ತದೆ ಅನ್ನೋ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಚಳಿಗಾಲದಲ್ಲಿ ನಾರ್ಮಲ್ ಆಗಿ ಜ್ವರ, ಕೆಮ್ಮು, ನೆಗಡಿ ಕಂಡು ಬರುತ್ತದೆ. ಇದೇ ವೈರಲ್ ಇನ್‌ಫೆಕ್ಷನ್. ಇದಕ್ಕಾಗಿ ನಾವು ಮನೆಯಲ್ಲೇ ಮದ್ದು ಮಾಡಿಕೊಳ್ಳಬಹುದು. ಆದರೆ ಎರಡು ಮೂರು ದಿನವಾದ್ರೂ ಕಡಿಮೆಯಾಗದಿದ್ದಲ್ಲಿ, ವೈದ್ಯರ ಬಳಿ ಚಿಕಿತ್ಸೆ ತೆಗೆದುಕೊಳ್ಳಿ.

ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಜ್ವರ ಸಾಮಾನ್ಯವಾಗಿರುತ್ತದೆ. ಹಾಗಾಗಿ ನಾವು ಮೊದಲೇ ಮುನ್ನೆಚ್ಚರಿಕೆ ವಹಿಸಬೇಕು. ಮಕ್ಕಳಿಗೆ ಬೆಚ್ಚಗಿನ ಬಟ್ಟೆ ಹಾಕಬೇಕು. ಜನಜಂಗುಳಿ ಇರುವ ಪ್ರೇದಶಕ್ಕೆ ಹೋಗುವುದನ್ನು ತಪ್ಪಿಸಬೇಕು. ಜ್ವರ, ನೆಗಡಿ, ಕೆಮ್ಮು ಬಂದಾಗ, ಮನೆಮದ್ದುಗಳಿಂದ ಸರಿಯಾಗುವುದಿದ್ದರೆ, ಮನೆಮದ್ದುಗಳನ್ನೇ ಬಳಸಬಹುದು. ಇನ್ನು ಈ ಸಮಯದಲ್ಲಿ ಬಿಸಿ ನೀರು, ಬಿಸಿ ಬಿಸಿ ಆಹಾರಗಳನ್ನೇ ಸೇವಿಸಬೇಕು. ಫ್ರಿಜ್‌ನಲ್ಲಿ ಇರಿಸಿದ ಆಹಾರವನ್ನು ಸೇವಿಸದಿದ್ದಲ್ಲಿ ಉತ್ತಮ ಅಂತಾರೆ ವೈದ್ಯರು.

ಇನ್ನು ಕೆಲವರಿಗೆ ಜ್ವರ, ಶೀತ ಹೆಚ್ಚಾಗಿ ಗಂಟಲು ನೋವು ಬಂದು, ಕಿವಿ ಸೋರಲು ಶುರುವಾಗುತ್ತದೆ. ಏಕೆಂದರೆ, ಕಿವಿಗೂ ಗಂಟಲಿಗೂ ಕನೆಕ್ಟ್ ಆಗುವ ಟ್ಯೂಬ್ ಇರುತ್ತದೆ. ಹಾಗಾಗಿ ಗಂಟಲು ನೋವಾಗಿ, ಊದಿಕೊಂಡರೆ, ಕಿವಿ ಸೋರಲು ಶುರುವಾಗುತ್ತದೆ. ಇಂಥ ಸಮಯದಲ್ಲಿ ಮಾತ್ರ ನಿರ್ಲಕ್ಷ್ಯ ಮಾಡದೇ, ವೈದ್ಯರ ಬಳಿ ಚಿಕಿತ್ಸೆ ಪಡೆಯಲೇಬೇಕು. ಮಕ್ಕಳಿಗೆ ಹೆಚ್ಚಾಗಿ ಈ ಖಾಯಿಲೆ ಕಂಡು ಬರುತ್ತದೆ. ಇದನ್ನು ನಿರ್ಲಕ್ಷಿಸಿದರೆ, ಕಿವುಡುತನ ಬರಬಹುದು. ಹಾಗಾಗಿ ಈ ಬಗ್ಗೆ ಎಚ್ಚರ ವಹಿಸಿ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ..

About The Author