Health Tips: ಅತಿಯಾದ ಒತ್ತಡ ಅಂದ್ರೆ, ಸ್ಟ್ರೆಸ್. ನಿಮ್ಮ ದೇಹದಲ್ಲಿ ಕೆಲಸ ಮಾಡುವ ಚೈತನ್ಯವೇ ಇಲ್ಲ. ದೇಹದಲ್ಲಿ ಶಕ್ತಿಯೇ ಇಲ್ಲ ಎನ್ನಿಸಿದಾಗ. ಅದನ್ನು ಅತೀಯಾದ ಒತ್ತಡ ಎಂದು ಹೇಳಲಾಗುತ್ತದೆ. ದೇಹದಲ್ಲಿ ಶಕ್ತಿ ಕಡಿಮೆಯಾದಾಗ, ಮಾನಸಿಕ ಶಕ್ತಿಯೂ ಕುಂಠಿತಗೊಳ್ಳುತ್ತದೆ. ಇದೆಲ್ಲ ಸಮಸ್ಯೆಗೆ ಕಾರಣವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಹೇಳಿದ್ದಾರೆ.
ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿದಾಗ, ಮತ್ತು ಪೂರ್ಣವಾಗಿ ನಿದ್ದೆ ಮಾಡಿದಾಗ ಮಾತ್ರ, ನಿಮ್ಮ ದೇಹದ ಒತ್ತಡ ಕಡಿಮೆಯಾಗುತ್ತದೆ. ಅಲ್ಲದೇ, ಆರೋಗ್ಯಕರ ಆಹಾರ ಸೇವನೆ ಮಾಡುವುದು ಕೂಡ ತುಂಬಾ ಮುಖ್ಯವಾಗಿರುತ್ತದೆ. ಕೆಲಸಕ್ಕೆ ಹೋಗುವವರು ಹೆಚ್ಚು ಒತ್ತಡದಿಂದ ಬಳಲುತ್ತಾರೆ. ಮನೆ ಜವಾಬ್ದಾರಿ, ಆಫೀಸು ಕೆಲಸ ಎಲ್ಲದರಿಂದ ಸುಸ್ತಾಗಿ ಒತ್ತಡ ಹೆಚ್ಚಾಗುತ್ತದೆ. ಇಂಥ ಸಂದರ್ಭದಲ್ಲಿ ವಾಕಿಂಗ್, ಯೋಗ, ಧ್ಯಾನ, ಉತ್ತಮ ನಿದ್ರೆ, ಆರೋಗ್ಯಕರ ಆಹಾರ ಸೇವನೆ ಎಲ್ಲವೂ ಮುಖ್ಯವಾಗಿರುತ್ತದೆ.
ಬೆಳಿಗ್ಗೆ ಅರ್ಜೆಂಟಾಗಿ ಆಫೀಸಿಗೆ ತಿಂಡಿ ತಿನ್ನದೇ ಹೋಗುವುದು. ಹೊಟೇಲ್‌ನಲ್ಲಿ ಸಿಕ್ಕಿದ್ದನ್ನು ತಿನ್ನುವುದು. ಮಧ್ಯಾಹ್ನ ಸರಿಯಾಗಿ ಊಟ ಮಾಡದೇ ಇರುವುದು. ಸಂಜೆ ಜಂಕ್ ಫುಡ್ ತಿಂದು ಹೊಟ್ಟೆ ತುಂಬಿಸಿಕೊಂಡು, ರಾತ್ರಿ ಖಾಲಿ ಹೊಟ್ಟೆಯಲ್ಲಿ ಮಲಗುವುದು. ಇವೆಲ್ಲವೂ ಅನಾರೋಗ್ಯಕರ ಜೀವನ ಶೈಲಿಯ ಲಕ್ಷಣ. ಹೀಗೆಲ್ಲ ಮಾಡಿದಾಗಲೇ, ಒತ್ತಡ ಹೆಚ್ಚಾಗುತ್ತದೆ.
ಇನ್ನು ಲೇಟಾಗಿ ಮಲಗಿ, ಬೇಗ ಎದ್ದು ಕೆಲಸಕ್ಕೆ ಒಡುವುದರಿಂದ, ನಿದ್ದೆ ಪೂರ್ಣವಾಗುವುದಿಲ್ಲ. ಅಪೂರ್ಣ ನಿದ್ರೆಯಿಂದ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ. ಹಾಗಾಗಿ ಆರೋಗ್ಯಕರ ಜೀವನ ಶೈಲಿ ನಡೆಯುವುದು ತುಂಬಾ ಮುಖ್ಯವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.