Sunday, December 22, 2024

Latest Posts

ನಾಳೆ ಮಂಡ್ಯ ಜನತೆಗೆ ಬೀಗರ ಊಟದ ಔತಣಕ್ಕೆ ಆಮಂತ್ರಿಸಿದ ಸುಮಲತಾ ಅಂಬರೀಷ್..

- Advertisement -

Movie news: Mandya: ಕಳೆದ ವಾರವಷ್ಟೇ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿದ್ದಪ್ಪ ವಿವಾಹವಾಾಗಿದ್ದು, ಬೆಂಗಳೂರಿನಲ್ಲಿ ಗ್ರ್ಯಾಂಡ್ ಆಗಿ ಆರತಕ್ಷತೆಯನ್ನ ಕೂಡ ಮಾಡಲಾಗಿತ್ತು. ಇದೀಗ ಸುಮಲತಾ ತನ್ನ ಕ್ಷೇತ್ರದ ಜನರಿಗಾಗಿ ಬೀಗರ ಊಟದ ವ್ಯವಸ್ಥೆ ಮಾಡಿದ್ದು, ಎಲ್ಲರೂ ಬರಬೇಕೆಂದು ಸಾಮಾಜಿಕ ಜಾಲತಾಣದ ಮುಖಾಂತರ ಕೋರಿದ್ದಾರೆ.

ಫೇಸ್‌ಬುಕ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಸುಮಲತಾ ಅಂಬರೀಷ್ ಮಂಡ್ಯ ಜಿಲ್ಲೆಯ ಆತ್ಮೀಯ ಜನತೆಗೆ ನಿಮ್ಮ ಸುಮಲತಾ ಅಂಬರೀಶ್ ಮಾಡುವ ನಮಸ್ಕಾರಗಳು.
ತಮ್ಮೆಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳೊಂದಿಗೆ ನನ್ನ ಮಗನಾದ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಮದುವೆಯನ್ನು ಮತ್ತು ಆರತಕ್ಷತೆ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ನೆರವೇರಿಸಿರುತ್ತೇನೆ.
ಮಂಡ್ಯದ ಸ್ವಾಭಿಮಾನಿ ಜನತೆ ಅಂಬರೀಶ್ ಕುಟುಂಬದ ಮೇಲೆ ಇಟ್ಟಿರುವ ಪ್ರೀತಿ ವಾತ್ಸಲ್ಯ ಅಭಿಮಾನಕ್ಕೆ ನಾವು ಸದಾ ಚಿರಋಣಿಯಾಗಿರುತ್ತೇವೆ.
ಅಭಿಷೇಕ್ ಹಾಗೂ ಅವಿವಾ ಮದುವೆಯ ಸಂಭ್ರಮವನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಇದೇ ಶುಕ್ರವಾರ, ದಿನಾಂಕ 16/06/2023 ರಂದು ಬೆಳಿಗ್ಗೆ 11:30 ರಿಂದ ಬೀಗರ ಔತಣವನ್ನು ಏರ್ಪಡಿಸಲಾಗಿದೆ. ಇದಕ್ಕಾಗಿ ಮಂಡ್ಯ ಬಳಿಯ ಗೆಜ್ಜಲಗೆರೆಯಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಮದುವೆ ಕಾರ್ಯಕ್ರಮಗಳು ಮತ್ತು ಇನ್ನಿತರೆ ಕಾರ್ಯದ ಒತ್ತಡದಿಂದ ನಾನು ಖುದ್ದಾಗಿ ಬಂದು ಬೀಗರ ಔತಣಕ್ಕೆ ತಮ್ಮನ್ನು ಆಹ್ವಾನಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಾವೆಲ್ಲರೂ ಅನ್ಯತಾ ಭಾವಿಸದೆ ತಮ್ಮ ಕುಟುಂಬ ಸಮೇತರಾಗಿ ಬೀಗರ ಔತಣಕ್ಕೆ ಆಗಮಿಸಿ ನಮ್ಮ ಆತಿಥ್ಯವನ್ನು ಸ್ವೀಕರಿಸಿ, ವಧು ವರರನ್ನು ಆಶೀರ್ವದಿಸಬೇಕಾಗಿ ಈ ಮೂಲಕ ಕೋರುತ್ತೇನೆ.
ಈ ಸಂದೇಶವನ್ನು ನನ್ನ ವೈಯಕ್ತಿಕ ಆಹ್ವಾನವೆಂದು ಭಾವಿಸಿ, ತಮ್ಮ ಕುಟುಂಬ ಸಮೇತರಾಗಿ ಬೀಗರ ಔತಣಕ್ಕೆ ಆಗಮಿಸಲು ಮತ್ತೊಮ್ಮೆ ಕೋರುತ್ತೇನೆ.
ಅಂಬರೀಶ್ ಅವರ ಕುಟುಂಬಕ್ಕೆ ತಾವು ಇಲ್ಲಿಯವರೆಗೆ ತೋರಿದ ಪ್ರೀತಿ ವಿಶ್ವಾಸ ಮತ್ತು ಆಶೀರ್ವಾದವನ್ನು, ಇನ್ನು ಮುಂದೆಯೂ ಸಹ ನೀಡಲು ತಮ್ಮನ್ನು ಕೋರುತ್ತೇನೆ ಎಂದು ಬರೆದುಕೊಂಡಿದ್ದಾರೆ.
https://karnatakatv.net/gali-janardhana-reddy-statement-about-raid-on-his-property/
- Advertisement -

Latest Posts

Don't Miss