Political News : ನಿನ್ನೆಯಷ್ಟೇ ಸುಮಲತಾ ಅಂಬರೀಷ್ ಸಾಮಾಜಿಕ ಜಾಲತಾಣದಲ್ಲಿ ಮಂಡ್ಯ ಜನತೆಗೆ ವಿಶೇಷ ಸಂದೇಶ ನೀಡಿದ್ದರು. ಸಂದೇಶದಂತೆ ಇಂದು ಸಂಸದೆ ಸುಮಲತಾ ತನ್ನ ನಿಲುವನ್ನು ಮಂಡ್ಯ ಜನತೆಯ ಮುಂದಿಟ್ಟರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಅಭಿಷೇಕ್ ಅಂಬರೀಷ್ ಸಾಥ್ ಕೂಡಾ ನೀಡಿದ್ರು ಇನ್ನು ಇದೇ ವೇಳೆ ದೇವರ ಪೂಜೆಯ ಬಳಿಕ ತನ್ನ 5 ವರ್ಷದ ಕಾರ್ಯ ವೈಖರಿಯನ್ನು ಸಾಕ್ಷ್ಯ ಚಿತ್ರದ ಮೂಲಕ ಮಂಡ್ಯ ಜನತೆ ಮುಂದಿಟ್ಟರು. ಇನ್ನು ಅಭಿಮಾನಿಗಳ ಸಮ್ಮುಖದಲ್ಲಿ ತನ್ನ ನಿರ್ಧಾರ ಗಟ್ಟಿ ಮನಸ್ಸಿನಿಂದ ಹೇಳಿಯೇ ಬಿಟ್ಟರು ಆದ್ರೆ ಯಾರೂ ಊಹಿಸದ ನಿರ್ಧಾರ ಸುಮಕ್ಕ ಜನತೆ ಮುಂದಿಟ್ಟಿದ್ದು ನಿಜಕ್ಕೂ ಆಶ್ಚರ್ಯವಾಗಿತ್ತು. ಹಾಗಿದ್ರೆ ಸುಮಕ್ಕ ನಿಲುವೇನು ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.
ಲೋಕ ಸಭೆ ಚುನಾವಣೆಗೆ ಪ್ರತಿ ಕ್ಷೇತ್ರಗಳು ರಂಗೇರುತ್ತಿದ್ದರೂ ಮಂಡ್ಯ ಕ್ಷೇತ್ರ ವಿಭಿನ್ನವಾಗಿಯೇ ಗಮನ ಸೆಳೆಯಿತು. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಬಿಜೆಪಿ ಟಿಕೆಟ್ ತನಗೆ ಸಿಗುತ್ತದೆ ಎಂದು ಹಾಲಿ ಸಂಸದೆ ಸುಮಲತಾ ಅಂಬರೀಶ್ ನಿರೀಕ್ಷೆಯಲ್ಲಿದ್ದರು. ಆದರೆ ಕೊನೆ ಹಂತದಲ್ಲಿ ಸುಮಲತಾ ಅಂಬರೀಶ್ ಅವರಿಗೆ ಟಿಕೆಟ್ ತಪ್ಪಿದೆ. ಮಂಡ್ಯ ಲೋಕಸಭಾ ಕ್ಷೇತ್ರ ಬಿಜೆಪಿ ಜಿಡಿಎಸ್ ಬಿಟ್ಟುಕೊಂಟ್ಟಿದ್ದು, ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದಾರೆ. ಟಿಕೆಟ್ ಕೈತಪ್ಪಿದ್ದರಿಂದ ಸುಮಲತಾ ಅಂಬರೀಶ್ ಕಳೆದ ಕೆಲವು ದಿನಗಳಿಂದ ಸೈಲೆಂಟ್ ಆಗಿದ್ದರು. ಇತ್ತೀಚಿಗೆ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿವೈ ವಿಜಯೇಂದ್ರ ಸುಮಲತಾ ಅಂಬರೀಶ್ ಅವರನ್ನು ಭೇಟಿ ಮಾಡಿ, ಸೂಕ್ತ ಸ್ಥಾನಮಾನ ನೀಡುವ ಭರವಸೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ಕೂಡ ಸುಮಲತಾ ಅಂಬರೀಶ್ ಅವರ ಮುಂದಿನ ನಡೆ ಏನು ಎಂಬುವುದು ಯಕ್ಷ ಪ್ರಶ್ನೆಯಾಗಿತ್ತು. ಈ ಪ್ರಶ್ನೆ ಸಂಸದೆ ಸುಮಲತಾ ಅಂಬರೀಶ್ ಇಂದು ಮಂಡ್ಯದಲ್ಲಿ ಉತ್ತರ ನೀಡಿದ್ದಾರೆ.
ಕಾಳಿಕಾಂಬ ಸಮುದಾಯ ಭ ವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸುಮಲತಾ ಅಂಬರೀಶ್ ಭಾವುಕ ನುಡಿಗಳ ಜೊತೆಗೆ ಅಧಿಕಾರದ ಆಸೆಗಾಗಿ ರಾಜಕೀಯಕ್ಕೆ ಬಂದಿಲ್ಲ ಎಂದು ಹೇಳಿದರು. ಮಂಡ್ಯ ಬಿಟ್ರೆ ರಾಜಕೀಯ ಬೇಡ . ರಾಜಕೀಯ ಮಾಡೋದಾದ್ರೆ ಮಂಡ್ಯದಲ್ಲಿ ಮಾತ್ರ. ಕಾಂಗ್ರೆಸ್ ಗೆ ಹೋಗುವ ಅವಶ್ಯಕತೆ ನನಗಿಲ್ಲ ಎಂದು ಸುಮಲತಾ ಕಾಂಗ್ ನಾಯಕರಿಗೆ ಟಾಂ ಗ್ ಕೊಟ್ರು. ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ಹೇಳಿ ತನ್ನ ಸ್ಪಷ್ಟ ನಿಲುವನ್ನು ಸುಮಲತಾ ನೀಡಿದರು. ಈ ಬಾರಿ ನಾನು ಸ್ಪರ್ಧೆ ಮಾಡ್ತಾ ಇಲ್ಲ ಆದ್ರೆ ಮಂಡ್ಯ ಬಿಟ್ಟು ಹೋಗುತ್ತಿಲ್ಲ ಎಂದು ಹೇಳಿದರು.
ಬಿಜೆಪಿ ಪಕ್ಷ ಸೇರಿದ ಸುಮಲತಾ :
ನಮ್ಮ ಜಿಲ್ಲೆಗೆ ಅನುದಾನ ಕೊಟ್ಟಿದ್ದು ಮೋದಿ ಎಂದು ಹೇಳಿ ಬಿಜೆಪಿ ಗೆ ಬೆಂಬಲ ನೀಡಿದರು ಸುಮಲತಾ . ಸೋತ ಕ್ಷೇತ್ರವನ್ನೇ ಬಿಟ್ಟು ಕೊಡದ ಸಮಯದಲ್ಲಿ ನಾನು ಗೆದ್ದ ಕ್ಷೇತ್ರವನ್ನು ದೇಶದ ಅಭಿವೃದ್ಧಿಗಾಗಿ ಬಿಟ್ಟುಕೊಡುತ್ತೇನೆ. ಎಂದು ಹೇಳಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡೋದು ಖಚಿತವಾಗಿಸಿದ್ರು.
ಒಟ್ಟಾರೆ ಬಿಜೆಪಿ ಮಹಾ ನಾಯಕರಿಗೆ ತಲೆನೋವಾಗಿ ಕಾಣಿಸಿಕೊಂಡಿದ್ದ ಮಂಡ್ಯ ಗೌಡ್ತಿ ಜಯಭೇರಿ ಭಯದ ವಾತಾವರಣಕ್ಕೆ , ಎಲ್ಲಾ ಪ್ರಶ್ನೆಗಳಿಗೆ ಇಂದಿನ ಸುಮಲತಾ ಅವರ ಉತ್ತರ ತೆರೆ ಹಾಕಿದೆ. ಇನ್ನು ಎಪ್ರಿಲ್ 6ಕ್ಕೆ ಸುಮಲತಾ ಮಹಾನಾಯಕರ ಸಮ್ಮುಖದಲ್ಲಿ ಬಿಜೆಪಿ ಸೇರೋದು ಬಹುತೇಕ ಖಚಿತವಾಗಿದೆ.
ಬರೀ ಪ್ರಚಾರಕ್ಕೆಂದೇ ಸಮಯ ಕಳೆಯುವವರು ಏನು ಅಭಿವೃದ್ಧಿ ಮಾಡುತ್ತಾರೆ..?: ಸಂತೋಷ್ ಲಾಡ್ ಪ್ರಶ್ನೆ..
ಅವರ ಮನಸ್ಸು ಒಂದು ಕಡೆ, ದೇಹ ಒಂದು ಕಡೆ ಇದೆ: ಎಸ್.ಟಿ.ಸೋಮಶೇಖರ್ ಬಗ್ಗೆ ಕರಂದ್ಲಾಜೆ ಮಾತು