Wednesday, September 17, 2025

Latest Posts

Summer Special: ನಾಲ್ಕು ರೀತಿಯ ಮಿಲ್ಕ್ ಶೇಕ್ ರೆಸಿಪಿ..

- Advertisement -

ಇಂದು ನಾವು ಸಮ್ಮರ್‌ ಸ್ಪೇಶಲ್‌ನಲ್ಲಿ ನಾಲ್ಕು ರೀತಿಯ ಮಿಲ್ಕ್ ಶೇಕ್ ರೆಸಿಪಿಯನ್ನ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ. ಪಿಸ್ತಾ ಮಿಲ್ಕ್ ಶೇಕ್, ಬಾದಾಮ್ ಮಿಲ್ಕ್ ಶೇಕ್, ಟೂಟಿ ಫ್ರೂಟಿ ಮಿಲ್ಕ್ ಶೇಕ್, ರೋಸ್ ಮಿಲ್ಕ್ ಶೇಕ್ ಮಾಡೋದು ಹೇಗೆ..? ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು..? ಅಂತಾ ನೋಡೋಣ ಬನ್ನಿ..

ಪಿಸ್ತಾ ಮಿಲ್ಕ್ ಶೇಕ್: ಅರ್ಧ ಕಪ್ ನೆನೆಸಿದ, ಉಪ್ಪಿಲ್ಲದ ಪಿಸ್ತಾ. ಒಂದು ಸ್ಪೂನ್ ಕೇಸರಿ ದಳ, ಅರ್ಧ ಲೀಟರ್ ಹಾಲು, ಏಲಕ್ಕಿ ಪುಡಿ, ಅಗತ್ಯಕ್ಕೆ ತಕ್ಕಷ್ಟು ಸಕ್ಕರೆ, ಎರಡರಿಂದ ಮೂರು ಐಸ್ ಕ್ಯೂಬ್ಸ್. ಇವಿಷ್ಟು ಪಿಸ್ತಾ ಮಿಲ್ಕ್ ಶೇಕ್ ಮಾಡಲು ಬೇಕಾಗುವ ಸಾಮಗ್ರಿ. ನೆನೆಸಿದ ಪಿಸ್ತಾ ಮತ್ತು ಕೇಸರಿ ದಳವನ್ನು 15 ನಿಮಿಷಗಳ ಕಾಲ ಅರ್ಧ ಕಪ್ ಬಿಸಿ ಹಾಲಿನಲ್ಲಿ ನೆನೆಸಿಡಿ. 15 ನಿಮಿಷದ ಬಳಿಕ, ಪಿಸ್ತಾ ಮತ್ತು ಕೇಸರಿ ದಳವನ್ನು ಹಾಲಿನ ಸಮೇತವಾಗಿ ಪೇಸ್ಟ್‌ ಮಾಡಿ. ಈಗ ಅದೇ ಮಿಕ್ಸಿ ಜಾರ್‌ಗೆ ಹಾಲು, ಏಲಕ್ಕಿ ಪುಡಿ, ಸಕ್ಕರೆ, ಎರಡು ಐಸ್‌ ಕ್ಯೂಬ್ಸ್ ಹಾಕಿ, ಮತ್ತೊಮ್ಮೆ ಮಿಕ್ಸ್ ಮಾಡಿದ್ರೆ, ಪಿಸ್ತಾ ಮಿಲ್ಕ್ ಶೇಕ್ ರೆಡಿ. ಒಂದು ಗ್ಲಾಸ್‌ಗೆ ಈ ಮಿಲ್ಕ್ ಶೇಕ್, ಐಸ್‌ ಕ್ಯೂಬ್ಸ್, ಪಿಸ್ತಾ ತುಂಡು, ನಾಲ್ಕು ಕೇಸರಿ ದಳ ಹಾಕಿ ಗಾರ್ನಿಶ್ ಮಾಡಿ ಸವಿಯಿರಿ.

ಬಾದಾಮ್ ಮಿಲ್ಕ್ ಶೇಕ್: ಅರ್ಧ ಕಪ್ ನೆನೆಸಿದ ಬಾದಾಮ್‌. ಹಾಲು, ಸಕ್ಕರೆ, ಕೇಸರ್ ದಳ, ಏಲಕ್ಕಿ ಪುಡಿ, ಐಸ್‌ಕ್ಯೂಬ್ಸ್ ಇವಿಷ್ಟು ಬಾದಾಮ್ ಮಿಲ್ಕ್ ಶೇಕ್ ಮಾಡೋಕ್ಕೆ ಬೇಕಾದ ಸಾಮಗ್ರಿಗಳು. ಅರ್ಧ ಕಪ್ ಬಿಸಿ ಹಾಲಿಗೆ ಕೇಸರಿ ದಳ ಸೇರಿಸಿ ಮಿಕ್ಸ್ ಮಾಡಿ, 15 ನಿಮಿಷ ಇರಿಸಿ. ನಂತರ ನೆನೆಸಿದ ಬಾದಾಮ್ ಸಿಪ್ಪೆ ತೆಗೆದು, ಮಿಕ್ಸಿ ಜಾರ್‌ಗೆ ಹಾಕಿ, ಹಾಲಿನೊಂದಿಗೆ ಥಿಕ್ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಅದೇ ಮಿಕ್ಸಿ ಜಾರ್‌ಗೆ, ಹಾಲು, ಏಲಕ್ಕಿ ಪುಡಿ, ನೆನೆಸಿಟ್ಟ ಕೇಸರಿ ದಳ, ಐಸ್‌ಕ್ಯೂಬ್ಸ್, ಸಕ್ಕರೆ ಹಾಕಿ ಬ್ಲೆಂಡ್ ಮಾಡಿದ್ರೆ, ಬಾದಾಮ್ ಮಿಲ್ಕ್ ಶೇಕ್ ರೆಡಿ.

ಫ್ರೂಟ್ ಮಿಲ್ಕ್ ಶೇಕ್: ಸಣ್ಣಗೆ ಹೆಚ್ಚಿದ ಬಾಳೆ ಹಣ್ಣು, ಮಾವಿನ ಹಣ್ಣು, ಪಪ್ಪಾಯಿ, ಪೈನಾಪಲ್, ಆ್ಯಪಲ್, ಗ್ರೇಪ್ಸ್ ಹಾಕಿ, ಮಿಕ್ಸ್ ಫ್ರೂಟ್ಸ್ ಬೌಲ್ ತಯಾರಿಸಿ. ಅದನ್ನ ಮ್ಯಾಶ್ ಮಾಡಿ. ಅದಕ್ಕೆ ಸಕ್ಕರೆ, ಬದಾಮ್ ಹಾಲು ಹಾಕಿ ಮಿಕ್ಸ್ ಮಾಡಿ, ಗ್ಲಾಸ್‌ಗೆ ಹಾಕಿ ಸರ್ವ್ ಮಾಡಿ.

ರೋಸ್ ಮಿಲ್ಕ್ ಶೇಕ್: ರೋಸ್ ಸಿರಪ್, ಹಾಲು, ಸಕ್ಕರೆ, ಐಸ್‌ಕ್ಯೂಬ್ಸ್ ಇವಿಷ್ಟು ರೋಸ್ ಮಿಲ್ಕ್ ಶೇಕ್ ಮಾಡಲು ಬೇಕಾಗುವ ಸಾಮಗ್ರಿ. ಜ್ಯೂಸರ್ ಜಾರ್‌ಗೆ ಹಾಲು, ಸಕ್ಕರೆ, ಐಸ್‌ಕ್ಯೂಬ್ಸ್, ರೋಸ್ ಸಿರಪ್ ಹಾಕಿ, ಬ್ಲೆಂಡ್ ಮಾಡಿದ್ರೆ ರೋಸ್ ಮಿಲ್ಕ್ ಶೇಕ್ ರೆಡಿ. ಇದನ್ನ ಗುಲಾಬಿ ಹೂವಿನ ಪಕಳೆಯೊಂದಿಗೆ ಸರ್ವ ಮಾಡಬಹುದು. ಈಗ ಹೇಳಿರುವ ಮಿಲ್ಕ್ ಶೇಕ್ ರೆಸಿಪಿಯಲ್ಲಿ ನೀವು ಹಾಲನ್ನ ಬಿಸಿ ಮಾಡಿ, ತಣಿಸಿ ಬಳಸಬೇಕು.

- Advertisement -

Latest Posts

Don't Miss