Friday, June 20, 2025

Latest Posts

Summer Special: ಬೇಸಿಗೆಯಲ್ಲಿ ಕೂದಲನ್ನು ಈ ರೀತಿಯಾಗಿ ಕಾಪಾಡಿಕೊಳ್ಳಿ..

- Advertisement -

ಬೇಸಿಗೆ ಗಾಲ ಶುರುವಾಗಿದೆ. ನಾವು ನಮ್ಮ ದೇಹದ ತಂಪನ್ನು ಕಾಪಾಡಿಕೊಳ್ಳುವುದರ ಜೊತೆಗೆ, ನಮ್ಮ ಸೌಂದರ್ಯವನ್ನ ಕೂಡ ಕಾಪಾಡಿಕೊಳ್ಳಬೇಕಾಗಿದೆ. ಅದರಲ್ಲೂ ಈ ಸಮಯದಲ್ಲಿ ಕೂದಲ ಆರೋಗ್ಯವನ್ನ ಕಾಪಾಡಿಕೊಳ್ಳುವುದು ತುಂಬಾ ಮುಖ್ಯ.  ಹಾಗಾಗಿ ಇಂದು ನಾವು ಕೂದಲ ಸೌಂದರ್ಯ ಇಮ್ಮಡಿಗೊಳಿಸುವುದಕ್ಕೆ, ಕೂದಲು ಉದುರದಂತೆ ಕಾಪಾಡಿಕೊಳ್ಳಲು, ಹಲವು ಟಿಪ್ಸ್‌ಗಳನ್ನು ನಿಮ್ಮ ಮುಂದೆ ತಂದಿದ್ದೇವೆ. ಬನ್ನಿ ಆ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನ ತಿಳಿಯೋಣ.

ನಿಮ್ಮ ಕೂದಲು ಗಟ್ಟಿಮುಟ್ಟಾಗಿರಬೇಕು ಅಂದ್ರೆ, ನಿಮ್ಮ ಕೂದಲ ಬುಡ ಸ್ವಚ್ಛವಾಗಿರಬೇಕು. ಹಾಗಾಗಿ ನಿಮ್ಮ ಕೂದಲಿಗೆ ಸೂಟಾಗುವ ಹೇರ್ ಆಯಿಲ್ ಹಾಕಿ ಮಸಾಜ್ ಮಾಡಿ, ಉತ್ತಮ ಶ್ಯಾಂಪೂವಿನಿಂದ ವಾರದಲ್ಲಿ ಎರಡು ಬಾರಿ, ಹೇರ್ ವಾಶ್ ಮಾಡಿ. ತಲೆಗೆ ಎಣ್ಣೆ ಮಸಾಜ್ ಮಾಡುವ ಮುನ್ನ, ಎಣ್ಣೆಯನ್ನ ಕೊಂಚ ಬಿಸಿ ಮಾಡಿ, ಆರಿಸಿ, ಅಪ್ಲೈ ಮಾಡಿ.

ಇನ್ನು ತಲೆ ಸ್ನಾನಕ್ಕೂ ಅರ್ಧ ಗಂಟೆ ಮುನ್ನ ನೀವು ನಿಮ್ಮ ಕೂದಲಿಗೆ ಹೇರ್ ಪ್ಯಾಕ್ ಹಾಕಬೇಕು. ಈ ಹೇರ್ ಪ್ಯಾಕ್ ತಯಾರಿಸಲು ನೀವು ಒಂದು ಚಿಕ್ಕ ಬೌಲ್‌ಗೆ ನಾಲ್ಕು ಸ್ಪೂನ್ ನೆಲ್ಲಿಕಾಯಿ ಎಣ್ಣೆ, ಎರಡು ಸ್ಪೂನ್ ಸಾಸಿವೆ ಎಣ್ಣೆ, ಎರಡು ಚಮಚ ಹರಳೆಣ್ಣೆ ಮಿಕ್ಸ್ ಮಾಡಿ, ಈ ಎಣ್ಣೆಯಿಂದ 5 ನಿಮಿಷ ಹೇರ್ ಮಸಾಜ್ ಮಾಡಿಕೊಳ್ಳಿ. ಅರ್ಧಗಂಟೆ ಬಳಿಕ, ಒಳ್ಳೆಯ ಶ್ಯಾಂಪೂ ಹಾಕಿ, ಹೇರ್ ವಾಶ್ ಮಾಡಿ.

ನೀವು ಶ್ಯಾಂಪೂ ಬದಲು, ಮುಲ್ತಾನಿ ಮಿಟ್ಟಿ ಪುಡಿ, ಸೀಗೆಕಾಯಿ ಪುಡಿ ಇತ್ಯಾದಿಯನ್ನ ಬಳಸಬಹುದು. ಇನ್ನೂ ಮುಖ್ಯವಾದ ವಿಷಯ ಅಂದ್ರೆ, ನಿಮ್ಮ ಕೂದಲು ಆರೋಗ್ಯಕರವಾಗಿ, ಗಟ್ಟಿಮುಟ್ಟಾಗಿ ಇರಬೇಕು ಅಂದ್ರೆ, ನೀವು ಹೇರ್ ಡ್ರೈಯರ್, ಹೇರ್ ಸ್ಟ್ರೇಟ್ನರ್ ಹೆಚ್ಚು ಬಳಸಬಾರದು. ಇದನ್ನ ಪದೇ ಪದೇ ಬಳಸುವುದರಿಂದ ನಿಮ್ಮ ಕೂದಲಿನ ಆರೋಗ್ಯ ಹಾಳುಗುತ್ತದೆ. ಕೂದಲು ಉದುರುತ್ತದೆ.

- Advertisement -

Latest Posts

Don't Miss