ಏಪ್ರಿಲ್- ಮೇ ತಿಂಗಳು ಶುರುವಾದಂತೆ, ಮದುವೆ ಮುಂಜಿ, ಗೃಹಪ್ರವೇಶ ಇತ್ಯಾದಿ ಕಾರ್ಯಕ್ರಮಗಳು ಶುರುವಾಗುತ್ತದೆ. ಸುಮಾರು ಕಡೆ ಕಾರ್ಯಕ್ರಮಕ್ಕೆ ಹೋಗಲೇಬೇಕಾಗುತ್ತದೆ. ಅಂಥದ್ರಲ್ಲಿ ಪ್ರತಿ ಸಲವೂ ಲೇಯರ್‌ಗಟ್ಟಲೇ ಮೇಕಪ್ ಮಾಡಿ ಹೋಗಲಾಗುವುದಿಲ್ಲ. ಹಾಗಾಗಿ ಇಂದು ನಾವು ಮನೆಯಲ್ಲಿಯೇ ಫೇಶಿಯಲ್ ತಯಾರಿಸುವುದು ಹೇಗೆ. ಅದರಿಂದ ನಿಮ್ಮ ಮುಖದ ಕಾಂತಿಯನ್ನ ಹೆಚ್ಚಿಸುವುದಾದರೂ ಹೇಗೆ ಅನ್ನೋ ಬಗ್ಗೆ ಟಿಪ್ಸ್ ತಂದಿದ್ದೇವೆ. ಆ ಬಗ್ಗೆ ತಿಳಿಯೋಣ ಬನ್ನಿ..
ಒಂದು ಆಲೂಗಡ್ಡೆಯನ್ನ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಸ್ವಚ್ಛಗೊಳಿಸಿದ ಆಲೂವಿನ ಸಿಪ್ಪೆ ತೆಗೆದು, ಸಣ್ಣಗೆ ತುರಿದುಕೊಳ್ಳಿ. ನಂತರ ಒಂದು ಸ್ವಚ್ಛವಾದ ಬಿಳಿ ಬಟ್ಟೆಯಲ್ಲಿ ಬಳಸಿ, ಆಲೂ ಜ್ಯೂಸ್ ತೆಗಿಯಿರಿ. ಇದನ್ನ ಒಂದು ಸಣ್ಣ ಬೌಲ್‌ನಲ್ಲಿರಿಸಿ. ಅರ್ಧ ಟೊಮೆಟೋವನ್ನ ತುರಿದು, ಅದರ ರಸ ತೆಗಿಯಿರಿ. ಇದೆರಡು ರಸವನ್ನ ಮಿಕ್ಸ್ ಮಾಡಿ. ಇದಕ್ಕೆ ಒಂದೂವರೆ ಚಮಚ ಮುಲ್ತಾನಿ ಮಿಟ್ಟಿ, ಒಂದು ಚಮಚ ಗಾಳಿಸಿ, ಕ್ಲೀನ್ ಮಾಡಿದ ಕಡಲೆ ಹಿಟ್ಟು ಸೇರಿಸಿ, ಮಿಕ್ಸ್ ಮಾಡಿ. ಇದಕ್ಕೆ ಒಂದು ಸ್ಪೂನ್ ನಿಂಬೆ ರಸ ಅಥವಾ ರೋಸ್‌ವಾಟರ್ ಮಿಕ್ಸ್ ಮಾಡಿ. ಈ ಪೇಸ್ಟ್‌ನ್ನ 5 ನಿಮಿಷ ಬದಿಗಿರಿಸಿ.
ನಂತರ ಮುಖವನ್ನು ಸ್ವಚ್ಛವಾಗಿ ತೊಳೆದು, ಮೂರು ಲೇಯರ್ ಪೇಸ್ಟ್‌ನ್ನ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು, ಉಗುರು ಬೆಚ್ಚಗಿನ ನೀರಿನಿಂದ ವಾಶ್ ಮಾಡಿ. ಎರಡು ವಾರಕ್ಕೊಮ್ಮೆ ಹೀಗೆ ಮಾಡಿದ್ರೆ ಸಾಕು.
ಆಲೂ ನ್ಯಾಚುರಲ್ ಸ್ಕಿನ್ ಲೈಟ್ನರ್ ಆಗಿದ್ದು, ನಿಮ್ಮ ಮುಖದ ಕಾಂತಿ ಹೆಚ್ಚಿಸುವಲ್ಲಿ ಸಹಾಯ ಮಾಡತ್ತೆ. ಟೊಮೆಟೋ, ನಿಂಬೆರಸ, ಮುಲ್ತಾನಿ ಮಿಟ್ಟಿ, ಕಡಲೆ ಹಿಟ್ಟು ಇವೆಲ್ಲವೂ ತ್ವಚೆಗೆ ಉತ್ತಮವಾಗಿದೆ. ನೀವು ಯಾವುದೇ ಫೇಸ್‌ಪ್ಯಾಕ್, ಫೇಶಿಯಲ್, ಅಥವಾ ಮುಖಕ್ಕೆ ಸಂಭಂದಿಸಿದ ಪೇಸ್ಟ್ ಹಚ್ಚುವ ಮುನ್ನ, ಮುಖವನ್ನ ಕ್ಲೀನ್ ಆಗಿ ತೊಳೆದುಕೊಳ್ಳಿ. ನಂತರ ಇದನ್ನ ಅಪ್ಲೈ ಮಾಡಿ. ಆದ್ರೆ ನೆನಪಿರಲಿ, ನಿಮ್ಮ ಮುಖಕ್ಕೆ ಆಲೂ ಬಳಸಿದ್ರೆ, ನಿಮಗೆ ಅಲರ್ಜಿ ಆಗತ್ತೆ ಎಂದಾದ್ದಲ್ಲಿ, ಈ ಬಗ್ಗೆ ವೈದ್ಯರ ಬಳಿ ವಿಚಾರಿಸಿ, ನಂತರ ಬಳಸುವುದು ಉತ್ತಮ.