ಸದ್ಯ ಬೇಸಿಗೆಗಾಲ ಆರಂಭವಾಗಿದೆ. ಈ ವೇಳೆ ನಾವು ದೇಹಕ್ಕೆ ತಂಪು ನೀಡುವ ಪಾನೀಯವನ್ನ ಕುಡಿಯಬೇಕು. ಹಾಗಾಗಿ ಇಂದು ನಾವು ದೇಹಕ್ಕೆ ತಂಪು ನೀಡುವ ರಾಗಿ ಮಿಲ್ಕ್ ಶೇಕ್ ರೆಸಿಪಿಯನ್ನ ತಿಳಿಸಿಕೊಡಲಿದ್ದೇವೆ. ಇದು ಬರೀ ಆರೋಗ್ಯಕ್ಕಷ್ಟೇ ಒಳ್ಳೆಯದಷ್ಟೇ ಅಲ್ಲದೇ, ರುಚಿಕರವೂ ಆಗಿದೆ. ಹಾಗಾದ್ರೆ ರಾಗಿ ಮಿಲ್ಕ್ ಶೇಕ್ ಮಾಡಲು ಬೇಕಾಗುವ ಸಾಮಗ್ರಿಗಳೇನು..? ಇದನ್ನ ಮಾಡೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಂದು ಕಪ್ ರಾಗಿ, 10ರಿಂದ 15 ಬಾದಾಮಿ, ಬೆಲ್ಲ ಮತ್ತು ನೀರು. ಇವಿಷ್ಟು ರಾಗಿ ಮಿಲ್ಕ್ ಶೇಕ್ ಮಾಡಲು ಬೇಕಾಗುವ ಸಾಮಗ್ರಿ. ಮೊದಲು ರಾಗಿ ಮತ್ತು ಬಾದಾಮಿಯನ್ನ ಚೆನ್ನಾಗಿ ತೊಳೆದು ಒಂದು ಗಂಟೆ ನೆನೆಸಿಡಿ. ಅದನ್ನ ಮತ್ತೆ ಚೆನ್ನಾಗಿ ತೊಳೆದು, ಮಿಕ್ಸಿ ಜಾರ್‌ಗೆ ಹಾಕಿ, ನುಣ್ಣಗೆ ರುಬ್ಬಿಕೊಳ್ಳಿ. ಈಗ ಒಂದು ಬಟ್ಟೆ ಸಹಾಯದಿಂದ ರುಬ್ಬಿಕೊಂಡ ರಾಗಿಯಿಂದ ಹಾಲನ್ನು ತೆಗಿಯಿರಿ.
ಈ ಹಾಲಿಗೆ ಬೆಲ್ಲ ಅಥವಾ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿದ್ರೆ, ರಾಗಿ ಮಿಲ್ಕ್ ಶೇಕ್ ರೆಡಿ. ನಿಮಗೆ ಬೇಕಾದ್ದಲ್ಲಿ ಇದನ್ನ ಫ್ರಿಜ್‌ನಲ್ಲಿರಿಸಿ, ಸವಿಯಬಹುದು. ಆದ್ರೆ ಇದನ್ನ ಫ್ರಿಜ್‌ನಲ್ಲಿರಿಸುವ ಬದಲು, ಹಾಗೆ ಕುಡಿದರೆ ಉತ್ತಮ. ಮತ್ತು ಆರೋಗ್ಯಕರ.