Recipe: ಚಪಾತಿ ಮಾಡಿದಾಗ, ಸದಾ ಆಲೂಗಡ್ಡೆ, ಬದನೆಕಾಯಿ, ಬೆಂಡೇಕಾಯಿ ಪಲ್ಯ ಮಾಡಿ ಮಾಡಿ ಬೋರ್ ಬಂದಿದೆಯಾ..? ಹಾಗಾದ್ರೆ ಇಂದು ನಾವು ಹೇಳುವ ಈರುಳ್ಳಿ ಕರಿ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ. ಹಾಗಾದ್ರೆ ಇದನ್ನು ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ..
10 ರಿಂದ 15 ಚಿಕ್ಕ ಚಿಕ್ಕ ಈರುಳ್ಳಿ ತೆಗೆದುಕೊಳ್ಳಿ. ತುಂಬಿಸಿದ ಬದನೆಕಾಯಿ ಮಾಡುವಾಗ ಹೇಗೆ ಅದನ್ನು 4 ತುಂಡುಗಳಾಗಿ ಮಾಡುತ್ತಿರೋ, ಅದೇ ರೀತಿ ಈರುಳ್ಳಿಯನ್ನೂ ನಾಲ್ಕು ತುಂಡುಗಳಾಗಿ ಮಾಡಿ. ಈಗ ಪ್ಯಾನ್ ಬಿಸಿ ಮಾಡಿ, ನಾಲ್ಕು ಸ್ಪೂನ್ ಎಣ್ಣೆ ಹಾಕಿ, ಇದು ಬಿಸಿಯಾದ ಬಳಿಕ ಒಂದು ಸ್ಪೂನ್ ಜೀರಿಗೆ, 10 ಕರಿಬೇವು, 6ರಿಂದ 7 ಬೆಳ್ಳುಳ್ಳಿ ಚಿಕ್ಕ ಚಿಕ್ಕ ತುಂಡುಗಳಾಗಿಸಿದ್ದು, ಚಿಕ್ಕ ತುಂಡು ತುರಿದ ಹಸಿ ಶುಂಠಿ ಇವಿಷ್ಟನ್ನು ಹಾಕಿ ಹುರಿಯಿರಿ. ಈಗ ಚಿಕ್ಕದಾಗಿ ಹೆಚ್ಚಿದ ಒಂದು ದೊಡ್ಡ ಈರುಳ್ಳಿ, ಚಿಟಿಕೆ ಸಕ್ಕರೆ ಹಾಕಿ ಹುರಿಯಿರಿ. ಈಗ ಇದಕ್ಕೆ ಬೇಯಿಸಿ ಪ್ಯೂರಿ ತೆಗೆದ 3 ಟೊಮೆಟೋ ಹಾಕಿ ಹುರಿಯಿರಿ. ಬಳಿಕ ಚಿಟಿಕೆ ಅರಿಶಿನ, 1 ಸ್ಪೂನ್ ಖಾರದ ಪುಡಿ, ಅರ್ಧ ಸ್ಪೂನ್ ಜೀರಿಗೆ ಪುಡಿ, ಧನಿಯಾ ಪುಡಿ, ಗರಂ ಮಸಾಲೆ, ಇವನ್ನೆಲ್ಲ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಇದಕ್ಕೆ ಅರ್ಧ ಕಪ್ ಗಟ್ಟಿ ಮೊಸರು ಹಾಕಿ 2 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಈಗ ಈಗಾಗಲೇ ಕತ್ತರಿಸಿಟ್ಟ ಈರುಳ್ಳಿ, 2 ಹಸಿಮೆಣಸು, ಒಂದು ಸ್ಪೂನ್ ಸಕ್ಕರೆ, ಉಪ್ಪು, ನೀರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಮಂದ ಉರಿಯಲ್ಲಿ ಇದನ್ನು 5 ನಿಮಿಷ ಬೇಯಿಸಿ. ರೆಡಿಯಾದ ಬಳಿಕ ಗ್ಯಾಸ್ ಆಫ್ ಮಾಡಿ, ಕೊತ್ತೊಂಬರಿ ಸೊಪ್ಪು ಸೇರಿಸಿ, ಸವಿಯಲು ಕೊಡಿ.
ಡಾರ್ಕ್ ಚಾಕೋಲೇಟ್ ಸೇವನೆ ಎಷ್ಟು ಮಾಡಬೇಕು..? ಇದರಿಂದಾಗುವ ಆರೋಗ್ಯ ಲಾಭವೇನು..?