Dharwad News: ಧಾರವಾಡ: ಕಿತ್ತೂರು ಹೊರವಲಯದಲ್ಲಿ ಸಚಿವ ಸಂತೋಷ್ ಲಾಡ್ ಮತ್ತು ಶಾಸಕ ವಿನಯ್ ಕುಲಕರ್ಣಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದ ಕೈ ಅಭ್ಯರ್ಥಿ ಪರ ಪ್ರಚಾರ ಹಿನ್ನೆಲೆ, ಕಿತ್ತೂರು ಬಳಿ ವಿನಯ್ ಕುಲಕರ್ಣಿ ಪ್ರಚಾರ ಸಭೆ ಕರೆದಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ವಿನಯ್ ಕುಲಕರ್ಣಿ, ಶಿಗ್ಗಾಂವಿ ಭಾಗ ಸೇರಿದಂತೆ ಎಲ್ಲ ಕಡೆಯಲ್ಲೂ ಬದಲಾವಣೆ ಜನ ಬಯಸಿದ್ದಾರೆ. 4 ಬಾರಿ ನಿರಂತರ ಗೆಲುವು ಸಾಧಿಸಿದ್ದಾರೆ. ಸೇಡಿನ ರಾಜಕಾರಣ ಬಿಟ್ಟರೆ ಜನರನ್ನ ತಿಳಿಯುವುದನ್ನ ಬಿಟ್ಟರೆ ಏನು ಮಾಡಿಲ್ಲ. ನಮ್ಮ ಕೇಳಿದ ಹಾಗೆ ಅವರನ್ನ ಕೇಳಿದ್ರೆ ಮೀಡಿಯಾ ಬಂದ್ ಆಗುತ್ತೆ. ಜನರು ನಮ್ಮ ಪರವಾಗಿ ಇದ್ದಾರೆ. ನುಡಿದಂತೆ ಅವರು ನಡೆದಿಲ್ಲ. ನಾವು ನುಡಿದ ಹಾಗೆ ನಡೆಸಿದ್ದೇವೆ ಎಂದು ವಿನಯ್ ಕುಲಕರ್ಣಿ ಹೇಳಿದ್ದಾರೆ.
ಸ್ವಪಕ್ಷದಲ್ಲಿ ಜೋಶಿ ಕಿತ್ತು ಹಾಕಬೇಕು ಅಂತ ಅವರೇ ನಿರ್ಧಾರ ಮಾಡಿದ್ದಾರೆ. ಜೋಶಿಯವರು ಲಿಂಗಾಯತ ಸಮಾಜವನ್ನ ತುಳಿಯುವ ಕಾರ್ಯ ಮಾಡಿದ್ದಾರೆ. ಯಡಿಯೂರಪ್ಪ ರನ್ನ ಕಿತ್ತು ಹಾಕಿದ್ದೆ ಜೋಶಿಯವರು. ಮುನೇನಕೊಪ್ಪ, ಚಿಕ್ಕನಗೌಡರ ಎಲ್ಲಿದ್ದಾರೆ ಈಗ. ಬಿಜೆಪಿ ಯಲ್ಲಿನ ಕಚೇರಿಯ ಅಂಬೇಡ್ಕರ್ ಪೋಟೋ ಕಿತ್ತು ಹಾಕುತ್ತಾರೆ. ಸ್ವಾಮೀಜಿಗಳಿಗೆ ಪಾಕೆಟ್ ಕೊಡುತ್ತಿರುವ ರೆಕಾರ್ಡ್ ಸಹಿತ ಕೊಡುತ್ತೇವೆ. ಶಾಲ್ ಹಾಕಿ ಮಾಲೆ ಹಾಕಿ ದೊಡ್ಡ ಪಾಕೆಟ್ ಕೊಡುತ್ತಿದ್ದಾರೆ. ಜೋಶಿಯವರು ಬಹಳಷ್ಟು ದುಡ್ಡು ಮಾಡಿದ್ದಾರೆ ಎಂದು ವಿನಯ್ ಆರೋಪಿಸಿದ್ದಾರೆ.
ಈ ಬಾರಿ ಅತಿ ಹೆಚ್ಚು ಒಲವು ನಮ್ಮ ಮೇಲಿದೆ. ಹಿಂದಿ ಪ್ರಚಾರ ಸಭೆ ನಮ್ಮಿಂದ ಕಿತ್ತುಕೊಂಡರು. ಅಲ್ಲಿದ್ದವರು ಯಾರು ಮೂಲ ಮೆಂಬರ್ ಗಳಲ್ಲ. ಬಿಜೆಪಿ ಯಲ್ಲಿರುವ ಲಿಂಗಾಯತರು ಮೂರ್ಖರು ಎಂದು ವಿನಯ್ ಕುಲಕರ್ಣಿ ಹೇಳಿದ್ದಾರೆ.
ಮೊದಲ ಬಾರಿ ಅಯೋಧ್ಯೆಗೆ ಭೇಟಿ ನೀಡಿ ರಾಮನ ದರ್ಶನ ಮಾಡಿದ ದ್ರೌಪದಿ ಮುರ್ಮು